Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಭಾಲ್ಕಿ:ನ.8:ಗಂಡ-ಹೆಂಡತಿ ಪರಸ್ಪರರನ್ನು ಅರಿತು ಜೀವನ ನಡೆಸಿದರೆ ಮನೆಯಲ್ಲಿ ಸುಖ, ಶಾಂತಿ, ಸಮಾಧಾನ, ಸಂತೃಪ್ತಿ ನೆಲೆಗೊಳ್ಳುತ್ತದೆ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬದುಕಿನ ಸಾರ್ಥಕತೆ ಕೃತಿ ಲೋಕಾರ್ಪಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಾನು ಎಂಬ ಅಹಂಕಾರ ಮನದಲ್ಲಿ ಮನೆ ಮಾಡಿದರೆ. ಮನಸ್ಸು ಕಲ್ಮಶಗೊಂಡು ಮಾನವರನ್ನು ಅಧಃಪತನದತ್ತ ಕೊಂಡೊಯ್ಯುತ್ತದೆ. ನಾನು ಎಂಬ ಪದದ ಬದಲಾಗಿ ನಿನ್ನಿಂದ, ನಿಮ್ಮಿಂದವೇ ಎಲ್ಲವೂ ಆಯಿತು ಎನ್ನುವ ಭಾವ ನಮ್ಮಲ್ಲಿ ಇದ್ದರೆ. ಪ್ರತಿ ಕುಟುಂಬವೂ ಆನಂದಮಯ ಮನೆಗಳಾಗಿ ಬದಲಾಗುತ್ತವೆ. ಮನುಷ್ಯರಲ್ಲಿ ಸ್ವಾರ್ಥ ಹೆಚ್ಚಾಗಿದ್ದು, ಅದು ಪೆÇೀಷಕರನ್ನು ಪ್ರೀತಿಯಿಂದ ವಂಚಿತರನ್ನಾಗಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಮಾರ್ಮಿಕ ಉದಾಹರಣೆ ಸಹಿತಿ ತಿಳಿಸಿದರು.

ವಿದ್ಯಾರ್ಥಿ ಜೀವನದಿಂದಲೇ ಪ್ರತಿಭಾನ್ವಿತೆ ಆಗಿರುವ ಶ್ರೀದೇವಿ ವಿಜಯಕುಮಾರ ಪಾಟೀಲ ಅವರು ರಚಿಸಿರುವ ಬದುಕಿನ ಸಾರ್ಥಕತೆ ಕೃತಿ ನಿಜಕ್ಕೂ ಅಮೂಲ್ಯ ವಿಷಯಗಳ ಅದ್ಭುತ ಖಣಿ ಆಗಿದೆ. ಈ ಕೃತಿಯನ್ನು ಓದಿದರೆ ಖಂಡಿತವಾಗಲೂ ಪ್ರತಿಯೊಬ್ಬರಲ್ಲಿಯೂ ಸದ್ಗುಣ, ಸದ್ಭಾವ, ಉದಾತ್ತ ಚಿಂತನೆಗಳು ಬೆಳೆಯುತ್ತವೆ. ಒಟ್ಟು 27 ಅಧ್ಯಾಯಗಳನ್ನು ಒಳಗೊಂಡಿರುವ ಈ ಕೃತಿ ಮಾನವೀಯ ಮೌಲ್ಯಗಳ ಆಗರವಾಗಿದೆ. ಸಾಹಿತಿ ಶ್ರೀದೇವಿ ಅವರಿಂದ ಇನ್ನೂ ಹೆಚ್ಚೆಚ್ಚು ಇಂತಹ ಕೃತಿಗಳು ಹೊರ ಬಂದರೆ ಸಮಾಜಕ್ಕೆ ಇನ್ನೂ ಅನುಕೂಲ ಆಗುತ್ತದೆ ಎಂದು ತಿಳಿಸಿದರು.

ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್, ಇಂಟರ್‍ನೆಟ್, ಯುಟ್ಯೂಬ್ ಗೀಳಿಗೆ ಒಳಗಾಗಿರುವ ಮಕ್ಕಳು, ವಿದ್ಯಾರ್ಥಿಗಳು ಉತ್ತಮ ಸಾಹಿತ್ಯ ಕೃತಿಗಳ ಅಧ್ಯಯನದಿಂದ ದೂರಾಗಿರುವುದು ದುರದೃಷ್ಟಕರ ಸಂಗತಿ. ಪೆÇೀಷಕರು ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವತ್ತ ಹೆಚ್ಚು ಗಮನ ಹರಿಸಬೇಕು. ಸಾಹಿತಿ ಶ್ರೀದೇವಿ ಪಾಟೀಲ ಅವರ ತಾಯಿ ಬಾಲ್ಯದಿಂದಲೇ ಅವರಿಗೆ ಒಳ್ಳೆಯ ಸಂಸ್ಕಾರ, ನಡತೆ ಕಲಿಸಿರುವುದುರಿಂದ ಅವರು ಇಂದು ಒಳ್ಳೆಯ ಶಿಕ್ಷಕಿ, ಸಾಹಿತಿ, ಭಾಷಣಕಾರ್ತಿ ಆಗಿ ಹೊರ ಹೊಮ್ಮಲು ಸಾಧ್ಯವಾಗಿದೆ ಎಂದು ಹೇಳಿದರು.
ರಾಚೋಟೇಶ್ವರ ಮಠದ ಪೀಠಾಧಿಪತಿ ಹಾಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಭಗವಂತ ಕರುಣಿಸಿರುವ ಈ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಲು ಎಲ್ಲರೂ ತಮ್ಮ ಕೈಲಾದಷ್ಟು ಉತ್ತಮ ಕಾರ್ಯಗಳನ್ನು ಮಾಡಬೇಕು. ಸಾಹಿತಿ ಶ್ರೀದೇವಿ ಪಾಟೀಲರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಓದಲು ಹೆಚ್ಚಿನ ಪೆÇ್ರೀತ್ಸಾಹ ಸಿಗಲೆಂದು ತಮ್ಮ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉನ್ನತ ಸಾಧನೆಗೈದ ಕಲ್ಪನಾ ಸುಭಾಶ, ಬಸವರಾಜ ನಾಗಶೆಟ್ಟಿ, ವರ್ಷಾ ರಾಜಕುಮಾರ, ಭವಾನಿ ದತ್ತಾತ್ರಿ ಅವರನ್ನು ಗೌರವಿಸಿ, ಹುರಿದುಂಬಿಸಿರುವುದು ಉತ್ತಮ ಕೆಲಸ ಎಂದು ಸಂತಸ ವ್ಯಕ್ತಪಡಿಸಿದರು.

ಯುವ ಮುಖಂಡ ಸಾಗರ ಈಶ್ವರ ಖಂಡ್ರೆ ಮಾತನಾಡಿದರು.ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಶಿಕ್ಷಣಾಧಿಕಾರಿ ಟಿ.ಆರ್.ದೊಡ್ಡಿ, ಚಿಟಗುಪ್ಪ ಸದ್ಬೋಧಿನಿ ಶಿಕ್ಷಣ ಸಂಸ್ಥೆಯ ಗುಂಡೇರಾವ್ ಕುಲಕರ್ಣಿ, ಸಂಗಣ್ಣ ಪಾರಾ, ಶಿವಲಿಂಗಪ್ಪ ಪಾಟೀಲ, ಕಮಠಾಣಾ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ವೆಂಕಟರಾವ್ ಸಿಂಧೆ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ ಇದ್ದರು.ಪತ್ರಕರ್ತ ನಾಗೇಶ ಪ್ರಭಾ ನಿರೂಪಿಸಿ, ವಂದಿಸಿದರು.