Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬ್ಲಾಸ್ಟ್ ಆದ ಕಂಟೆನರ್ ಲಾರಿ ಟೈರ್ ಬೀದರ್- ಕಲ್ಬುರ್ಗಿ ಬಸಗೆ ಡಿಕ್ಕಿ: 8ಕ್ಕೂ ಅಧಿಕ ಮಂದಿಗೆ ಗಾಯ


ಬೀದರ್::ಬ್ಲಾಸ್ಟ್ ಆದ ಕಂಟೇನರ್ ಲಾರಿ ಟೈರ್ ಬೀದರ್-ಕಲ್ಬುರ್ಗಿ ಬಸಗೆ ಡಿಕ್ಕಿ ಹೊಡೆದ ಪರಿಣಾಮ 8ಕ್ಕೂ ಅಧಿಕ ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಜಿಲ್ಲೆಯ ಹುಮನಾಬಾದ್ ತಾಲ್ಲೂಕು ವಸಂತಪುರ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಸಂಜೆ 6ಗಂಟೆ ಸುಮಾರಿಗೆ ಬೀದರನಿಂದ ಬಿಟ್ಟ ಬಸ್ ಬಸಂತಪುರ ಸಮೀಪ ತಲುಪುತಿದ್ದ ಹಾಗೆ ಎದುರಿನಿಂದ ಬರುತ್ತಿದ್ದ ಕಂಟೆನರ್ ಲಾರಿಯ ಮುಂದಿನ ಟೈರ್ ಬ್ಲಾಸ್ಟಗೊಂಡ ಬಸಗೆ ರಭಸವಾಗಿ ಡಿಕ್ಕಿಹೊಡದ ಪರಿಣಾಮ ಘಟನೆ ಸಂಭವಿಸಿದೆ.


ಶಾಸಕರ ಪಾಟೀಲ ಭೇಟಿ: ಘಟನೆ ಸಂಭವಿಸಿದಾಗ ಕಲ್ಬುರ್ಗಿಯಿಂದ ಹುಮನಾಬಾದ್ ಕಡೆಗೆ ಬರುತ್ತಿದ್ದ ಶಾಸಕ ರಾಜಶೇಖರ ಪಾಟೀಲ ತಕ್ಷಣ ಆಂಬುಲೆನ್ಸ್ ಸ್ಥಳಕ್ಕೆ ತರಿಸಿ, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದರು.
ಇದೇ ವೇಳೆ ಸ್ಥಳಕ್ಕೆ ಭೇಡು ನೀಡಿದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಸಿಬ್ಬಂದಿ ರಸ್ತೆತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದ ಗಾಜಿನ ತುಂಡುಗಳನ್ನು ರಸ್ತೆ ಪಕ್ಕಕ್ಕೆ ಎಸೆಯುವ ಮೂಲಕ ಮುಂದೆ ಆಗುವ ಅನಾಹುತ ತಪ್ಪಿಸಲು ನೆರವಾದರು.
ಗಾಯಾಳುಗಳ ಪೈಕಿ ಕೆಲವರು ಬೀದರನಿಂದ ಕಲ್ಬುರ್ಗಿಗೆ ತೆರಳುತಿದ್ದರೆ ಇನ್ನೂ ಕೆಕವರು ಗಙಗಾವತಿ ಮತ್ತಿತರ ಊರುಗಳಿಗೆ ತೆರಳುತಿದ್ದರು ಎನ್ನಲಾಗಿದೆ. 8ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದಾಗಿ ಸಿಪಿಐ ಯಾತನೂರ ತಿಳಿಸಿದರು.