Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಮರಖಲ ಗ್ರಾಮದಲ್ಲಿ ಸುರೇಶ್ ಚನ್ನಶೇಟ್ಟಿ ಅವರ ಪರವಾಗಿ ಭರ್ಜರಿ ಪ್ರಚಾರ

 

ಇಂದು ಮರಖಲನ ಪ್ರಮುಖ ಬಡಾವಣೆಗಳಿಗೆ ತೆರಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಆಕಾಂಕ್ಷಿ ಸುರೇಶ ಚನ್ನಶೆಟ್ಟಿ ಪರ ಪ್ರಚಾರ ನಡೆಸಿ ಮತ್ತೊಮ್ಮೆ ಸುರೇಶ ಚನ್ನಶೆಟ್ಟಿಗೆ ಗೆಲ್ಲಿಸೋಣ 50 ವರ್ಷದ ಜಿಲ್ಲಾ ಕನ್ನಡ ಭವನದ ಕಟ್ಟಡದ ಕನಸು ನನಸಾಗಿಸೊಣ ಎನ್ನುವ ಮೂಲಕ ಹಾಗೂ ಗಡಿಭಾಗದ ಕನ್ನಡಿಗರ ಸೇವೆ ಮಾಡಲು ಮತ್ತೊಮ್ಮೆ ಚನ್ನಶೆಟ್ಟಿ ಅವರಿಗೆ ಬೆಂಬಲ ನಿಡುವಂತೆ ಆಜೀವ ಸದಸ್ಯರ ಮನೆ-ಮನೆಗೆ ತೆರಳಿ ಪ್ರಚಾರ ಗೈದರು.

ಶ್ರೀ ಸುರೇಶ ಚನ್ನಶೆಟ್ಟಿ ತನ್ನ ಸಾಮಾಜಿಕ ಬದುಕಿನ ಜೀವನವನ್ನ ಧಾರ್ಮಿಕ ಕೈಂಕರ್ಯಗಳಿಂದ ಆರಂಭಿಸಿ, ಬಸವ ಕೇಂದ್ರದ ನಿಷ್ಠಾವಂತ ಕಾರ್ಯಕರ್ತನಾಗಿ ಜನಮಾನಸದಲ್ಲಿ ಬೆಳೆದವರು. ಕನ್ನಡ ನಾಡು ನುಡಿಯ ಬಗ್ಗೆ ತಮಗಿರುವ ಆಸಕ್ತಿಯ ಕಾರಣ ಹಾಗೂ ಅಭೇಧ್ಯವಾದ ಸಂಘಟನಾ ನೈಪುಣ್ಯತೆಯಿಂದ ಬೀದರನಲ್ಲಿ ಜರುಗುವ ಪ್ರತಿಯೊಂದು ಕಾರ್ಯಕ್ರಮಗಳ ಹಿಂದಿನ ರೂವಾರಿಯಾಗಿ ಗುರುತಿಸಿಕೊಂಡರು.

ಇದೇ ಸಂದರ್ಭದಲ್ಲಿ ವಿದ್ಯಾವತಿ ಬಲ್ಲೂರ ಸಕಲೇಶ್ವರಿ. ಸಿದ್ದಾರೂಡ ಭಾಲ್ಲೆ ವಿರಶೆಟ್ಟಿ ಚನ್ನಶೇಟ್ಟಿ ಇನ್ನಿತರರು ಪ್ರಚಾರದಲ್ಲಿ  ಪಾಲ್ಗೊಂಡಿದ್ದರು