Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬಸವಕಲ್ಯಾಣ ನಗರದಲ್ಲಿ ಆಯೋಜಿಸಲಾದ 42ನೆಯ ಶರಣಕಮ್ಮಟ ಅನುಭವ ಮಂಟಪ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಸವಣ್ಣನವರು ಸಮಾನತೆಯ ಪರವಾಗಿ ನಿಂತರು, ಕಾಯಕವೇ ಕೈಲಾಸವೆಂದು, ಯುವಕರನ್ನು ಮೌಢ್ಯತೆಯಿಂದ ಹೊರತಂದು ಉದ್ಯೋಗದತ್ತ ಮುಖ ಮಾಡುವಂತೆ ಮಾಡಿದರು.

ಬಸವಣ್ಣನವರ ತತ್ವಗಳು ನಮ್ಮ ಸಂವಿಧಾನದ ಮುಖ್ಯ ಅಂಶಗಳಾಗಿವೆ, ಈ ಭಾಗದಲ್ಲಿ ಜನ್ಮಪಡೆದ ನಾವೆಲ್ಲರೂ ಪುಣ್ಯವೆಂತರು ಎಂದು ಕೇಂದ್ರ ಸಚಿವರಾದ ಖೋಬ ನುಡಿದರು

ಈ ಸಂದರ್ಭದಲ್ಲಿ ಪರಮಪೂಜ್ಯ ಜ್ಞಾನಯೋಗಿ ಶ್ರೀ. ಸಿದ್ದೇಶ್ವರ ಮಹಾಸ್ವಾಮಿಗಳು ಪೂಜ್ಯರಾದ ಶ್ರೀ ಬಸವಲಿಂಗ ಪಟ್ಟದ್ದೆವರು, ಶ್ರೀ. ಗುರುಬಸವ ಪಟ್ಟದೇವರು, ಡಾ.ಅಕ್ಕ ಗಂಗಾಬಿಕತಾಯಿ, ಶ್ರೀ. ಅರವಿಂದ ಜತ್ತಿ, ಪಕ್ಷದ ಹಿರಿಯರಾದ ಶ್ರೀ. ಬಸವರಾಜ್ ಪಾಟೀಲ್ ಸೇಡಂ ಹಾಗೂ ಬಸವ ಭಕ್ತರು ಉಪಸ್ಥಿತರಿದ್ದರು.