Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

‘ಸಂಘಟಕ ರಾಜಕುಮಾರ ಹೆಬ್ಬಾಳೆ ಗೆಲ್ಲಿಸಿ’

 

ಬೀದರ್‌: ಪರಿಷತ್ತಿನ ಹೆಸರಿನಲ್ಲಿ ರಾಜಕೀಯ ಮಾಡುವ ಯಾವುದೇ ವ್ಯಕ್ತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಚುನಾವಣೆಯಲ್ಲಿ ಮತ ನೀಡಬಾರದು. ಕನ್ನಡ ಮತ್ತು ಜನಪದ ಸಂಘಟಕ ರಾಜಕುಮಾರ ಹೆಬ್ಬಾಳೆ ಅವರಿಗೆ ಬೆಂಬಲ ನೀಡಿ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಸಾಹಿತಿ ಜಯದೇವಿ ಗಾಯಕವಾಡ ಮನವಿ ಮಾಡಿದರು.

ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಸುರೇಶ ಚನಶೆಟ್ಟಿ ರಬ್ಬರ್ ಸ್ಟ್ಯಾಂಪ್‌ನಂತೆ ಕೆಲಸ ಮಾಡಿದ್ದಾರೆ. ವಾಸ್ತವದಲ್ಲಿ ಬಸವರಾಜ ಬಲ್ಲೂರ ಅವರೇ ಎಲ್ಲವನ್ನೂ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸಾಹಿತ್ಯ ಗೊತ್ತಿದ್ದವರಿಗೆ ಮಾತ್ರ ಬೆಂಬಲಿಸಬೇಕು. ಪ್ರತಿಭಾವಂತರಿಗೆ ಅವಕಾಶ ನೀಡಬೇಕು ಎಂದು ನಗರದ ಹೊಟೇಲ್ ಉಡುಪಿ ಕೃಷ್ಣದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಸಂಸ್ಕೃತಿ ಸಂರಕ್ಷಕ, ಕನ್ನಡ ಸಾಹಿತ್ಯ ಪರಿಷತ್ತನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವಿರುವ ರಾಜಕುಮಾರ ಹೆಬ್ಬಾಳೆ ಅವರಿಗೆ ಮತದಾರರು ಅವಕಾಶ ಕಲ್ಪಿಸಬೇಕು’ ಎಂದರು.ಜನಪದ ವಿದ್ವಾಂಸ ಎಚ್.ಕಾಶೀನಾಥರೆಡ್ಡಿ, ಎಸ್.ಬಿ.ಕುಚಬಾಳ ಇದ್ದರು.