Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ನಾಗಮಾರಪಳ್ಳಿಯವರ ಸ್ವ_ಗ್ರಾಮದಲ್ಲಿ  ಸ್ವ-ಸಹಾಯ ಸಂಘದ ದಿನಾಚರಣೆ

ಜಸ್ಟ್ ಔರಾದ : ತಾಲ್ಲೂಕಿನ ನಾಗಮಾರಪಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ನಿಮಿತ್ಯ ಸ್ವ-ಸಹಾಯ ಸಂಘದ ದಿನ ಆಚರಿಸಲಾಯಿತು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಬಸವರಾಜ ಹೆಬ್ಬಾಳೆ  ಕಾರ್ಯಕ್ರಮ ಉದ್ಘಾಟಿಸಿ ದ್ದರು ,

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80 ಗುಂಪುಗಳಿದ್ದು, 300 ಜನ ಮಹಿಳಾ ಸದಸ್ಯರು ಸ್ವ-ಸಹಾಯ ಸಂಘದಿಂದ ಸಾಲ ಪಡೆದುಕೊಂಡು ತಮ್ಮ ತಮ್ಮ ಉದ್ಯೋಗದೊಂದಿಗೆ ಸಂಘ ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಬಸವರಾಜ ಹೆಬ್ಬಾಳೆ  ಮಾಹಿತಿ ನೀಡಿದ್ದರು ,

ನಂತರ ಮಾತಾನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪ ಕನಾಳೆ

ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವಸ್ವ-ಸಹಾಯ ಸಂಘ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಸಾಧನೆ ಮಾಡಿದೆ. ಪ್ರತಿಯೊಬ್ಬ ಸದಸ್ಯರು ಸ್ವಸಹಾಯ ಸಂಘದ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕತೆ ಹೆಚ್ಚಿಸಿಕೊಳ್ಳುವಂತೆ ಸದಸ್ಯರಿಗೆ ಸಲಹೆ ನೀಡಿದರು.

ಮಹಿಳೆಯರು ಡಾ. ಗುರುಪಾದಪ್ಪ ನವರು ಮಾಡಿಕೊಟ್ಟ ಅನುಕೂಲ ಔರಾದ್ ತಾಲ್ಲೂಕಿನ ನಾಗಮಾರಪಳ್ಳಿಯ ಪ್ರಾಥಮಿಕ ಸ್ವಸಹಾಯ ಸಂಘ ಪಡೆದುಕೊಂಡು ಮುಂದೆ ಬರುವಂತೆ ಕ್ಷೇತ್ರ ಸಹಾಯಕರಾದ  ,ಮಹೇಶ್ ಕುಮಾರ್ ಬಿರಾದರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು ,

ಇದೇ ವೇಳೆ ಮಾತನಾಡಿದ ಪ್ರಾಥಮಿಕ ಸ್ವಸಹಾಯ ಸಂಘದ ಸದಸ್ಯೆಯೊಬ್ಬರು  ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವ ಸ್ವ-ಸಹಾಯ ಸಂಘ ಅನೇಕ ಮಹಿಳೆಯರ ಬದುಕಿಗೆ ಅಸರೆಯಾಗಿದೆ,ಅವರ ಸಮಾಜಮುಖಿ ಕಾರ್ಯ ಇಂದಿಗೂ ಅನೇಕ ಕುಟುಂಬಗಳಿಗೆ ವರದಾನವಾಗಿವೆ

ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘಗಳ ಸಿಬ್ಬಂದಿ,ಸದಸ್ಯರು,  ಕಾರ್ಯನಿರ್ವಾಹಕ ಕೃಷ್ಣಾರೆಡ್ಡಿ ಮಿನ್ನಂಪಲ್ಲೆ ,ವಿನೋದಕುಮಾರ,ಬಾಲಜಿ ಅಲಮಾಜೆ, ಶರವಕುಮಾರ ಪಾಟೀಲ್, ಹಾವಪ್ಪ ಗೋಡೆ ಸೇರಿದಂತೆ ನಾಗಮಾರಪಳ್ಳಿ ಗ್ರಾಮದ ಹಿರಿಯರು ಸೇರಿದಂತೆ ಇತರರಿದ್ದರು.

ವರದಿ :ಹಣಮಂತ ದೇಶಮುಖ ಕರಂಜಿ ಕೆ

   ಮಾಲೀಕರು ಜಸ್ಟ್ ಬೀದರ.ಕಾಮ್