Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

Vaastu Tips: ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಸುಲಭದ ದಾರಿ

ಮನೆ – ವಾಸ್ತು – ವಸ್ತುಗಳು – ನಮ್ಮ ನಡವಳಿಕೆಗಳು ಒಂದಕ್ಕೊಂದು ಕೊಂಡಿಯಾಗಿದ್ದು, ಇದು ಒಬ್ಬ ವ್ಯಕ್ತಿಯ ಇಲ್ಲವೇ ಕುಟುಂಬದ ಯಶಸ್ಸು, ಬೆಳವಣಿಗೆ, ಆರ್ಥಿಕ ಸ್ಥಿತಿಗತಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ನಾವು ಮನೆಯಲ್ಲಿ ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಸಾಲಕ್ಕೆ ಗುರಿಯಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಅಂತಹ ತಪ್ಪುಗಳು ಏನು ಎಂಬ ಬಗ್ಗೆ ನೋಡೋಣ ಬನ್ನಿ…

ನಿಮ್ಮ ಜೀವನದಲ್ಲಿ (life) ವಾಸ್ತು ಶಾಸ್ತ್ರವು Vaastu Tips: ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಸುಲಭದ ದಾರಿzಸಾಕಷ್ಟು ಪರಿಣಾಮವನ್ನು ಬೀರಬಹುದಾಗಿದೆ. ಇಲ್ಲಿ ನೀವು ಯಾವ ಮಾರ್ಗವನ್ನು ಅನುಸರಿಸುತ್ತೀರಿ ಹಾಗೂ ನಿಮ್ಮ ಆಯ್ಕೆ  (choices) ಯಾವುದಾಗಿರುತ್ತದೆ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಕಾರ್ಯಗಳ ಆಧಾರದ ಮೇಲೆ ಧನಾತ್ಮಕ (Positive) ಹಾಗೂ ನಕಾರಾತ್ಮಕ (Negative) ಪರಿಣಾಮವನ್ನು ಬೀರಬಹುದು. ಜ್ಯೋತಿಷ್ಯ ಶಾಸ್ತ್ರ (Astrology) ಹಾಗೂ ವಾಸ್ತು ಶಾಸ್ತ್ರದ ಬಗ್ಗೆ ಬಹಳಷ್ಟು ಜನರಿಗೆ (People) ಒಲವಿರುವುದಿಲ್ಲ. ನಿಮ್ಮ ಮನೆಯ ಪ್ರತಿಯೊಂದು ವಸ್ತುಗಳು (Product) ಸಹ ವಾಸ್ತು ಶಾಸ್ತ್ರದ ಜೊತೆ ನಂಟನ್ನು ಹೊಂದಿರುತ್ತವೆ. ಅವುಗಳ ಆಧಾರದ ಮೇಲೆ ನಿಮ್ಮ ಯಶಸ್ಸು (Success), ಹಿನ್ನಡೆ (Setbacks), ಆರ್ಥಿಕ ಸ್ಥಿತಿಗತಿ (Economic conditions), ಪ್ರಗತಿ (Progress), ಲಾಭ-ನಷ್ಟಗಳು (Profits – Losses) ನಿರ್ಧರಿತವಾಗುತ್ತವೆ.

 ಹಾಗಾಗಿ ನೀವು ನಿಮ್ಮ ಮನೆಗೆ ತರುವ ಹಾಗೂ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದು ವಸ್ತುಗಳು ನಿಮ್ಮ ಮುಂದಿನ ಭವಿಷ್ಯದ (Future) ಮೇಲೆ ಪರಿಣಾಮವನ್ನು (Effect) ಬೀರುತ್ತದೆ. ನೀವು ಮನೆಯಲ್ಲಿ ಯಾವ ವಸ್ತುಗಳನ್ನು ತರುತ್ತೀರಿ ಎಂಬುದು ಎಷ್ಟು ಮುಖ್ಯವಾಗುತ್ತದೋ, (Importance) ಹಾಗೇ ನೀವು ಮನೆಯಲ್ಲಿ ಇರುವ, ನಡೆದುಕೊಳ್ಳುವ ಸಂಗತಿಗಳು, ಕೆಟ್ಟ ಅಭ್ಯಾಸಗಳು (Bad Practise) ಸಹ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಯಶಸ್ಸು ಮತ್ತು ಸಮೃದ್ಧಿಗೆ ಅಡ್ಡಿಯಾಗಲಿದ್ದು, ನೀವು ಅಂದುಕೊಂಡ ಕೆಲಸ-ಕಾರ್ಯಗಳು ಆಗದೇ ಇರಬಹುದು. ಹಾಗಾದರೆ ನಾವು ದಿನ ನಿತ್ಯ ಯಾವೆಲ್ಲ ತಪ್ಪುಗಳನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡುತ್ತೇವೆ ಎಂಬ ಬಗ್ಗೆ ನೋಡೋಣ ಬನ್ನಿ…

1.ಹಾಸಿಗೆ (Bed) ಮೇಲೆ ತಿನ್ನಲೇಬೇಡಿ..!

ಆಧುನಿಕತೆಯ ಈ ಸಂದರ್ಭದಲ್ಲಿ ಜನ ಜೀವನ ಹೇಗಾಗಿದೆ ಎಂದರೆ ತುಂಬಾ ಸೋಮಾರಿತನ. ಇನ್ನೂ ಹಾಸಿಗೆಯಿಂದ ಎದ್ದಿರುವುದಿಲ್ಲ. ಆಗಲೇ ಬೆಡ್ ಕಾಫಿ (Coffee) ಬರುತ್ತದೆ. ಆದರೆ, ಹಾಸಿಗೆ ಮೇಲೆ ಆಹಾರ (Food) ತಿನ್ನುವುದು ಹಾಗೂ ಕುಡಿಯುವುದು ಕೆಟ್ಟ (Bad) ಅಭ್ಯಾಸವಾಗಿದ್ದು, ವಾಸ್ತುದೋಷಕ್ಕೆ ಇದು ಕಾರಣವಾಗುತ್ತದೆ. ಇಂಥ ಜನರ ಏಳಿಗೆ ಆಗದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಬರಲಿರುವ ಯಶಸ್ಸೂ (success) ತಪ್ಪಲಿದ್ದು, ಸಾಲದ (Debt) ಸುಳಿಗೆ ಸಿಲುಕುವ ಸಾಧ್ಯತೆಗಳೂ ಹೆಚ್ಚಿವೆ. 

2.ಇಂದಿನ ಪಾತ್ರೆಯ ಇಂದೇ ತೊಳೆದಿಡಿ (Wash)


ವಾಸ್ತು ನಿಯಮದ ಅನುಸಾರ ಶುಚಿತ್ವಕ್ಕೆ ಭಾರೀ ಮಹತ್ವವಿದೆ. ಯಾವ ಮನೆಯಲ್ಲಿ ಸ್ವಚ್ಛತೆ ಇರುವುದಿಲ್ಲವೋ, ಆ ಮನೆಯಲ್ಲಿ ಆರ್ಥಿಕ ತೊಂದರೆಗಳು ಸದಾ ಇರುತ್ತದೆ. ಊಟ, ತಿಂಡಿಯ (Tiffin) ನಂತರ ಅಡುಗೆ ಮನೆಯಲ್ಲಿ (Kitchen) ಅಶುದ್ಧ (ತಿಂದಿರುವ, ಕುಡಿದಿರುವ) ತಟ್ಟೆ, ಲೋಟಗಳಿದ್ದರೆ (Unclean Utensils) ಅವುಗಳನ್ನು ತೊಳೆದಿಡಬೇಕು. ರಾತ್ರಿ ಊಟದ (Dinner) ಬಳಿಕ ಅದನ್ನು ಮರುದಿನ ತೊಳೆದರಾಯಿತು ಎಂದು ಬಹುತೇಕರು ಇಟ್ಟುಕೊಳ್ಳುತ್ತಾರೆ. ಆದರೆ, ಅದರಿಂದ ನಕಾರಾತ್ಮಕ ಪರಿಣಾಮ ಬೀರಿ, ವಾಸ್ತುದೋಷವನ್ನುಂಟು ಮಾಡಿ ಸಾಲದಲ್ಲಿ ಮುಳುಗುವಂತೆ ಮಾಡುತ್ತದೆ ಎನ್ನಲಾಗುತ್ತಿದೆ. 

3.ಸ್ನಾನಗೃಹದ ಬಕೆಟ್‌ನಲ್ಲಿ ನೀರು ತುಂಬಿರಲಿ


ಮನೆಯಲ್ಲಿ ಸ್ನಾನಗೃಹ (Bathroom) ಶುಚಿ (Clean)  ಆಗಿರುವುದಲ್ಲದೆ, ರಾತ್ರಿ ಮಲಗುವಾಗ ಆ ಬಕೆಟ್‌ನಲ್ಲಿ (Bucket) ಸದಾ ನೀರು ತುಂಬಿರುವಂತೆ ನೋಡಿಕೊಳ್ಳಬೇಕು. ಇದರಿಂದಾಗಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಇನ್ನು ಅಡುಗೆ ಮನೆಯಲ್ಲಿ ಬಕೆಟ್‌ನಲ್ಲಿ ನೀರನ್ನು ತುಂಬಿಟ್ಟರೆ ತೊಂದರೆಗಳು ಕಡಿಮೆಯಾಗುತ್ತವೆ. ಜೊತೆಗೆ ಲಕ್ಷ್ಮೀ ದೇವಿಯ (Goddess Lakshmi) ಆಶೀರ್ವಾದವನ್ನು (Blessings) ಪಡೆಯಬಹುದಾಗಿದೆ.

 

ವಾಸ್ತು ಶಾಸ್ತ್ರದ ಅನುಸಾರ ಸಂಜೆ (Evening) ವೇಳೆ ಭಿಕ್ಷೆ ನೀಡಬಾರದು. ಇದಲ್ಲದೆ ಈ ಹೊತ್ತಿನಲ್ಲಿ ಹಾಲು (Milk), ಮೊಸರು (Curd) ಅಥವಾ ಉಪ್ಪನ್ನು (Salt) ಕೂಡಾ ನೀಡಬಾರದು. ಹೀಗೆ ಮಾಡುವುದರಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಸಾಲ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತದೆ.