Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಚಿಂತಾಕಿಯಲ್ಲಿ   ಸ್ವ-ಸಹಾಯ ಸಂಘದ ದಿನಾಚರಣೆ

 

ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಿಂತಾಕಿನಲ್ಲಿ ಸಹಕಾರ ಧುರಿಣ, ಮಾಜಿ ಸಚಿವರಾದ ದಿ.ಡಾ|| ಗುರುಪಾದಪ್ಪ ನಾಗಮಾರಪಳ್ಳಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.ಸ್ವ-ಸಹಾಯ ಸಂಘದ  ಅಧ್ಯಕ್ಷರಾದ ಡಾ ವಿಲಾಸರಾವ ಮಾರುತಿರಾವ ಕಾರ್ಯಕ್ರಮ ಉದ್ಘಾಟಿಸಿ ದ್ದರು 

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80 ಗುಂಪುಗಳಿದ್ದು, 300 ಜನ ಮಹಿಳಾ ಸದಸ್ಯರು ಸ್ವ-ಸಹಾಯ ಸಂಘದಿಂದ ಸಾಲ ಪಡೆದುಕೊಂಡು ತಮ್ಮ ತಮ್ಮ ಉದ್ಯೋಗದೊಂದಿಗೆ ಸಂಘ ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಎಂದು ಸ್ವ-ಸಹಾಯ ಸಂಘದ  ಅಧ್ಯಕ್ಷರಾದ ಡಾ ವಿಲಾಸರಾವ ಮಾರುತಿರಾವ ಮಾಹಿತಿ ನೀಡಿದ್ದರು ,

 

ತದನಂತರ ಮಾತಾನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವರಾಜ ಕನ್ನಾಳೆ ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವಸ್ವ-ಸಹಾಯ ಸಂಘ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಸಾಧನೆ ಮಾಡಿದೆ.ಪ್ರತಿಯೊಬ್ಬ ಸದಸ್ಯರು ಸ್ವಸಹಾಯ ಸಂಘದ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕತೆ ಹೆಚ್ಚಿಸಿಕೊಳ್ಳುವಂತೆ ಸದಸ್ಯರಿಗೆ ಸಲಹೆ ನೀಡಿದರು.

 1996 ರಲ್ಲಿ ಕೇವಲ 10 ಮಹಿಳೆಯರ ಗುಂಪು ರಚಿಸಿ 10 ಸಾವಿರ ರೂಪಾಯಿ ಸಾಲ ನೀಡಿ, ಒಂದು ಹೊಸ ಸ್ವಸಹಾಯ ಸಂಘಗಳ ಅಭಿವೃದ್ಧಿ ಕಾರ್ಯ ಚಾಲನೆ ನೀಡಿದರು, ಇವತ್ತಿಗೆ ಸುಮಾರು 27000 ಮಹಿಳಾ ಸ್ವಸಹಾಯ ಸಂಘಗಳು, ಸುಮಾರು 300ಕೋಟಿಗಿಂತ ಅಧಿಕ ಸಾಲ ನೀಡಿ, ಸುಮಾರು 4.37 ಲಕ್ಷ ಮಹಿಳೆಯರಿಗೆ ಸಾಲ ನೀಡುವ ಮುಖಾಂತರ ತನ್ನದೇ ಆದ ಅಭಿವೃದ್ಧಿ ಮೂಡಿಸಿದ್ದಾರೆ, ಮಹಿಳೆಯರು ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಶೈಕ್ಷಣಿಕ ಮಟ್ಟದಲ್ಲಿ ಅತೀ ಉನ್ನತ ಕಾರ್ಯದಲ್ಲಿ ತೊಡಗಲು, ಆರ್ಥಿಕ ಸೇವೆ ಸಲ್ಲಿಸಿದರು,

ಇವಾಗ ಸಹಕಾರ ಕ್ಷೇತ್ರದಲ್ಲಿ ತಮ್ಮತಂದೆಯಂತೆ, ಅವರು ಹಾಕಿ ಕೊಟ್ಟ ದಾರಿಯಲ್ಲಿ ಉಮಾಕಾಂತ ನಾಗಮಾರಪಳ್ಳಿಯವರು ಡಿ ಸಿ ಸಿ ಬ್ಯಾಂಕ್ ನ ಅಧ್ಯಕ್ಷರು, ಹಾಗೂ ಅವರೊಂದಿಗೆ ಆಡಳಿತ ಮಂಡಳಿ ಹಾಗೂ ಬ್ಯಾಂಕ್ ನ ಸಿಬ್ಬಂದಿ ನೇತೃತ್ವದಲ್ಲಿ ಸ್ವ ಸಹಾಯ ಸಂಘಗಳು ಬಹಳ ದೊಡ್ಡ ಮಟ್ಟಕೆ ಬೆಳೆಯಲಿದೆ

ಮುಂದೆ ಬರುವ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ತಮ್ಮದೇಯಾದ ಅಭಿವೃದ್ಧಿ ಕಾರ್ಯಗಳು ಜೊತೆ ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿ ಯಲ್ಲರಿಬೇಕು ಅಂತ,ಅವರ ಆಸೆ ತಾವು ತಮ್ಮತಮ್ಮ ಕ್ಷೇತ್ರದಲ್ಲಿ ಸ್ವಸಹಾಯ ಸಂಘಗಳ ಉಪಯೋಗ ಪಡೆದು, ಅಭಿವೃದ್ಧಿ ಹರಿಕಾರ ಹಾದಿಯಲ್ಲಿ ನಡೆ ಬೇಕಾಗಿ ಕ್ಷೇತ್ರ ಸಹಾಯಕರಾದ  ,ಮಹೇಶ್ ಕುಮಾರ್ ಬಿರಾದರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು,

ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘಗಳ ಸಿಬ್ಬಂದಿ,ಸದಸ್ಯರುಗಳಾದ, ಮೈಯುದ್ದಿನ್ ಪಟೇಲ್,ವಿಠ್ಠಲ್ ರೆಡ್ಡಿ ಸೋಬ್ಬ ,ಶೀತರಾಮ ಕೈಮ,ಶ್ರಿಧರ್ ಪಾಟೀಲ್,  ನಾಗರಡ್ಡಿ ಹೆಗಡೆ ,ವಿಶ್ವನಾಥ ಸಾಹುಕಾರ್ ,ಸಿದ್ದ ರೆಡ್ಡಿ ಸೊಬ್ಬ್ ,ನರಸರಡ್ಡಿ ಸೋಬ್ಬ ,ವಿಷ್ಣು ರೆಡ್ಡಿ,ಸಿದ್ದು ಹಂಗರಗೆ  ಪ್ರತಿಭಾ ,ಸೇರಿದಂತೆ ಚಿಂತಾಕಿ  ಗ್ರಾಮದ ಹಿರಿಯರು ಸೇರಿದಂತೆ ಇತರರಿದ್ದರು.

 

Correspondent :Hanmanth deshmukh 7259379041