Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

 

ಬೀದರ್

ಜಿಲ್ಲೆಗೆ ಒಟ್ಟು 6 ಆಕ್ಸಿಜನ್ ಪ್ಲಾಂಟ್ ನೀಡಿರುವ ಪ್ರಧಾನಮಂತ್ರಿ

 

ಬೀದರ ಜಿಲ್ಲೆಗೆ ಮುಂಜೂರಾದ ಒಟ್ಟು 6 ಆಕ್ಸಿಜನ್ ಪ್ಲಾಂಟಗಳು ಈಗಾಗಲೆ ನಿರ್ಮಾಣಗೊಂಡಿದ್ದು, ಆದಷ್ಟೂ ಬೇಗ ಕಾರ್ಯರೂಪಕ್ಕೂ ಬರಲಿವೆ.

ಬೀದರ ಜಿಲ್ಲೆ ಸಂಭವನೀಯ ಕೋವಿಡ್- 3ನೇ ಅಲೆ ಎದುರಿಸಲು ಸರ್ವ ಸನ್ನದ್ಧವಾಗಿದೆಎಂದು ಕೇಂದ್ರ ಸಚಿವ ಬೀದರ ಸಂಸದ ಭಗವಂತ ಖೂಬಾ ಅವರು ತಿಳಿಸಿದ್ದಾರೆ. ಕೋವಿಡ್ 2ನೇ ಅಲೆಯಲ್ಲಿ ದೇಶವೆ ತೊಂದರೆಗೆ ಒಳಗಾಗಿತ್ತು. ಆಗ ಆಕ್ಸಿಜನ್ ಕೊರತೆ ಎಲ್ಲೆಡೆಉಂಟಾಗಿತ್ತು. ಅದರಂತೆ ಬೀದರ ನಿಮಿಷ್ಯಕ್ಕೆ 500 ಲೀಟರ್‌ ಆಕ್ಸಿಜನ್‌ಉತ್ಪಾದಿಸುವ)ಜಿಲ್ಲೆಯಲ್ಲಿಯೂ ಆಕ್ಸಿಜನ್ ಕೊರತೆಇತ್ತು, ಆ ಸಮಯದಲ್ಲಿ ಕೇಂದ್ರ ಸರ್ಕಾರದ ನೈಸರ್ಗಿಕ ಅನಿಲ್ ಮತ್ತು ಪೆಟ್ರೋಲಿಯಂ ಸಚಿವಾಲಯದಿಂದ ಸಿ.ಎಸ್. ಆರ್. ಅನುದಾನದಡಿ ಜಿಲ್ಲೆಯ ಭಾಲ್ಕಿ, ಔರಾದ,ಹುಮನಾಬಾದ ಮತ್ತುಬಸವಕಲ್ಯಾಣ ತಾಲೂಕಿಗೆ ಆಕ್ಸಿಜನ್ ಪ್ಲಾಂಟ ನಿರ್ಮಾಣ ಮಾಡಲು ಮಂಜೂರಾತಿ ನೀಡಿತ್ತು. ಹಾಗೆ ಬೀದರ ನಗರದ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮರ್ಕ ಕಂಪನಿಯ ವತಿಯಿಂದ ಸಿ. ಎಸ್. ಆರ್. ಅನುದಾನದಡಿ1 ಆಕ್ಸಿಜನ್ ಪ್ಲಾಂಟ್ (390 ಲೀಟರ್‌ ಪ್ರತಿ ನಿಮಿಷ್ಯಕ್ಕೆ ಆಕ್ಸಿಜನ್  ಪ್ಲಾಂಟ್‌ಉತ್ಪಾದಿಸುವ) ಪ್ಲಾಂಟ ಮಾಡಿಸಿತ್ತು.ಜೊತೆಗೆ ಪಿ. ಎಮ್. ಕೆರ್ಸ್ ಅನುದಾನದಡಿ ಬೀದರ ನಗರದ ಬೀಮ್ಸ್ ಆಸ್ಪತ್ರೆಯಲ್ಲಿ 1 ಆಕ್ಸಿಜನ್ ಪ್ಲಾಂಟ್ (1000 ಲೀಟರ ಪ್ರತಿ ನಿಮಿಷ್ಯಕ್ಕೆ ಆಕ್ಸಿಜನ್ ಉತ್ಪಾದನೆ) ಮಾಡುವ ಪ್ಲಾಂಟ ಮಂಜೂರಾಗಿತ್ತು. ಜಿಲ್ಲೆಗೆ ಒಟ್ಟು 6 ಆಕ್ಸಿಜನ್ ಪ್ಲಾಂಟ್ ನೀಡಿರುವ ಪ್ರಧಾನಮಂತ್ರಿಗಳಾದ ನರೇಂದ್ರಮೋದಿ, ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಚಿವಾಲಯದ ಪೂರ್ವ ಮಂತ್ರಿ ಧಮೇಂದ್ರ ಪ್ರಧಾನ ಹಾಗೂ ಹಾಲಿ ಸಚಿವರಾದ ಹರದೀಪ ಸಿಂಗ್‌ಪೂರಿ, ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಷಿಯವರಿಗೆ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು ತಿಳಿಯಪಡಿಸುವುದಾಗಿ ಕೇಂದ್ರ ಸಚಿವರಾದ ಭಗವಂತ ಖೂಬಾರವರು ತಿಳಿಸಿದ್ದಾರೆ.