Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಕರಂಜಿ ಬಿ ಯಲ್ಲಿ ಸ್ವ-ಸಹಾಯ ಸಂಘದ ದಿನಾಚರಣೆ

 

ಜಸ್ಟ್  ಔರಾದ : ತಾಲ್ಲೂಕಿನ ಕರಂಜಿ ಬಿ ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ನಿಮಿತ್ಯ ಸ್ವ-ಸಹಾಯ ಸಂಘದ ದಿನ ಆಚರಿಸಲಾಯಿತು. ಸಂಘದ ಕಾರ್ಯದರ್ಶಿ ಸುಭಾಷ್ ಕನ್ನಾಳೆ ಕಾರ್ಯಕ್ರಮ ಉದ್ಘಾಟಿಸಿದ್ದರು .

ಇದೇ ವೇಳೆ ಮಾತನಾಡಿದ ಸಂಘದ ಕಾರ್ಯದರ್ಶಿ ಸುಭಾಷ್ ಕನ್ನಾಳೆ ಕರಂಜಿ ಬಿ  ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 60 ಗುಂಪುಗಳಿದ್ದು, 500ಕ್ಕೂ  ಜನ ಮಹಿಳಾ ಸದಸ್ಯರು ಸ್ವ-ಸಹಾಯ ಸಂಘದಿಂದ ಸಾಲ ಪಡೆದುಕೊಂಡು ತಮ್ಮ ತಮ್ಮ ಉದ್ಯೋಗದೊಂದಿಗೆ ಸಂಘ ಬೆಳೆಸುವ ಪ್ರಯತ್ನ ನಡೆಸಿದ್ದಾರೆ.

ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವ ಸ್ವ-ಸಹಾಯ ಸಂಘ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಸಾಧನೆ ಮಾಡಿದೆ. ಪ್ರತಿಯೊಬ್ಬ ಸದಸ್ಯರು ಸ್ವಸಹಾಯ ಸಂಘದ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕತೆ ಹೆಚ್ಚಿಸಿಕೊಳ್ಳುವಂತೆ ಸದಸ್ಯರಿಗೆ ಸಲಹೆ ನೀಡಿದರು.

ಇದೇ ವೇಳೆ ಮಾತನಾಡಿದ ಮಹಿಳೆಯೊಬ್ಬರು ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವ ಸ್ವ-ಸಹಾಯ ಸಂಘ ಅನೇಕ ಮಹಿಳೆಯರ ಬದುಕಿಗೆ ಅಸರೆಯಾಗಿದೆ,ಅವರ ಸಮಾಜಮುಖಿ ಕಾರ್ಯ ಇಂದಿಗೂ ಅನೇಕ ಕುಟುಂಬಗಳಿಗೆ ವರದಾನವಾಗಿವೆ

:ಬಾಳಮ್ಮ, ಭೀಮಾಬಾಯಿ ಸ್ವ-ಸಹಾಯ ಸಂಘ

ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ನಿಮಿತ್ತ ಕಾರ್ಯಕ್ರಮದಲ್ಲಿ  ಸ್ವ-ಸಹಾಯ ಸಂಘಗಳ ಸಿಬ್ಬಂದಿ,ಸದಸ್ಯರು, ರಾಜರೆಡ್ಡಿ ಚಿಂತಾಕಿ,ತೇಜರಾವ್ ಚಿಟಗಿರೆ,ನಾಗನಾಥ ದೇವಕತ್ತೆ ಮತ್ತು ಕರಂಜಿ ಬಿ ಗ್ರಾಮ ಹಿರಿಯರು ಸೇರಿದಂತೆ ಇತರರಿದ್ದರು.

 

ವರದಿ :ಹಣಮಂತ ದೇಶಮುಖ ಸಂಪಾದಕರು ಜಸ್ಟ್ ಬೀದರ