Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ, ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ವಿರುದ್ಧ ಲವ್, ಸೆಕ್ಸ್, ಧೋಖಾ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ನಂತರ ಕೈಕೊಟ್ಟಿದ್ದಾರೆಂದು ನವದೆಹಲಿ ಮೂಲದ ಯುವತಿ ಟ್ವೀಟ್ ಮಾಡಿದ್ದಾಳೆ.

ಅಲ್ಲದೆ, ದೂರು ಸಹ ನೀಡಿದ್ದು, ಐಎಎಸ್ ಅಧಿಕಾರಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

2017ರ ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಸ್ನೇಹಲ್ ಮಹಾರಾಷ್ಟ್ರದ ನಾಗಪುರ ಮೂಲದವರು. 2019ರಲ್ಲಿ ಫೇಸ್​ಬುಕ್ ಮೂಲಕ ದೆಹಲಿ ಮೂಲಕದ ಯುವತಿಯ ಪರಿಚಯವಾಗಿತ್ತು. ಯುಪಿಎಸ್ಸಿ ತರಬೇತಿ ಪಡೆಯುತ್ತಿದ್ದಾಗ ಸ್ನೇಹಲ್ ಲೋಖಂಡೆ ಜತೆಗೆ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂದು ತಿಳಿದುಬಂದಿದೆ.

ಮದುವೆಯಾಗುವೆ ಎಂದು ಭರವಸೆ ನೀಡಿದ್ದ ಕಾರಣ ಪರಸ್ಪರ ದೈಹಿಕ ಸಂಬಂಧ ಬೆಳೆದಿದೆ‌. ಒಂದು ವರ್ಷಕ್ಕೂ ಹೆಚ್ಚು ಅವಧಿ ಬಳಸಿಕೊಂಡ ಬಗ್ಗೆ ಯುವತಿ ವಿವರಣೆ ನೀಡಿದ್ದಾಳೆ. ವಿವಿಧೆಡೆ ಭೇಟಿ ನೀಡಿದ ದಿನಾಂಕ, ಹೋಟೆಲ್, ಲಾಡ್ಜ್ ರೂಮ್ ಹಾಗೂ ಹಾಸ್ಟೆಲ್​ಗೆ ಸ್ನೇಹಲ್ ಲೋಖಂಡೆ ಕರೆದೊಯ್ದಿರುವ ವಿಳಾಸದ ಮಾಹಿತಿ ಹಂಚಿಕೊಂಡಿದ್ದಾಳೆ. ಸ್ನೇಹಲ್ ಜತೆಗೆ ಮಾತನಾಡಿದ ವಾಯ್ಸ್ ರೆಕಾರ್ಡಿಂಗ್ ಸಹ ಲಭ್ಯವಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

ದೈಹಿಕವಾಗಿ ಬಳಸಿಕೊಂಡು ನಂತರ ಐ-ಪಿಲ್ ಟ್ಯಾಬ್ಲೆಟ್ ನುಂಗಲು ಹೇಳಿದ ಎಂದು ದೂರಿದ್ದಾಳೆ. ಅಶ್ಲೀಲ ಚಾಟ್ ಸಹ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಯುವತಿ, ಮದುವೆ ಮಾಡಿಕೊಳ್ಳುವಂತೆ ಕೇಳಿದಾಗ ನಿರಾಕರಿಸಿದ್ದಾರೆ. ಸ್ನೇಹಲ್ ಲೋಖಂಡೆ, ತಾನೊಬ್ಬ ಐಎಎಸ್ ಅಧಿಕಾರಿ ಎಂಬ ಕಾರಣಕ್ಕೆ ಯುವತಿಯರ ಜತೆಗೆ ಸಲುಗೆ ಬೆಳೆಸಿ, ನಂಬಿಸಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವ ಮನಸ್ಥಿತಿಯನ್ನು ಹೊಂದಿದ್ದಾರೆ. ಇಂಥವರಿಗೆ ಜೈಲಿನಲ್ಲಿಟ್ಟು ಯುವತಿಯರ ಬಾಳು ರಕ್ಷಿಸಬೇಕು ಎಂದ ಯುವತಿ ಮನವಿ ಮಾಡಿಕೊಂಡಿದ್ದಾಳೆ.

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಚಿವೆ ಸ್ಮ್ರತಿ ಇರಾನಿಗೂ ಯುವತಿ ದೂರು ನೀಡಿದ್ದಾಳೆ. ಇದರೊಟ್ಟಿಗೆ ಸಿಎಂ ಬೊಮ್ಮಾಯಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಗೂ ಟ್ವಿಟರ್ ಮೂಲಕ ಯುವತಿ ದೂರು ನೀಡಿದ್ದಾಳೆ. ಅಲ್ಲದೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದೂರು ನೀಡಿ ನ್ಯಾಯ ಕೋರಿದ್ದಾಳೆ. ಆದರೆ, ಯುವತಿ ದೂರು ನೀಡಿ ಒಂದು ವಾರ ಕಳೆದರೂ ಯಾವುದೇ ಕ್ರಮ ಜರುಗಿಲ್ಲ.

ಯುವತಿ ಟ್ವಿಟರ್ ದೂರು ಸೋಷಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗಿದ್ದು, ಐಎಎಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ, ಯುವತಿ ದೂರಿನ ಕುರಿತು ಈವರೆಗೆ ಸ್ನೇಹಲ್ ಲೋಖಂಡೆ ಏನೂ ಹೇಳಿಕೆ ನೀಡಿಲ್ಲ. ಇನ್ನೊಂದೆಡೆ ಯುವತಿ ಶೀಘ್ರ ಬೆಂಗಳೂರಿಗೆ ಬಂದು ಮತ್ತೊಂದು ದೂರು ಕೊಡುವ ಹಾಗೂ ಸಿಎಂ ಭೇಟಿ ನೀಡುವ ಸಾಧ್ಯತೆ ಇದ್ದು, ಇಡೀ ಪ್ರಕರಣ ಇದೀಗ ಕುತೂಹಲ ಕೆರಳಿಸಿದೆ.