Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

 

ಬೀದರ್

ದ್ವಿತೀಯ ಪಿಯು ಪರೀಕ್ಷೆ ಬೇಡ: ಅರಳಿ

ದ್ವಿತೀಯ ಪಿಯುಸಿಯ 2021-22ನೇ ಸಾಲಿನ ಮಧ್ಯಾವಧಿ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆಸಲು ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ವಿಧಾನ ಸದಸ್ಯಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ. ನಿನ್ನೆರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಿದ್ಯಾರ್ಥಿಗಳನ್ನು ಹಾಗೆ ಪಾಸ್ ಮಾಡಿ, ಈಗಿನ ವಿದ್ಯಾರ್ಥಿಗಳಿಗೆಗೆ ಪರೀಕ್ಷೆ, ಕೋವಿಡ್ ಕಾರಣ ಪಿಯುಸಿ ಪ್ರಥಮ ವರ್ಷದ ತರಗತಿಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ

ಮೂರು-ನಾಲ್ಕು ತಿಂಗಳು ತಡವಾಗಿ ತರಗತಿಗಳು ಪ್ರಾರಂಭವಾಗಿವೆ. ಮಧ್ಯಾವಧಿ ಪರೀಕ್ಷೆಗೆ ಇನ್ನೂ ಪಠ್ಯಕ್ರಮಗಳು ಮುಗಿದಿಲ್ಲ. ಇಂತಹ ಸಂದರ್ಭದಲ್ಲಿ ಮಂಡಳಿ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳ ಮೇಲೆ ಬಹಳ ಒತ್ತಡ ಹೇರಿದಂತಾಗಲಿದೆ ಎಂದು ಹೇಳಿದ್ದಾರೆ.