Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ: ಸಾಹಿತಿ ಹಾಗೂ ಸಾಮಾಜಿಕ ಚಿಂತಕರೂ ಆಗಿರುವ ಉಮೇಶ್ ಬಾಬು ಮಠದ್ ಉಬಾಮ ಎಂದೇ ಚಿರಪರಿಚಿತರಾಗಿರುವ ಇವರು ಮೂಲತಹಃ ವಿಜಯನಗರ ಜಿಲ್ಲೆಯವರಾಗಿದ್ದು ಕಳೆದ ಆರು ವರ್ಷಗಳಿಂದ ಬೀದರ ಜಿಲ್ಲೆಯಲ್ಲಿ ನೆಲೆಸಿ ತನ್ನ ಮೂನಚಾದ ಸಾಮಾಜಿಕ ಕಳಕಳಿಯುಳ್ಳ ವಿವಿಧ ಪ್ರಕಾರದ ಕಥೆ, ಕವನ, ಲೇಖನ, ಅಂಕಣ ಬರಹಗಳು, ಆಧುನಿಕ ವಚನಗಳನ್ನು ರಚಿಸುತ್ತಾ ನಾಡಿನ ಅನೇಕ ಪತ್ರಿಕೆಯಲ್ಲಿ ಪ್ರಕಟಣೆಗೊಳಿಸಿರುತ್ತಾರೆ, ಇಷ್ಟೇ ಅಲ್ಲದೆ ಈಗಾಗಲೆ ನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಕಾದಂಬರಿಯೊಳಗೊಂಡಂತೆ ಮೂರು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ದಾಸ ಸಾಹಿತ್ಯದಲ್ಲಿ ವಿಶೇಷ ಸಂಶೋಧನೆಯಲ್ಲಿ ತೊಡಗಿರುವ ಇವರು ಬೀದರನ ನ್ಯಾಯಾಂಗ ಇಲಾಖೆಯ ನೌಕರರಾಗಿ ಕೆಲಸ ಮಾಡುತ್ತಾ ಅನೇಕ ಕಾನೂನು ಅರಿವು ಕಾರ್ಯಕ್ರಮಗಳಲ್ಲಿ
ಉಪನ್ಯಾಸ ಮಾಡಿರುತ್ತಾರೆ,
ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ಆಯೋಜಿಸಿರುವುದಲ್ಲದೆ ನಾನಾ ಸಂಘಟನೆಯ ಪದಾಧಿಕಾರಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತನ್ನ ವಿಭಿನ್ನ ಬರಹಗಳ ಮೂಲಕ ನಾಡಿನಾದ್ಯಾಂತ ಛಾಪು ಮೂಡಿಸಿರುವ ಯುವ ಸಾಹಿತಿ ಉಮೇಶ್ ಬಾಬು ಮಠದ (ಉಬಾಮ) ರವರಿಗೆ ರಾಜ್ಯದ ಪ್ರತಿಷ್ಟಿತ ಸಂಸ್ಥೆಯಾದ ವಿಶ್ವ ಕನ್ನಡಿಗರ ಸಂಸ್ಥೆ (ರಿ) ಇವರ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳನ್ನು ಹಾಗೂ ಕಾನೂನು ಸೇವೆಗಳನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ಸುಬ್ಬಣ್ಣ ಕರಕನಳ್ಳಿ
ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೀದರನ ಜಿಲ್ಲಾ ರಂಗಮಂದಿರದಲ್ಲಿ ದಿ.27-11-2021ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು ಹಾಗೂ ಸಂಸ್ಥೆಯ ಪಧಾದಿಕಾರಿಗಳು ಹಾಗೂ ಅನೇಕ ಸಾಧಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಪ್ರಶಸ್ತಿಗೆ ಭಾಜನರಾಗಿರುವ ಉಬಾಮರವರಿಗೆ ಜಿಲ್ಲೆಯ ಹಿರಿಯ ಸಾಹಿತಿಗಳಾದ ಡಾ. ಗವಿಸಿದ್ಧಪ್ಪ ಹೆಚ್ ಪಾಟೀಲ, ಅರವಿಂದ ಕುಲಕರ್ಣಿ, ಡಾ.ಜಯದೇವಿ ಗಾಯಕವಾಡ, ಬಸವರಾಜ ದಯಸಾಗರ, ಸಿದ್ಧಾರ್ಥ್ ಮಿತ್ರ, ಜಗದೀಶ್ವರ್ ದೊರೆ,ಕೆ.ಪಿ.ಎಂ.ಗಣೇಶಯ್ಯ, ಕೋರ್ಲಕುಂಟೆ ತಿಪ್ಪೇಸ್ವಾಮಿ, ದಿಲೀಪ್ ಗಾದಿಗಿ, ಪ್ರಕಾಶ ಸಿಂಧೆ, ಪರಿಪೂರ್ಣ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷರಾದ ಶ್ರೀಮತಿ ವಿಜಯಕುಮಾರಿ ಕೆ.
ಡಾ.ಮೇಘರಾಜ್, ಉಷಾಸುನಿಲ್ ಕುಮಾರ, ಮಮತಾ, ರಾಮರೆಡ್ಡಿ, ಸುಭಾಷ್ ಸಿರಿಕೆ, ದಿನೇಶ್ ಮೈಲನಹಳ್ಳಿ, ಪತ್ರಕರ್ತ ದಯಾನಂದ ಸಜ್ಜನ ಲಕ್ಷ್ಮೀಮಹಾಂತೇಶ, ಉಪನ್ಯಾಸಕ ರವಿಕುಮಾರ ಮತ್ತಿತರರು ಹರ್ಷ ವ್ಯಕ್ತಪಡಿಸಿದರು.