Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ. ಸ್ಪರ್ಧಾ ಕಣದಲ್ಲಿರುವ ನಾಲ್ವರ ಪೈಕಿ ಒಬ್ಬರು ಮಾತ್ರ ಹಿರಿಯರಿದ್ದು, ಮೂವರು ಯುವಕರೇ ಇದ್ದಾರೆ.

ಸಂಘಟನೆ, ಸಾಹಿತ್ಯ ಹಾಗೂ ಸಂಸ್ಕೃತಿಯ ವಲಯದಲ್ಲಿ ಕೈಗೊಂಡಿರುವ ಕಾರ್ಯಗಳು ಹಾಗೂ ಸಾಧನೆಯನ್ನು ಪ್ರಸ್ತಾಪಿಸಿ ಸದಸ್ಯರಲ್ಲಿ ಮತ ಯಾಚಿಸುತ್ತಿದ್ದಾರೆ. ಬಿರುಸಿನ ಪ್ರಚಾರದ ಮಧ್ಯೆಯೇ ಒಂದಿಷ್ಟು ಬಿಡುವು ಮಾಡಿಕೊಂಡು ಅಭ್ಯರ್ಥಿಗಳು ವಾಹಿನಿಯೊಂದಿಗೆ ಮಾತನಾಡಿದರು.

ಇನ್ನೊಂದು ಅವಧಿಗೆ ಅವಕಾಶ ಕೊಡಿ: ಚನಶೆಟ್ಟಿ

©ಎಂದು ಹೇಳುತ್ತಾರೆ.

ಹೊಸಬರಿಗೆ ಅವಕಾಶ ಕಲ್ಪಿಸಿ’
ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರಾಜಕುಮಾರ ಹೆಬ್ಬಾಳೆ ಕನ್ನಡ ಸಂಘ ಕಟ್ಟಿಕೊಂಡು ಕನ್ನಡದ ಜಾಗೃತಿ ಮೂಡಿಸುತ್ತಿದ್ದಾರೆ. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ಕೇಂದ್ರ ಸರ್ಕಾರದ ಸಾಂಸ್ಕೃತಿಕ, ಸಂಪನ್ಮೂಲ ತರಬೇತಿ ಕೇಂದ್ರದ ಸದಸ್ಯರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ತಾವು ಮಾಡಿರುವ ಕೆಲಸಗಳು ಕೈಹಿಡಿಯಲಿವೆ ಎಂಬ ವಿಶ್ವಾಸದಿಂದ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ್ದಾರೆ.

‘ಒಂದು ಬಾರಿ ಅಧ್ಯಕ್ಷರಾದವರು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಮತದಾರರು ಸಹ ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಚುನಾವಣೆಯಲ್ಲಿ ಮತದಾರರು ತಮ್ಮನ್ನು ಬೆಂಬಲಿಸುವ ವಿಶ್ವಾಸ ಇದೆ’ ಎಂದು ರಾಜಕುಮಾರ ಹೆಬ್ಬಾಳೆ ಹೇಳುತ್ತಾರೆ.

ಬೀದರ್‌ನ ಚಿಕ್ಕಪೇಟೆ ಬಳಿಯ ಸಾಂಸ್ಕೃತಿಕ ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ಆಯ್ಕೆಯಾದರೆ ಅದನ್ನು ಪೂರ್ಣಗೊಳಿಸಲು ಆದ್ಯತೆ ನೀಡುವೆ’ ಎಂದರು.

  1. ಕನ್ನಡದ ಕಾರ್ಯಕ್ರಮಗಳಿಗಾಗಿ ದತ್ತಿ ಸ್ಥಾಪನೆ, ಕೃತಿ ಪ್ರಕಟಣೆಗೆ ಪ್ರೋತ್ಸಾಹ, ಕೇಂದ್ರ ಸಂಗೀತ, ನಾಟಕ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಆಯೋಜನೆ, ರಾಷ್ಟ್ರೀಯ ಉತ್ಸವ ಆಯೋಜನೆ, ಅಂತರರಾಷ್ಟ್ರೀಯ ಜಾನಪದ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ ಹಾಗೂ ರಾಷ್ಟ್ರೀಯ ಪುಸ್ತಕ ಮೇಳ ಆಯೋಜಿಸುವ ಧ್ಯೇಯ ನನ್ನದಾಗಿದೆ ಎಂದು ತಿಳಿಸಿದರು.

ಶಿಕ್ಷಕರಾಗಿರುವ ಸಿದ್ದಲಿಂಗಯ್ಯ ಭಂಕಲಗಿ ಅವರು ಕನ್ನಡತಾಯಿ ಭುವನೇಶ್ವರಿ ಸೇವೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.