Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಲಕ್ಷಾಂತರ ಮೌಲ್ಯದ ಗೋಮಾಂಸ ಸಾಗಣೆ ಟ್ರಕ್ ಜಪ್ತಿ

ಬೀದರ್: ಲಕ್ಷಾಂತರ ಬೆಲೆ ಬಾಳುವ 5ಟನ್ಗೂ ಅಧಿಕ ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಟ್ರಕಗಳನ್ನು ಸ್ಥಳೀಯ ಪೊಲೀಸರು ಜಪ್ತಿ ಮಾಡಿಕೊಂಡು ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 
ಸಾಗಣೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಕೆಲ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ಟ್ರಕ್ ಜಪ್ತಿ ಮಾಡಿಕೊಂಡು ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಪಶುವೈದ್ಯಾಧಿಕಾರಿ ಡಾ.ಪ್ರಥ್ವಿರಾಜ ಭೇಟಿನೀಡಿ, ಮಾಂಸ ಪರಿಶೀಲಿಸಿ, ಪರೀಕ್ಷೆಗಾಗಿ ಹೈದ್ರಾಬಾದಗೆ ಕಳಿಸಿದ್ದಾರೆ. ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದರು.


ಡಾ.ಪ್ರಥ್ವಿರಾಜ ಮೇಲ್ನೋಟಕ್ಕೆ ಗೋಮಾಂಸವೇ ಇರುವಂತೆ ಕಾಣುತಿದ್ದು, ಪರೀಕ್ಷೆ ನಂತರ ಸತ್ಯಾಂಶ ಬಹಿರಂಗಗೊಳ್ಳಲಿದೆ. ಈ ಕೃತ್ಯದ ಹಿಂದೆ ಯಾರ್ಯಾರಿದ್ದಾರೆ ಎಂಬುದು ಮತ್ತು ಪೊಲೀಸರು ಮತ್ತು ಮಾಂಸ ಸಾಗಿಸುವವರ ಮಧ್ಯ ಕೆಲ ಮಧ್ಯವರ್ತಿಗಳಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂತು.