Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

New Zealand vs Afghanistan: ಟೀಮ್ ಇಂಡಿಯಾ ಭವಿಷ್ಯ ಇಂದು ನಿರ್ಧಾರ: ರೋಚಕತೆ ಸೃಷ್ಟಿಸಿದ ನ್ಯೂಜಿಲೆಂಡ್-ಅಫ್ಘಾನ್ ಕದನ

image:google

ಆರನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ (Indian Cricket Team) ಭವಿಷ್ಯ ಇಂದು ನಿರ್ಧಾರವಾಗಲಿದೆ. ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿಂದು ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ (New Zealand vs Afghanistan) ತಂಡ ಮುಖಾಮುಖಿ ಆಗುತ್ತಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ ಭಾರತ ಸೆಮಿ ಫೈನಲ್​ಗೆ ಪ್ರವೇಶ ಪಡೆಯುವ ಅವಕಾಶ ಹೊಂದಿದೆ.

 

 ಎಲ್ಲದರು ನ್ಯೂಜಿಲೆಂಡ್ ಗೆದ್ದರೆ ವಿರಾಟ್ ವಿರಾಟ್ ಕೊಹ್ಲಿ (Virat Kohli) ಪಡೆ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಮಧ್ಯಾಹ್ನ ಆರಂಭವಾಗಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು, ಹೈವೋಲ್ಟೇಜ್ ಪಂದ್ಯವಾಗುವ ಲಕ್ಷಣಗಳಿವೆ. ಭಾರತೀಯ ಅಭಿಮಾನಿಗಳಂತು ಅಫ್ಘಾನ್ ಗೆಲುವಿಗೆ ಪ್ರಾರ್ಥಿಸುತ್ತಿದ್ದಾರೆ.

 

ಹೌದು, ಅಫ್ಘಾನಿಸ್ತಾನ ಗೆಲುವು ಭಾರತಕ್ಕೆ ಬಹುಮುಖ್ಯವಾಗಿದೆ. ಆಗ ಮೂರೂ ತಂಡಗಳ ಅಂಕ ಸಮನಾಗಲಿದೆ (ತಲಾ 6). ರನ್‌ರೇಟ್‌ನಲ್ಲಿ ಮುಂದಿರುವ ತಂಡಕ್ಕೆ ನಾಕೌಟ್‌ ಅದೃಷ್ಟ ಒಲಿಯಲಿದೆ. ಇಲ್ಲಿ ಕೊಹ್ಲಿ ಪಡೆಗೆ ಅವಕಾಶ ಹೆಚ್ಚು ಎಂಬುದರಲ್ಲಿ ಅನುಮಾನವಿಲ್ಲ.

 ಏಕೆಂದರೆ, ಸೋಮವಾರದ ಕಟ್ಟಕಡೆಯ ಲೀಗ್‌ ಪಂದ್ಯದಲ್ಲಿ ಭಾರತ ದುರ್ಬಲ ನಮೀಬಿಯಾವನ್ನು ಎದುರಿಸಲಿರುವುದರಿಂದ ಲೆಕ್ಕಾಚಾರದ ಆಟ ಸಾಧ್ಯವಾಗಲಿದೆ. ಸ್ಕಾಟ್ಲೆಂಡ್ ವಿರುದ್ಧ 86 ರನ್ ಗುರಿಯನ್ನು 6.3 ಓವರ್‌ಗಳಲ್ಲೇ ಕ್ರಮಿಸಿರುವ ಭಾರತ (+1.619), ಈಗಾಗಲೇ ನ್ಯೂಜಿಲೆಂಡ್ (+1.277) ಹಾಗೂ ಅಫ್ಗಾನಿಸ್ತಾನಗಿಂತಲೂ (+1.481) ಉತ್ತಮ ರನ್‌ರೇಟ್ ಕಾಯ್ದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಅಫ್ಘಾನ್ ತಂಡವು ರಶೀದ್ ಖಾನ್, ಮೊಹಮ್ಮದ್ ನಬಿ ಹಾಗೂ ರೆಹಮಾನ್ ಅವರನ್ನು ಅವಲಂಭಿಸಿದ್ದು, ಇವರ ಸ್ಪಿನ್ ಮೋಡಿ ನಡೆದರೆ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಬಹುದು.

ಅಷ್ಟೇ ಅಲ್ಲದೆ ಬ್ಯಾಟಿಂಗ್​ನಲ್ಲಿ ಝಝೈ, ನಜೀಬ್, ಶೆಹಝಾದ್ ಹಾಗೂ ನಬಿ ಎಂತಹ ಬೌಲರುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಆಟಗಾರರು. ಹೀಗಾಗಿ ಅಫ್ಘಾನಿಸ್ತಾನ್ ವಿರುದ್ದ ನ್ಯೂಜಿಲೆಂಡ್​ಗೆ ಗೆಲುವು ಸುಲಭವಲ್ಲ ಎಂದೇ ಹೇಳಬಹುದು.

ಅನುಭವಿ ಬೌಲರ್‌ಗಳಾದ ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ, ಆ್ಯಡಂ ಮಿಲ್ನೆ, ಇಶ್‌ ಸೋಧಿ, ಮಿಚೆಲ್‌ ಸ್ಯಾಂಟ್ನರ್‌ ನ್ಯೂಜಿಲೆಂಡ್ ತಂಡದ ದೊಡ್ಡ ಆಸ್ತಿಯಾಗಿದ್ದಾರೆ. ಬ್ಯಾಟಿಂಗ್​ನಲ್ಲಿ ಮಾರ್ಟಿನ್ ಗುಪ್ಟಿಲ್ ಕ್ರೀಸ್ ಕಚ್ಚಿ ನಿಂತರೆ ತಡೆಯುವುದು ಕಷ್ಟ. ನಾಯಕ ಕೇನ್ ವಿಲಿಯಮ್ಸನ್ ಮೇಲೂ ಹೆಚ್ಚು ನಂಬಿಕೆ ಇಡಲಾಗಿದೆ.