Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಭಾಲ್ಕಿ ತಾಲೂಕಿನ ಗಡಿಯಲ್ಲಿ ಸುರೇಶ ಚನ್ನಶಟ್ಟಿ ಅಭೂತಪೂರ್ವ ಬೆಂಬಲ.

ಕಸಾಪ ಚುನಾವಣೆ ಭಾಲ್ಕಿ ಪ್ರಣಾಳಿಕೆ ಬಿಡುಗಡೆ.

ಗಡಿಯಲ್ಲಿ ಸುರೇಶ್ ಚೆನ್ನಶೆಟ್ಟಿ ಕ್ರಿಯಾಶೀಲ ವ್ಯಕ್ತಿಯಾಗಿದ್ದು ಕನ್ನಡಕ ಭವನ ನಿರ್ಮಾಣಕ್ಕೆ ಹಗಲು ಇರುಳು ದುಡ್ಡಿದ ವ್ಯಕ್ತಿ ಸುರೇಶ ಚನ್ನಶೇಟ್ಟಿ ಊರುಗೋಲಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಕಸಾಪ ಆಜೀವ ಸದಸ್ಯ, ನಾಗಭೂಷಣ ಮಾಮ್ಮಡಿ ಅವರು ಅಭಿಪ್ರಾಯಪಟ್ಟರು.ಮಂಗಳವಾರ ಪಟ್ಟಣದ ಮಲ್ಲಿಕಾರ್ಜುನ ಹಲ್ಮಗಡೆ ಅವರ ಕಚೇರಿಯಲ್ಲಿ ಕಸಾಪ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು ಅವರು, ಈ ಹಿಂದೆ ಬೀದರ್ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಸುರೇಶ್ ಅವರಿಗೆ ನಮ್ಮ ಗಡಿಭಾಗದಲ್ಲಿನ ಕನ್ನಡ ಸ್ಥಿತಿಗತಿ ಕುರಿತು ಚೆನ್ನಾಗಿ ಮಾಹಿತಿಯಿದ್ದು, ಮುಂದಾಲೋಚನೆಯಿಂದ ಹೆಜ್ಜೆ ಇಡುವ ಚೆನ್ನಶೆಟ್ಟಿ ಅವರಿಗೆ ಮತ ಚಲಾಯಿಸುವಂತೆ ಕರೆ ನೀಡಿದರು.


ಹಿರಿಯರಾದ ಸೂರ್ಯಕಾಂತ ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಯಾಶೀಲತೆಗೆ ಮತ್ತೊಂದು ಹೆಸರು ಸುರೇಶ್ ಚೆನ್ನಶೆಟ್ಟಿ ಅವರು ಅವಧಿಯಲ್ಲಿ ಜಿಲ್ಲೆಯಾದ್ಯಂತ ಅನೇಕ ಕನ್ನಡ ಕಾರ್ಯಕ್ರಮಗಳು ಮಾಡಿದ್ದಾರೆ. ಭಾಲ್ಕಿ ತಾಲೂಕಿನಲ್ಲಿ ಕೂಡ ಸೂರ್ಯಕಾಂತ ಸುಂಟೆ ಅವರ ತಂಡ ಉತ್ತಮ ಕೆಲಸ ಮಾಡಿದ್ದು ಇಂದು ಚೆನ್ನಶೆಟ್ಟಿ ಅವರಿಗೆ ವರವಾಗಲಿದೆ ಎಂದರು.ಅಭ್ಯರ್ಥಿ ಸುರೇಶ್ ಚೆನ್ನಶೆಟ್ಟಿ ಮಾತನಾಡಿ, ಕನ್ನಡವನ್ನು ಉಸಿರಾಗಿಸಿಕೊಂಡು ಅನೇಕ ಜನರು ನನಗೆ ಮಾರ್ಗದರ್ಶನ ಮಾಡಿದ್ದಾರೆ ಮುಂದೆಯು ಮಾಡಲಿದ್ದಾರೆ. ರಮೇಶ್ ಚಿದ್ರೆ ಮಲ್ಲಿಕಾರ್ಜುನ ಹಲ್ಮಡಗೆ ಸಂಗಮೇಶ ವಾಲೆ ಸಾರಥ್ಯದ ತಂಡ ಮಾಡಿರುವ ರಚನಾತ್ಮಕ ಕೆಲಸಗಳೇ ನನಗೆ ಚುನಾವಣೆಗೆ ಶ್ರೀರಕ್ಷೆಯಾಗಲಿದ್ದು, ಮುಂದೆಯು ಉತ್ತಮ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಸುಭಾಷ್ ಖಂಡ್ರೆ ಗದಗೇಪ್ಪಾ ಪಾಟೀಲ ಬಸವರಾಜ ಮಡಿವಾಳ ಸುರೇಶ್ ಕುಡತೆ ರವಿ ಬಿರಾದಾರ ಜ್ಯಾಂತಿ ಅಶೋಕ ಬಾವಗೆ ಸಂಗಮೇಶ ಹುಣ್ಣಜೆ ಸಂತೋಷ ಪಾಟೀಲ ಸಂಗಮೇಶ ಗುಮ್ಮೆ ಹಣಮಂತ ಕಾರಮುಂಗೆ ಕಾಶೀನಾಥ್ ಲದ್ದೆ ರಾಜಕುಮಾರ ಬಿರಾದಾರ ಪ್ರಭು ಡಿಗ್ಗೆ ಭಗವಾನ್ ವಲಂಡೆ ಗಜಾನನ ಮಳ್ಳಾ, ಜಗನ್ನಾಥ ಮೂಲಗೆ, ಬಿಎಂ ಅಮರವಾಡಿ, ಡಾ. ಶಾಲಿವಾನ ಉದಗಿರೆ, ಮಲ್ಲಿಕಾರ್ಜುನ ಸ್ವಾಮಿ, ಗುರುನಾಥ ದೇಶಮುಖ, ಬಸವರಾಜ ಮಸ್ಕಲೆ, ಶಿವಶಂಕರ ಟೋಕರೆ, ಸುರೇಶ ಪಾಂಡ್ರೆ, ಸೂರ್ಯಕಾಂತ ಕಳಸೆ, ಅಮೃತರಾವ ಬಿರಾದಾರ್, ಖಂಡೋಬಾ ಕಂಗಟೆ, ವಿರೇಶ ಅಲಮಾಜೆ, ಸಂದೀಪ ಪಾಟೀಲ್, ಜಗನ್ನಾಥ ದೇಶಮುಖ, ಆನಂದ ದ್ಯಾಡೆ, ಜ್ಞಾನೇಶ್ವರ ವಾಡೆಕರ್, ಅನೀಲ, ಪ್ರಕಾಶ ಸೇರಿದಂತೆ ಇನ್ನಿತರರಿದ್ದರು.ಮಂಗಳವಾರ ಸಂಜೆ ಭಾಲ್ಕಿ ತಾಲ್ಲೂಕಿನ ಮೇಹಕರ ಗ್ರಾಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚೆನ್ನಶೆಟ್ಟಿ ಅವರು ಹಾಗೂ ಕಸಾಪ ಸದಸ್ಯರು ಮನೆಗಳಿಗೆ ತೆರಳಿ ಮತಯಾಚಿಸಿದರು. ತಾಲೂಕಿನ ಮೇಹಕರ ಗ್ರಾಮದಲ್ಲಿ ಆಜೀವ ಸದಸ್ಯರ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.