Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಜಿಲ್ಲೆಯಲ್ಲಿ ರಸಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಿ : ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ

ಬೀದರ್: ಜಿಲ್ಲೆಯಲ್ಲಿ ರಸಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ.

 

ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರಿಗೆ ನಗರದಲ್ಲಿ 13 ಬೇಡಿಕೆಗಳ ಒಳಗೊಂಡ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

 

ಜಿಲ್ಲೆಯಲ್ಲಿ ಸಿಪೆಟ್ ಸ್ಥಾಪಿಸಬೇಕು. 2013 ರಲ್ಲಿ ಜಿಲ್ಲೆಗೆ ಮಂಜೂರಾದ ಮೌಲಾನಾ ಆಜಾದ್ ನ್ಯಾಷನಲ್‌ ಉರ್ದು ವಿಶ್ವವಿದ್ಯಾಲಯದ ಸೆಟ್‌ಲೈಟ್ ಕೇಂದ್ರ ಶೀಘ್ರ ಆರಂಭಿಸಬೇಕು. ಉಡಾನ್ ಯೋಜನೆಯಡಿ ಪ್ರಾರಂಭವಾಗಿದ್ದ ಬೀದರ್‌-ಬೆಂಗಳೂರು ನಾಗರಿಕ ವಿಮಾನಯಾನ ಸೇವೆ ಬಂದ್ ಆಗಿರುವ ಕಾರಣ, ಇಂಡಿಗೊ ಅಥವ ಸ್ಟಾರ್ ಏಸ್ ಸಂಸ್ಥೆಗಳಿಂದ ಬೀದರ್-ಬೆಂಗಳೂರು ಮಧ್ಯ ವಿಮಾನಯಾನ ಸೇವೆ ಪ್ರಾರಂಭಿಸಬೇಕು.

 

ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ತಮಗೆ ಮಹತ್ವದ ಸ್ಥಾನ ನೀಡಿದ್ದರಿಂದ ಯುವಕರಲ್ಲಿ ಜಿಲ್ಲೆಯ ಅಭಿವೃದ್ದಿ ಕುರಿತು ಒಲವು ಮೂಡಿದೆ ಎಂದು ತಿಳಿಸಿದರು.