Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಈ ಕೆಲಸ ಮಾಡಿದರೆ ರೈತರಿಗೆ ವರ್ಷಕ್ಕೆ 6000 ಸಾವಿರ ಬದಲು 36.000ಸಾವಿರ ಸಿಗಲಿದೆ.

ನೀವು ರೈತ ಕುಟುಂಬದವರಾದರೆ ಕೂಡಲೇ ಈ ಸುದ್ದಿ ಓದಿ

ನವದೆಹಲಿ : PM kisan Man dhan Yojna : ಪಿಎಂ ಕಿಸಾನ್ ಸಮ್ಮಾನ್ ನಿಧಿಯ (PM Kisan Samman Nidhi) ಫಲಾನುಭವಿಗಳಿಗೆ ಸಿಹಿಸುದ್ದಿ ಇದೆ. ಈಗ ಈ ಯೋಜನೆಯಡಿ ರೈತರು ಪ್ರತಿ ತಿಂಗಳು 3000 ರೂಪಾಯಿಗಳನ್ನು ಪಡೆಯುವುದು ಸಾಧ್ಯವಾಗುತ್ತದೆ

ಇದಕ್ಕಾಗಿ ಯಾವುದೇ ದಾಖಲೆಯನ್ನು ಒದಗಿಸಬೇಕಾಗಿಲ್ಲ. ಇಲ್ಲಿಯವರೆಗೆ, ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ (PM Kisan) ಅಡಿಯಲ್ಲಿ 2000 ರೂಪಾಯಿಗಳ ಮೂರು ಕಂತು ಅಂದರೆ 6,೦೦೦ ರೂ ಗಳನ್ನು ಪಡೆಯುತ್ತಿದ್ದರು. ಆದರೆ ಈಗ ಈ ಯೋಜನೆಯಡಿ ವಾರ್ಷಿಕವಾಗಿ 36000 ರೂ. ಪಡೆಯಬಹುದು.

ವಾರ್ಷಿಕವಾಗಿ ಸಿಗಲಿದೆ 36000 ರೂ. :
ಪಿಎಂ ಕಿಸಾನ್ ಮನ್ ಧನ್ ಯೋಜನೆ (PM kisan Man dhan Yojna Benefits) ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಡಿ, 60 ವರ್ಷ ವಯಸ್ಸಿನ ನಂತರ, ರೈತರಿಗೆ ಪ್ರತಿ ತಿಂಗಳು 3,000 ರೂ. ಪಿಂಚಣಿ (Pension) ನೀಡಲಾಗುತ್ತದೆ. ಅಂದರೆ ವರ್ಷಕ್ಕೆ 36,000 ರೂ. ರೈತರಿಗೆ ಸಿಗಲಿದೆ. ಮೋದಿ ಸರ್ಕಾರವು ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಮೊತ್ತವನ್ನು ನೀಡುತ್ತದೆ.

ಅಗತ್ಯವಾದ ದಾಖಲೆಗಳು :
ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯ ಲಾಭ ಪಡೆಯಲು, ನಿಮಗೆ ಕೆಲವು ದಾಖಲೆಗಳು ಬೇಕಾಗುತ್ತವೆ. ಆಧಾರ್ ಕಾರ್ಡ್(Aadhaar card), ಬ್ಯಾಂಕ್ ಖಾತೆ ವಿವರಗಳ ಅಗತ್ಯವಿರುತ್ತದೆ. ಆದರೆ ನೀವು ಪಿಎಂ ಕಿಸಾನ್ (PM Kisan Benefits) ಪ್ರಯೋಜನವನ್ನು ಪಡೆಯುತ್ತಿದ್ದರೆ, ಇದಕ್ಕಾಗಿ ನೀವು ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.

ಈ ಯೋಜನೆಯ ಲಾಭವನ್ನು ಯಾರು ಪಡೆಯುತ್ತಾರೆ?
1. 18 ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು.
2. ಇದಕ್ಕಾಗಿ, ಸಾಗುವಳಿ ಭೂಮಿ ಗರಿಷ್ಠ 2 ಹೆಕ್ಟೇರ್ ವರೆಗೆ ಇರಬೇಕು.
3. ಯೋಜನೆಯ ಲಾಭ ಪಡೆಯಲು ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳಾಗಿರಬೇಕು. ರೈತರ ವಯಸ್ಸಿಗೆ ಅನುಗುಣವಾಗಿ 55 ರೂ. ಯಿಂದ 200 ರೂ. ವರೆಗೆ ಮಾಸಿಕ ಕೊಡುಗೆಯನ್ನು ನೀಡಬೇಕಾಗುತ್ತದೆ.
4. 18 ವರ್ಷ ವಯಸ್ಸಿನಲ್ಲಿ ಸೇರುವ ರೈತರಿಗೆ ಮಾಸಿಕ 55 ರೂ.ಗಳನ್ನು ಪಾವತಿಸಲಾಗುವುದು.
5. ನೀವು 30 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ, 110 ರೂ. ಠೇವಣಿ ಮಾಡಬೇಕಾಗುತ್ತದೆ.
6. ನೀವು 40 ನೇ ವಯಸ್ಸಿನಲ್ಲಿ ಸೇರಿಕೊಂಡರೆ, ಪ್ರತಿ ತಿಂಗಳು 200 ರೂ. ಠೇವಣಿ ಮಾಡಬೇಕಾಗುತ್ತದೆ.