Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

 ಬಿಟ್ ಕಾಯಿನ್ಗೆ ಬೊಮ್ಮಾಯಿ ಬಲಿ? : ಸಿಎಂ ಕುರ್ಚಿಯಲ್ಲಿ ಬ್ರಾಹ್ಮಣ, ರಾಜ್ಯಾಧ್ಯಕ್ಷರಾಗಿ ಲಿಂಗಾಯತ?

ದೆಹಲಿಯ ಖಚಿತ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಡಿಸೆಂಬರ್‌ 10 ರ ಒಳಗೆ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕವಾಗಲಿದೆಯಂತೆ.

ಬಿಟ್‌ ಕಾಯಿನ್‌ ಹಗರಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಬಲಿಪಶುವಾದರೆ?

ಈ ಸಂದರ್ಭ ಬಳಸಿಕೊಂಡು ಸಂಘ ಪರಿವಾರ ತನ್ನ ಹಿಡನ್‌ ಅಜೆಂಡಾವನ್ನು ಜಾರಿಗೆ ತರಲು ಹೊರಟಿದೆಯೇ?

ಹಾಗೆ ನೋಡಿದರೆ, ಬೊಮ್ಮಾಯಿ ಅವರನ್ನು ಕೆಳಗಿಳಿಸುವ ಕೆಲಸ ಹಾನಗಲ್‌ ಉಪ ಚುನಾವಣೆ ಸಂದರ್ಭದಲ್ಲೇ ಮೊಳಕೆ ಒಡೆದಿತ್ತು. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ದಿವಂಗತ ಸಿಎಂ ಉದಾಸಿ ಅವರ ಸೊಸೆ ರೇವತಿ ಶಿವಕುಮಾರ್‌ ಅವರಿಗೆ ಟಿಕೆಟ್‌ ನೀಡಲು ಬಯಸಿದ್ದರು. ಆದರೆ ಬಿ.ಎಲ್‌ ಸಂತೋಷ್‌ ಅಲ್ಲಿ ಶಿವರಾಜ್‌ ಸಜ್ಜನರ್‌ ಅವರಿಗೆ ಟಿಕೆಟ್‌ ಕೊಡಿಸಿದರು. ಸಜ್ಜನರ್‌ ಸೋಲುವ ಕ್ಯಾಂಡಿಡೇಟೇ ಆಗಿದ್ದರು. ಸಜ್ಜನರ್‌ ಸೋಲನ್ನು ಬೊಮ್ಮಾಯಿ ತಲೆಗೆ ಕಟ್ಟುವ ಹುನ್ನಾರ ಇದರ ಹಿಂದೆ ನಡೆಯಿತು. ತಮ್ಮ ತವರು ಜಿಲ್ಲೆಯಲ್ಲೇ ಅಭ್ಯರ್ಥಿ ಗೆಲ್ಲಿಸಲಾಗಲಿಲ್ಲ ಎಂಬ ಆರೋಪವನ್ನು ಹೈಕಮಾಂಡ್‌ ಮುಂದೆ ಇಡಲಾಗಿತ್ತು.

ಈಗ ಬಿಟ್ಕಾಯಿನ್ಹಗರಣದ ನೆಪಸಿಕ್ಕಿದೆ.

ಬಲ್ಲ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ದಿಢೀರನೆ ದೆಹಲಿಗೆ ಕರೆಸಿಕೊಂಡ ಬಿಜೆಪಿ ಹೈಕಮಾಂಡ್‌ ಬಿಟ್‌ ಕಾಯಿನ್‌ ವಿಚಾರವಾಗಿ ಚರ್ಚೆ ಮಾಡಿತೇನೋ ನಿಜ. ಆದರೆ ಈ ನೆಪದಲ್ಲಿ ಅದು ಬ್ರಾಹ್ಮಣರೊಬ್ಬರನ್ನು ಕರ್ನಾಟಕ ಸಿಎಂ ಮಾಡುವ ತನ್ನ ಅಜೆಂಡಾವನ್ನು ಜಾರಿಗೆ ತರಲು ಹೊರಟಿದೆ.

ಯಾವಬ್ರಾಹ್ಮಣ?

ಬ್ರಾಹ್ಮಣರ ಪೈಕಿ ಚಾಲ್ತಿಯಲ್ಲಿರುವ ಇಬ್ಬರು ವ್ಯಕ್ತಿಗಳು ಪುಟ್ಟಾಪೂರಾ ಆರ್‌ಎಸ್‌ಎಸ್‌ ಸಿದ್ದಾಂತದವರು. ಸದ್ಯ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್‌ ಸಂತೋಷ್‌ ಎಂಬ ಆರ್‌ಎಸ್‌ಎಸ್‌ ಮನುಷ್ಯ. ಇನ್ನೊಬ್ಬರು ಧಾರವಾಡ ಸಂಸದ ಮತ್ತು ಕೇಂದ್ರ ಸಚಿವರೂ ಆಗಿರುವ ಪ್ರಲ್ಹಾದ್‌ ಜೋಶಿ.

ಬಿ.ಎಲ್‌ ಸಂತೋಷ್‌ ಕರ್ನಾಟಕದ ಮಟ್ಟಿಗೆ ಮುಖರಹಿತ ವ್ಯಕ್ತಿ. ಯಾವುದೇ ಚುನಾವಣೆಯನ್ನು ಈವರೆಗೂ ಎದುರಿಸಿದವರಲ್ಲ. ಸಮ್ಮಿಶ್ರ ಸರ್ಕಾರದ ಪತನದ ನಂತರ ಬಿಜೆಪಿ ನೇತೃತ್ವದ ಸರ್ಕಾರದ ಸಿಎಂ ಆಗಿ ಸಂತೋಷ್‌ ನೇಮಕ ಆಗಬಹುದು ಎಂಬ ವದಂತಿಗಳಿದ್ದವು. ಆದರೆ ಏಕಾಏಕಿ ಚುನಾಯಿತನೇ ಅಲ್ಲದ ಬ್ರಾಹ್ಮಣರೊಬ್ಬರನ್ನು ಸಿಎಂ ಮಾಡುವ ರಿಸ್ಕ್‌ ಅನ್ನು ಬಿಜೆಪಿ ತೆಗೆದುಕೊಳ್ಳಲಿಲ್ಲ. ಮತ್ತೆ ಯಡಿಯೂರಪ್ಪನವರನ್ನು ಸಿಎಂ ಮಾಡಲೇಬೇಕಾಗಿತು. ಆದರೆ, ಯಡಿಯೂರಪ್ಪ ಆಡಳಿತಕ್ಕೆ ಸಂತೋಷ್‌ ತೊಂದರೆ ಕೊಡುತ್ತ ಬಂದರು. ಕೊನೆಗೂ ಅವರನ್ನು ಕೆಳಗಿಳಿಸುವ ಕುತಂತ್ರವನ್ನೂ ಮಾಡಿದರು

ಆದರೂ ಅವರ ಪಾಲಿಗೆ ಸಿಎಂ ಪದವಿ ದಕ್ಕಲಿಲ್ಲ. ಲಿಂಗಾಯತ ನಾಯಕ ಎಂದು ಒಂದು ಮಟ್ಟಿಗೆ ಬಿಂಬಿತವಾಗಿದ್ದ ಯಡಿಯೂರಪ್ಪರನ್ನು ಅವಮಾನಿಸಿದ್ದು ಬಿಜೆಪಿಯ ಲಿಂಗಾಯತ ಮತದಾರರಲ್ಲಿ ಆಕ್ರೋಶ ಮೂಡಿಸಿತ್ತು. ಇದನ್ನು ಬ್ಯಾಲೆನ್ಸ್‌ ಮಾಡಲು ಲಿಂಗಾಯತ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡುವುದು ಬಿಜೆಪಿಗೆ ಅನಿವಾರ್ಯ ಆಗಿತ್ತು. ಹೀಗಾಗಿ ಲಿಂಗಾಯತರಲ್ಲಿ ಸಣ್ಣ ಸಂಖ್ಯೆಯಲ್ಲಿರುವ ಸಾದರ ಸಮುದಾಯದ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಸ್ಥಾನ ನೀಡಲಾಗಿತು.

 

ಜೋಷ್ನಲ್ಲಿಜೋಶಿ!

ಯಾವುದೇ ಚುನಾವಣಾ ರಾಜಕೀಯವನ್ನು ಮಾಡದ ಮತ್ತು ಜನರಿಗೆ ಮುಖ ಪರಿಚಯವೇ ಇಲ್ಲದ ಬಿ.ಎಲ್‌ ಸಂತೋಷರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಸದ್ಯಕ್ಕೆ ಬಿಜೆಪಿ ಪಾಲಿಗೆ ಕಷ್ಟವೇ ಆಗುತ್ತದೆ. ಹಾಗಾಗಿ ಅದು 30 ವರ್ಷಗಳ ಆಕ್ಟಿವ್‌ ಪಾಲಿಟಿಕ್ಸ್‌ ಪ್ರೊಫೈಲ್‌ ಹೊಂದಿರುವ ಪ್ರಹ್ಲಾದ್‌ ಜೋಶಿಯವರನ್ನು ಸಿಎಂ ಮಾಡಲು ಬಿಜೆಪಿ, (ಅದಕ್ಕೂ ಮುಖ್ಯವಾಗಿ ಆರ್‌ಎಸ್‌ಎಸ್‌) ತೀರ್ಮಾನಿಸಿದೆ.

ಪ್ರಹ್ಲಾದ್‌ ಜೋಶಿ 2004ರಿಂದ ಸತತವಾಗಿ ಧಾರವಾಡ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಈಗ ನಾಲ್ಜನೇ ಸಲ ಎಂಪಿ ಆಗಿರುವ ಅವರು ಕೇಂದ್ರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದಾರೆ, ಈದ್ಗಾ ವಿವಾದದ ಪ್ರಾಡಕ್ಟ್‌ಗಳು ಎಂದೇ ಜೋಶಿ ಮತ್ತು ಅನಂತಕುಮಾರ್ ಹೆಗಡೆಯವರನ್ನು ಗುರುತಿಸಲಾಗುತ್ತದೆ.

ಮೊದಲಿಗೆ ಸಣ್ಣ ಕಂಪ್ಯೂಟರ್‌ ಅಂಗಡಿ ಇಟ್ಟುಕೊಂಡಿದ್ದ ಜೋಶಿ ನಂತರ ದಿವಂಗತ ಅನಂತಕುಮಾರ್‌ ಅವರ ನೆರವಿನಿಂದ ಉದ್ಯಮಕ್ಕೆ ಇಳಿದರು. ಮಂಕಿ ಬ್ರ್ಯಾಂಡ್‌ ಹೆಸರಿನ ಕಸಬರಿಗೆ (ಪೊರಕೆ) ಮತ್ತು ಫಿನಾಯಿಲ್‌ ಉತ್ಪಾದನೆಗೆ ಇಳಿದ ಜೋಶಿ, ಅವನ್ನು ಸರ್ಕಾರಿ ಸಂಸ್ಥೆಗಳಿಗೆ ಸಪ್ಲೈ ಮಾಡುತ್ತ ಲಾಭ ಮಾಡಿಕೊಂಡರು.

ನಿವೃತ್ತ ಐಎಎಸ್‌ ಅಧಿಕಾರಿ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಬಿ.ಎಸ್‌ ಪಾಟೀಲ್‌ ದಿಢೀರನೆ 2004ರಲ್ಲಿ ಧಾರವಾಡ ಸಂಸದ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಬೆಂಗಳೂರಿನಲ್ಲೇ ತಮ್ಮ ಜೀವನ ಕಳೆದಿದ್ದ ಅವರು ಧಾರವಾಡ ಭಾಗಕ್ಕೆ ಅಪರಿಚಿತರು. ಆ ಸಂದರ್ಭದಲ್ಲಿ

 

ಆರ್‌ಎಸ್‌ಎಸ್‌ ಕಟ್ಟಾಳು ಪ್ರಹ್ಲಾದ್‌ ಜೋಶಿಯವರಿಗೆ ಬಿಜೆಪಿ ಮಣೆ ಹಾಕಿತು. ಆಗಿನಿಂದ ಜೋಶಿ ಗೆಲ್ಲುತ್ತಲೇ ಇದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ ಈದ್ಗಾ ವಿವಾದದ ಹೆಸರಲ್ಲಿ ಧರ್ಮಗಳ ನಡುವೆ ಗೋಡೆಗಳನ್ನು ಕಟ್ಟಿ ರಾಜಕೀಯ ಮಾಡುತ್ತ ಬಂದ ವ್ಯಕ್ತಿಯೊಬ್ಬರು ಈ ರಾಜ್ಯದ ಸಿಎಂ ಆಗಬಹುದು ಎಂಬುದೇ ನಮ್ಮ ದುರ್ದೈವ.

ಲಿಂಗಾಯತರ ಮೂಗಿಗೆ ತುಪ್ಪ!

ಒಬ್ಬ ಬ್ರಾಹಣನನ್ನು ಸಿಎಂ ಮಾಡಿದರೆ ಲಿಂಗಾಯತರು ಆಕ್ರೋಶಗೊಳ್ಳುತ್ತಾರೆ ಎಂಬ ಕಾರಣಕ್ಕೆ ಬಿಜೆಪಿ ರಾಜ್ಯ ಘಟಕಕ್ಕೆ ಲಿಂಗಾಯತರನ್ನು ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಈಗ ಕೈಗಾರಿಕಾ ಸಚಿವರಾಗಿರುವ ಮುರುಗೇಶ್‌ ನಿರಾಣಿ ಅವರನ್ನು ನಳೀನ್‌ಕುಮಾರ್‌ ಕಟೀಲ್‌ ಸ್ಥಾನಕ್ಕೆ ತರಲು ಯೋಜಿಸಲಾಗಿದೆ.

ಮೂಲತಃ ರೈತ ಕುಟುಂಬದ ಮುರುಗೇಶ್‌ ನಿರಾಣಿ ಈಗ ಉದ್ಯಮಿ. ಉದ್ಯಮದ ಹೆಸರಲ್ಲಿ ಮಾಡಿಕೊಂಡಿರುವ ನೂರಾರು ಕೋಟಿ ಸಾಲದ ಕಿರಿಕಿರಿ ತಪ್ಪಿಸಿಕೊಳ್ಳಲು ಅವರಿಗೆ ರಾಜಕೀಯದ ಅಗತ್ಯ ಖಂಡಿತ ಇದೆ!

ಯಡಿಯೂರಪ್ಪನವರನ್ನು ಕೆಳಗಿಳಿಸದಾಗ ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಳ್ಳಬಾರದು ಎಂದು ಲಿಂಗಾಯತ ಸಮುದಾಯದ ಸಾದರ ಬಣದ ಬೊಮ್ಮಾಯಿವರನ್ನು ಸಿಎಂ ಮಾಡಲಾಗಿತ್ತು. ಈಗ ಬೊಮ್ಮಾಯಿ ಅವರನ್ನು ತೆಗೆದರೆ ಲಿಂಗಾಯತ ಸಮುದಾಯದ ತೀವ್ರ ವಿರೋಧ ಎದುರಿಸಬೇಕು ಎಂಬ ಕಾರಣಕ್ಕೆ ಪಂಚಮಸಾಲಿ ಸಮುದಾಯದ ಮುರುಗೇಶ್‌ ನಿರಾಣಿಉವರನ್ನು ಬಿಜೆಪಿ ರಾಜ್ಯಾಧ್ಯಕ್ಚ ಸ್ಥಾನದಲ್ಲಿ ಕೂರಿಸಬಹುದು. ಸದ್ಯ ಕೈಗಾರಿಕಾ ಸಚಿವರಾಗಿರುವ ನಿರಾಣಿ, 2008-13 ಅವಧಿಯಲ್ಲು ಕೈಗಾರಿಕಾಸಚಿವರಾಗಿದ್ದರು.

ಬಾಗಲಕೋಟೆ ಜಿಲ್ಲೆಯ ಬೀಳಗಿಯ ( ಮೊದಲು ಜಮಖಂಡಿಯಿಂದ ಗೆಲ್ಲುತ್ತಿದ್ದರು) ಶಾಸಕರಾಗಿರುವ ಅವರು ಸ್ವತಃ ಉದ್ಯಮಿಯೂ ಹೌದು. ಹಲವು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿರುವ ನಿರಾಣಿ ಮೂಲತಃ ಮೆಕ್ಯಾನಿಕಲ್‌ ಇಂಜಿನಿಯರ್‌. ಅವರ ಸಹೋದರ ಸಂಗಮೇಶ್‌ ನಿರಾಣಿ ಎಂಎಲ್‌ಸಿ ಆಗಿದ್ದಾರೆ.

2008-13ರ ಅವಧಿಯಲ್ಲಿ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಪೋಸ್ಕೊ ಕಂಪನಿಗೆ ನಿರಾಣಿ ಅನುಮತಿ ನೀಡಿದ್ದರು. ಆದರೆ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಅದನ್ನು ಕೈಬಿಡಲಾಗಿತು. ನಿರಾಣಿ ಪೋಸ್ಕೊ ಕಂಪನಿಯಿಂದ ದೊಡ್ಡ ಪ್ರಮಾಣದಲ್ಲಿ ಕಿಕ್‌ ಬ್ಯಾಕ್‌ ಪಡೆದಿದ್ದರು ಎಂಬ ಮಾತು ಕೇಳಿ ಬಂದಿತ್ತು.

ಲಿಂಗಾಯತರಲ್ಲಿ ಬಹುಸಂಖ್ಯಾತರಾದ ಪಂಚಮಸಾಲಿಗಳಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಆ ಸಮುದಾಯದವರ ಬಹುವರ್ಷಗಳ ಬೇಡಿಕೆ ಈ ಡೇರಿಸಿದಂತೆ ಆಗುತ್ತದೆ ಎಂದು ಬಿಜೆಪಿ ಹೈಕಮಾಂಡ್‌ ಯೋಚಿಸಬಹುದು.

ಪಂಚಮಸಾಲಿ ಸಂಘಟನೆಯಲ್ಲಿ ಸಕ್ರಿಯಾರಾಗಿರುವ ನಿರಾಣಿ ಅವರಿಗೆ ಸಮುದಾಯದ ಸ್ವಾಮಿಗಳ ಬೆಂಬಲವಿದೆ. ಈ ಸ್ವಾಮಿಗಳು ನಿರಾಣಿ ಅವರನ್ನು ಸಿಎಂ ಮಾಡಬೇಕು ಎಂದು ಆಗ್ರಹಿಸುತ್ತಲೇ ಬಂದಿದ್ದಾರೆ.

ಅಂತರಾಷ್ಟ್ರೀಯ ಹಗರಣ

ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಭಾರತದ ಪ್ರಧಾನಮಂತ್ರಿ ಕಚೇರಿ ಮತ್ತು ಭಾರತೀಯ ತನಿಖಾ ಸಂಸ್ಥೆಗಳಿಗೆ ಬಹು ಆಯಾಮದ ಬಿಟ್‌ ಕಾಯಿನ್‌ ಹಗರಣದ ಬಗ್ಗೆ ಎಚ್ಚರಿಸಿದ ನಂತರ ದೇಶದಲ್ಲಿ ತನಿಖೆ ಶುರುವಾಗಿದೆ.

ಭಾರತದಲ್ಲಿ ಬೆಂಗಳೂರು ಈ ಹಗರಣದ ಕೇಂದ್ರವಾಗಿದ್ದು ಬೆಂಗಳೂರು ಪೊಲೀಸರು ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ಬಂಧಿಸಿದ ನಂತರ ಇದರಲ್ಲಿ ರಾಜಕಾರಣಿಗಳು ಅದರಲ್ಲೂ ಆಡಳಿತ ಪಕ್ಷದ ರಾಜಕಾರಣಿಗಳು ಮತ್ತು ಕೆಲವು ಅಧಿಕಾರಿಗಳು ಭಾಗಿಯಾಗಿರಬಹುದು ಎಂಬ ಸಂಶಯ ದಟ್ಟವಾಗಿದೆ. ಏಕೆಂದರೆ ಶ್ರೀಕಿ ರಾಜ್ಯ ಸರ್ಕಾರದ ಹಲವು ಪೋರ್ಟಲ್‌ಗಳನ್ನು ಹ್ಯಾಕ್‌ ಮಾಡಿ ಅವನ್ನು ಬಿಟ್‌ ಕಾಯಿನ್‌ ವ್ಯವಹಾರ ನಡೆಸಲು ಬಳಸಿಕೊಂಡಿರುವ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸರ್ಕಾರದ ಪೋರ್ಟಲ್‌ಗಳನ್ನು ಹ್ಯಾಕ್‌ ಮಾಡಿದ ಆರೋಪಿ, ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್‌ ಖರೀದಿಸಿ, ಬಿಟ್‌ ಕಾಯಿನ್‌ ರೂಪದಲ್ಲಿ ಪಾವತಿ ಮಾಡುತ್ತಿದ್ದ ಎನ್ನಲಾಗಿದೆ.

ಆಡಳಿತದಲ್ಲಿರುವವರ ನೆರವಿಲ್ಲದೇ ಇದು ಅಸಾಧ್ಯ ಎಂಬುದು ಸ್ಪಷ್ಟವಾಗಿದೆ. ಅಮೆರಕದ ಹಲವು ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ ವಾಲೆಟ್‌ಗಳನ್ನು ಹ್ಯಾಕ್‌ ಮಾಡಿರುವ ಶ್ರೀಕಿ 5 ಸಾವಿರ ಕಾಯಿನ್‌ ಕದ್ದ ಆರೋಪ ಎದುರಿಸುತ್ತಿದ್ದಾನೆ ಆತನ ವಿಚಾರಣೆಯ ಕುರಿತಂತೆ ಸರ್ಕಾರ ವಿವರಗಳನ್ನು ನೀಡದೇ ಇರುವುದು ವಿಪಕ್ಷಗಳ ಸಂಶಯವನ್ನು ಹೆಚ್ಚಿಸಿದೆ.

ಹಲವು ಕಾಂಗ್ರೆಸ್‌ ನಾಯಕರಿಗೂ ಹಗರಣದ ಲಿಂಕ್‌ ಇದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌, ಹಗರಣಕ್ಕೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕರ ಮುಂದಿಡಿ ಮತ್ತು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸುತ್ತಿದ್ದಾರೆ.

 ಬಿಟ್ ಕಾಯಿನ್ಗೆ ಬೊಮ್ಮಾಯಿ ಬಲಿ? : ಸಿಎಂ ಕುರ್ಚಿಯಲ್ಲಿ ಬ್ರಾಹ್ಮಣ, ರಾಜ್ಯಾಧ್ಯಕ್ಷರಾಗಿ ಲಿಂಗಾಯತ?