Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

   ಎಕಲಾರನಲ್ಲಿ ಸ್ವ-ಸಹಾಯ ಸಂಘದ ದಿನಾಚರಣೆ

ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಕಲಾರ ನಲ್ಲಿ ಸಹಕಾರ ಧುರಿಣ, ಮಾಜಿ ಸಚಿವರಾದ ದಿ.ಡಾ|| ಗುರುಪಾದಪ್ಪ ನಾಗಮಾರಪಳ್ಳಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.ಸ್ವ-ಸಹಾಯ ಸಂಘದ ಅಧ್ಯಕ್ಷರಾದ ಗಣಪತರಾವ ಶಿವರಾಯ ಜಿರಗೆ ಕಾರ್ಯಕ್ರಮ ಉದ್ಘಾಟಿಸಿದ್ದರು ,


ಇವಾಗ ಸಹಕಾರ ಕ್ಷೇತ್ರದಲ್ಲಿ ತಮ್ಮತಂದೆಯ0ತೆ, ಅವರು ಹಾಕಿ ಕೊಟ್ಟ ದಾರಿಯಲ್ಲಿ ಉಮಾಕಾಂತ ನಾಗಮಾರಪಳ್ಳಿಯವರು ಡಿ ಸಿ ಸಿ ಬ್ಯಾಂಕ್ ನ ಅಧ್ಯಕ್ಷರು, ಹಾಗೂ ಅವರೊಂದಿಗೆ ಆಡಳಿತ ಮಂಡಳಿ ಹಾಗೂ ಬ್ಯಾಂಕ್ ನ ಸಿಬ್ಬಂದಿ ನೇತೃತ್ವದಲ್ಲಿ ಸ್ವ ಸಹಾಯ ಸಂಘಗಳು ಬಹಳ ದೊಡ್ಡ ಮಟ್ಟಕೆ ಬೆಳೆಯಲಿದೆ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨೧೫ ಗುಂಪುಗಳಿದ್ದು, ೧೨೦೦ ಜನ ಮಹಿಳಾ ಸದಸ್ಯರು ಸ್ವ-ಸಹಾಯ ಸಂಘದಿAದ ಸಾಲ ಪಡೆದುಕೊಂಡು ತಮ್ಮ ತಮ್ಮ ಉದ್ಯೋಗದೊಂದಿಗೆ ಸಂಘ ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಎಂದು ಸ್ವ-ಸಹಾಯ ಸಂಘದ ಅಧ್ಯಕ್ಷರಾದ ಗಣಪತರಾವ ಶಿವರಾಯ ಜಿರ್ಗೆ  ಮಾಹಿತಿ ನೀಡಿದ್ದರು ,


ತದನಂತರ ಮಾತಾನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶ್ರೀಕಾಂತ ಧನರಾಜ ಕುಣಿಕೆರೆ ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವಸ್ವ-ಸಹಾಯ ಸಂಘ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಸಾಧನೆ ಮಾಡಿದೆ.ಪ್ರತಿಯೊಬ್ಬ ಸದಸ್ಯರು ಸ್ವಸಹಾಯ ಸಂಘದ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕತೆ ಹೆಚ್ಚಿಸಿಕೊಳ್ಳುವಂತೆ ಸದಸ್ಯರಿಗೆ ಸಲಹೆ ನೀಡಿದರು.

ಮುಂದೆ ಬರುವ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ತಮ್ಮದೇಯಾದ ಅಭಿವೃದ್ಧಿ ಕಾರ್ಯಗಳು ಜೊತೆ ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿ ಯಲ್ಲರಿಬೇಕು ಡಾ|| ಗುರುಪಾದಪ್ಪ ನಾಗಮಾರಪಳಿಯವರ ಆಸೆ ,
ತಾವು ತಮ್ಮತಮ್ಮ ಕ್ಷೇತ್ರದಲ್ಲಿ ಸ್ವಸಹಾಯ ಸಂಘಗಳ ಉಪಯೋಗ ಪಡೆದು, ಅಭಿವೃದ್ಧಿ ಹರಿಕಾರ ಹಾದಿಯಲ್ಲಿ ನಡೆ ಬೇಕಾಗಿ ಕ್ಷೇತ್ರ ಸಹಾಯಕರಾದ ,ಮಹೇಶ್ ಕುಮಾರ್ ಬಿರಾದರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು,

ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವ ಸ್ವ-ಸಹಾಯ ಸಂಘ ಅನೇಕ ಮಹಿಳೆಯರ ಬದುಕಿಗೆ ಅಸರೆಯಾಗಿದೆ,ಅವರ ಸಮಾಜಮುಖಿ ಕರ‍್ಯ ಇಂದಿಗೂ ಅನೇಕ ಕುಟುಂಬಗಳಿಗೆ ವರದಾನವಾಗಿವೆ :

:ಸುನೀತಾ ಶಿವಶಂಕರ ಗ್ರಾಮ ಪಂಚಾಯತ ಸದಸ್ಯೆ

ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘಗಳ ಸಿಬ್ಬಂದಿ,ಸದಸ್ಯರುಗಳಾದ, ಪ್ರಕಾಶ ಹಿಪ್ಪಳಗಾವ್ ಶೆಶಿಕಲ್ ತಂದೆ ವೈಜಿನಾಥ ,ಕಾಶಿನಾಥ ಮಾರುತಿ ಮ್ರೇತ್ರೆ ,ಪ್ರಶಾಂತ ಮಲ್ಲಿಕಾರ್ಜುನ ,ಗಂಗಶೆಟ್ಟಿ ಗುಂಡಪ್ಪ ಗ್ರಾಮ ಪಂಚಾಯತ ಸದಸ್ಯರು ,ಸುನೀತಾ ಶಿವಶಂಕರ ಗ್ರಾಮ ಪಂಚಾಯತ ಸದಸ್ಯೆ ವಿವೇಕ ಸಂಜುಕುಮಾರ ಸೇರಿದಂತೆ ಎಕಲಾರ ಗ್ರಾಮದ ಹಿರಿಯರು ಸೇರಿದಂತೆ ಇತರರಿದ್ದರು.

JOIN OUR WHATSAPP GROUP FOR MORE UPDATES