Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಯುವ ಸಾಹಿತಿ ಪರಮೇಶ ವಿಳಸಪೂರೆ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಆಯ್ಕೆ ಔರಾದ: ಯುವ ಸಾಹಿತಿ ಪತ್ರಕರ್ತ ಪರಮೇಶ ವಿಳಸಪೂರೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ಇವರು ಬರಹಗಾರರಾಗಿದ್ದು, ಅತಿ ಚಿಕ್ಕ ವಯಸ್ಸಿನಲ್ಲೇ ಬುದ್ಧ ಬಸವ ಅಂಬೇಡ್ಕರರ್ ಕುರಿತು ಅನೇಕ ಅರ್ಥ ಪೂರ್ಣವಾಗಿ ಲೇಖನಗಳು ಮತ್ತು ಕವನಗಳು ರಚಿಸಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ, ಪರಮೇಶ ವಿಳಸಪೂರೆ ಅವರು ಪತ್ರಿಕಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಗ್ರಾಮಿಣ ಭಾಗದ ಅನೇಕ ಸಮಸ್ಯೆಗಳಿಗೆ ಪತ್ರಿಕೆಯಲ್ಲಿ ವರದಿ ಮಾಡುವ ಮೂಲಕ ಸೂಕ್ತ ಪರಿಹಾರ ಒದಗಿಸಿ ಕೊಟ್ಟಿದ್ದಾರೆ.ವಿಶ್ವ ಕನ್ನಡಿಗರ ಸಂಸ್ಥೆಯಿಂದ ಕೂಡಲಾಗುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷರಾದ ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ತಾಲೂಕಿನ ಸಾಹಿತಿಗಳಾದ ಬಾಲಾಜಿ ಅಮರವಾಡಿ,ಶಾಲಿವಾನ ಉದ್ಗಿರೆ, ರಿಯಾಜಪಾಶ್ ಕೊಳ್ಳೂರ್, ಮಹೇಶ್ವರಿ ಹೇಡೆ, ಜಗನ್ನಾಥ ಮೂಲಗೆ, ಸತೀಶ ವಗ್ಗೆ, ನಾಗೇಶ ಸ್ವಾಮಿ ಹಾಗೂ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.