Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಇಂದು ಔರಾದ ನಲ್ಲಿ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಭೀಮರಾವ್ ಪಾಟೀಲ ಚುನಾವಣೆಯ ಪ್ರಚಾರ ಕಾರ್ಯಕ್ರಮ ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಅರವಿಂದ ಕುಮಾರ ಅರಳಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಚುನಾವಣೆ ಬಹಳ ಮಹತ್ವದಾಗಿದೆ.ಯಾಕೆಂದರೆ ದೇಶ ಬಹಳ ಸಂಕಷ್ಟದಲ್ಲಿದೆ ಇಲ್ಲಿ ಬಿಜೆಪಿ ಅಧಿಕಾರ ಬಂದಾಗಿನಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ಹೇರಿದೆ ಯಾರು ಸ್ವತಂತ್ರವಾಗಿ ಮಾತಾಡೋ ಹಂಗಿಲ್ಲ ಮಾಧ್ಯಮದವರು ಏನು ಸರ್ಕಾರಕ್ಕೆ ಪ್ರಶ್ನೆ ಕೇಳಂಗಿಲ್ಲ ಕೇಳಿದರೆ ಅವರ ಮೇಲೆ ದೇಶದ್ರೋಹ ಕೇಸ ದಾಖಲು ಮಾಡುತ್ತಿದ್ದಾರೆ.

ಇವುಗಳನ್ನು ತಡೆಯಬೇಕಾದರೆ ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಭೀಮರಾವ ಪಾಟೀಲಗೆ ಅತಿ ಹೆಚ್ಚು ಮತ ನೀಡಿ ಗೆಲ್ಲಿಸಬೇಕು ಎಂದು ಕರೆ ನೀಡಲಾಯಿತು ಮತ್ತು ಈ ಹಿಂದೆ ಬೀದರಗೆ ಬಂದಾಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ರವರು ಗ್ರಾಮ ಪಂಚಾಯತ ಸದಸ್ಯರಿಗೆ ಸುಳ್ಳು ಅಶ್ವಾಸನೆ ನೀಡಿದ್ದಾರೆ ಗ್ರಾಮ ಪಂಚಾಯತ ಸದಸ್ಯರಿಗೆ 10 ಸಾವಿರ ರೂಪಾಯಿ ಸಂಭಾವನೆಗೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಅದು ಆದಷ್ಟು ಬೇಗ ಅದನ್ನು ಜಾರಿ ಬರುವುದಾಗಿ ಸದಸ್ಯರಿಗೆ ಮೋಸ ಮಾಡುವ ಕೆಲಸ ಮಾಡಿದ್ದಾರೆ ಅರು ತಿಂಗಳ ಹಿಂದೆ ವಿಧಾನ ಪರಿಷತ್ತಿನಲ್ಲಿ ಬಿಜಾಪುರದ ವಿಧಾನ ಪರಿಷತ್ತಿನ ಸದಸ್ಯ ಸುನೀಲ ಪಾಟೀಲ ನಾನು ಡಾ.ಚಂದ್ರಶೇಖರ ಪಾಟೀಲ,ಹಾಗೂ ಕಾಂಗ್ರೆಸನವರು ಈ ಬಗ್ಗೆ ಕೇಳಿದಾಗ ಸರ್ಕಾರಕ್ಕೆ ಆರ್ಥಿಕ ಹೋರೆಯಾಗುತ್ತದೆ ಎಂದು ಉತ್ತರಿಸಿದವರು ಇಂದು ಸಂಭಾವನೆ ನೀಡಲಾಗುವದು ಎಂದು ಹೇಳಿದು ಮೂಗಿಗೆ ತುಪ್ಪ ಹಚ್ಚಿ ಆಸೆ ತೋರಿಸಿದ್ದಾರೆ ಅದಕ್ಕಾಗಿ ಭೀಮರಾವ ಪಾಟೀಲರವರಿಗೆ ಮತನೀಡಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರರನ್ನು ಆಗ್ರಹಿಸಿದರು, ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ರಹಿಂಖಾನ ಶಾಸಕರಾದ ವಿಜಯ ಸಿಂಗ,ಡಾ.ಚಂದ್ರಶೇಖರ ಪಾಟೀಲ, ಮಾಜಿ ಸಂಸದರಾದ ನರಸಿಂಗರಾವ ಸೂರ್ಯವಂಶಿ, ಮಾಜಿ ಶಾಸಕರಾದ ಕೆ.ಪುಂಡಲಿಕರಾವ, ಗುಂಡಪ್ಪ ಬಿರಾದ ಅಭ್ಯರ್ಥಿಯಾದ ಭೀಮರಾವ ಪಾಟೀಲ, ಪಕ್ಷದ ಅಧ್ಯಕ್ಷರಾದ ಬಸವರಾಜ ಜಾಬಶೇಟ್ಟ, ತಾಲೂಕು ಅಧ್ಯಕ್ಷರಾದ ರಾಜಕುಮಾರ ಹಲಬರಗೆ, ಆನಂದ ಚೌಹಾಣ, ಸೇರಿದಂತ್ತೆ ಅನೇಕ ಮುಖಂಡರು ಉಪಸ್ಥಿತರಿದ್ದರು.