Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸಂವಿಧಾನ ಜಾಗೃತಿ ಅಭಿಯಾನಕ್ಕೆ ಚಾಲನೆ

ಔರಾದ: ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಭೀಮ್ ಆರ್ಮಿ ಸಂಘಟನೆಯ ವತಿಯಿಂದ ಪಟ್ಟಣದ ಕನ್ನಡಾಂಬೆ ವೃತ್ತದಿಂದ ಸೈಕಲ್ ಜಾಥಾದ ಮೂಲಕ ಸಂವಿಧಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಭೀಮ್ ಆರ್ಮಿ ತಾಲೂಕ ಅಧ್ಯಕ್ಷ ಗೌತಮ್ ಮೇತ್ರೆ ಮಾತನಾಡಿ ಭಾರತದ ಸಂವಿಧಾನ ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದೇ ಪ್ರತಿಯೊಬ್ಬ ಭಾರತೀಯನ ಹೆಗ್ಗಳಿಕೆ. ಮೌಡ್ಯ ಕಂದಾಚಾರದಂತಹ ಅನಿಷ್ಟಪದ್ದತಿಗಳನ್ನು ಧಿಕ್ಕರಿಸಿ ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿರುವ ನಮ್ಮ ಸಂವಿಧಾನ ಸರ್ವಕಾಲಕ್ಕೂ ಮಾನ್ಯವಾಗುವಂತಹ ಕಾನೂನುಗಳನ್ನು ಹೊಂದಿದೆ. ಹತ್ತಾರು ಧರ್ಮೀಯರು ವಿಭಿನ್ನ ಸಂಸ್ಕೃತಿಯ ಸಾವಿರಾರು ಜಾತಾಗಳನ್ನ ಹೊಂದಿರುವ ಭಾರತದಂಥ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ವತಂತ್ರ್, ಸಮಾನತೆ, ಸಹೋದರತೆಯಂತಹ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ರೂಪಿತವಾಗಿರುವ ಸಂವಿಧಾನ ಭಾರತದ ದೇಶದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದೆ‌ ಎಂದರು.

ಸಾಮಾಜಿಕ ಚಿಂತಕ ಮಹೇಶ ಗೊರನಾಳ್ಕರ್ ಮಾತನಾಡಿ ಸಂವಿಧಾನದ ಆಶಯಗಳು ಜಾರಿಯಾಗಿದೆ ಈ ದೇಶದ ಸಮಸ್ತ ಅಭಿವೃದ್ದಿ ಸಾಧ್ಯವಿಲ್ಲ. ಅದಕ್ಕಾಗಿ ಸಂವಿಧಾನದ ಜಾರಿಗಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಹೋರಾಟ ನಡೆಸಬೇಕಿದೆ, ಬಹುಮುಖ್ಯವಾಗಿ ಸಂವಿಧಾನದ ರಕ್ಷಣೆಯ ಹೊಣೆಯನ್ನು ದಲಿತ, ಹಿಂದೂಳಿದ, ಅಲ್ಪಸಂಖ್ಯಾತ ಸಮುದಾಯಗಳು ಹೊರಬೇಕಾಗಿದೆ. ಈ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಪ್ರಯತ್ನವಾಗಿ ಭೀಮ್ ಆರ್ಮಿ ಸಂಘಟನೆಯ ನೇತೃತ್ವದಲ್ಲಿ ಸಂವಿಧಾನ ಜಾಗೃತಿ ಸೈಕಲ್ ಜಾಥಾ ಅಭಿಯಾನ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.

ಪಟ್ಟಣದ ಅಮರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ನಾಲಂದಾ ಪೂರ್ವ ಮಹಾವಿದ್ಯಾಲಯ ಹಾಗೂ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಯುವ ಮುಖಂಡ ರತ್ನದೀಪ ಕಸ್ತೂರೆ ಸಂವಿಧಾನ ಪೀಠಿಕೆ ಓದಿಸಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಅಂಬರೇಶ್ ಕುದುರೆ,ಪಟ್ಟಣ ಪಂಚಾಯತ ಸದಸ್ಯ ಬಂಟಿ ದರ್ಬಾರೆ, ಗೌತಮ ಮೇತ್ರೆ, ಪ್ರಕಾಶ ಕಾಂಬಳೆ, ಸುನೀಲ ಮೇತ್ರೆ, ಪ್ರಕಾಶ ವಾಘಮಾರೆ, ಹಾಗೂ ಸಂಘಟನೆಯ ಅನೇಕ ಸದಸ್ಯರು ಉಪಸ್ಥಿತರಿದ್ದರು.