Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಆಫ್‌ಲೈನ್‌ನಲ್ಲೂ ಇನ್ನು ಆಧಾರ್‌ ದೃಢೀಕರಣ: ಹೊಸ ವ್ಯವಸ್ಥೆ ಜಾರಿ!

 

 

ನವದೆಹಲಿ(ನ.11): ಆಧಾರ್‌ ದೃಢೀಕರಣವನ್ನು (Aadhar Verification) ಇನ್ನು ಮುಂದೆ ಆಫ್‌ಲೈನ್‌ನಲ್ಲೂ ಮಾಡಬಹುದಾದ ಹೊಸ ವ್ಯವಸ್ಥೆಯನ್ನು ಆಧಾರ್‌ ಪ್ರಾಧಿಕಾರ ಜಾರಿಗೆ ತಂದಿದೆ. ಈಗ ಇರುವ ಆನ್‌ಲೈನ್‌ ದೃಢೀಕರಣಕ್ಕೆ ಹೆಚ್ಚುವರಿಯಾಗಿ ಜನರು ಈ ಸೌಲಭ್ಯವನ್ನು ಪಡೆಯಲಿದ್ದಾರೆ.

 

ಬ್ಯಾಂಕ್‌ ಅಥವಾ ಇನ್ನು ಕೆಲವು ಸಂಸ್ಥೆಗಳು ತಮ್ಮ ಗ್ರಾಹಕರಿಂದ ಇ-ಕೆವೈಸಿ (e-KYC) ದೃಢೀಕರಣವನ್ನು ಕೇಳುತ್ತಿರುತ್ತವೆ. ಆಗ ಆಧಾರ್‌ ದೃಢೀಕರಣವು ಆನ್‌ಲೈನ್‌ನಲ್ಲಿ ನಡೆಯುತ್ತದೆ. ಅಂದರೆ ಗ್ರಾಹಕರ ಮೊಬೈಲ್‌ಗೆ ಒಟಿಪಿ (OTP) ಬರುತ್ತದೆ. ಒಟಿಪಿ ಹೇಳಿದಾಗ ಆಧಾರ್‌ ಸಂಖ್ಯೆ ದೃಢೀಕರಣಗೊಂಡು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದು ಈವರೆಗಿನ ಆನ್‌ಲೈನ್‌ ದೃಢೀಕರಣ ವ್ಯವಸ್ಥೆ.

ಆದರೆ ಇನ್ನು ಮುಂದೆ ಆಫ್‌ಲೈನ್‌ನಲ್ಲೂ ಆಧಾರ್‌ ದೃಢೀಕರಣ ನಡೆಸಬಹುದು. ಆಧಾರ್‌ ಪ್ರಾಧಿಕಾರವು ತನ್ನ ವೆಬ್‌ಸೈಟ್‌ನಲ್ಲಿ ಅಳವಡಿಸಿರುವ ಆಫ್‌ಲೈನ್‌ ದೃಢೀಕರಣ ವ್ಯವಸ್ಥೆಯಲ್ಲಿ ಜನರು ತಮ್ಮೆಲ್ಲ ಆಧಾರ್‌ ವಿವರಗಳನ್ನು (ಹೆಸರು, ಆಧಾರ್‌ ಸಂಖ್ಯೆ, ವಿಳಾಸ, ಫೋಟೋ ಇತ್ಯಾದಿ) ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ವಿವರವೆಲ್ಲ ಕಂಪ್ಯೂಟರ್‌ ಅಥವಾ ಮೊಬೈಲ್‌ನ ಒಂದು ಫೋಲ್ಡರ್‌ನಲ್ಲಿ ಸಂಗ್ರಹವಾಗುತ್ತದೆ.

 

ಬ್ಯಾಂಕ್‌ ಅಥವಾ ಇತರ ಇಲಾಖೆಗಳು ಗ್ರಾಹಕರಿಂದ ಇ-ಕೆವೈಸಿ ಕೇಳಿದಾಗ ಇದೇ ಫೋಲ್ಡರ್‌ನಲ್ಲಿನ ದತ್ತಾಂಶವನ್ನು ಹಸ್ತಾಂತರಿಸಬಹುದು. ಆಗ ಒಟಿಪಿ ಗೊಡವೆ ಇರುವುದಿಲ್ಲ. ಇದು ಹೊಸ ಆಫ್‌ಲೈನ್‌ ದೃಢೀಕರಣವಾಗಿದೆ.

ಇನ್ನು ತಮ್ಮ ಆಧಾರ್‌ ವಿವರಗಳನ್ನು ಸ್ವಯಂಚಾಲಿತವಾಗಿ ದೃಢೀಕರಣಕ್ಕೆ ಬಳಸಿಕೊಳ್ಳಕೂಡದು ಎಂದೂ ಜನರು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಬಹುದು.