Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

 

ತಿರುವು ಪಡೆದ ಪುನೀತ್ ಸಾವು: ವೈದ್ಯರ ಮೇಲೆ ಅಭಿಮಾನಿಗಳ ಆರೋಪ

ಬೆಂಗಳೂರು: ಪುನೀತ್ ರಾಜಕುಮಾರ ಅಗಲಿ ಒಂದು ವಾರ ಕಳೆದರು ಅಭಿಮಾನಿಗಳ ದುಃಖ ಕಡಿಮೆಯಾಗಿಲ್ಲ. ಎತ್ತ ನೋಡಿದತ್ತ ಅಪ್ಪುವಿನ ನಾಮವನ್ನೇ ಅಭಿಮಾನಿಗಳು ಜಪಿಸುತ್ತಿದ್ದರೆ ಇತ್ತಕಡೆ ಅಪ್ಪು ಸಾವು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹಲವರು ಪುನೀತ್ ಸಾವು ತನಿಖೆಯಾಗಲಿ ಎಂದು ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಟ್ರೆಂಡ್ ಮಾಡಿತ್ತಿದ್ದಾರೆ. ಇನ್ನು ಹಲವರು ಪುನೀತ್ ರಾಜಕುಮಾರ ಅವರಿಗೆ ಸರಿಯಾದ ಪ್ರಾಥಮಿಕ ಚಿಕಿತ್ಸೆ ನೀಡದೇ ಇರುವುದು ಅವರ ಸಾವಿಗೆ ಕಾರಣವಾಗಿದೆ ಎಂದು ವೈದ್ಯರ ಮೇಲೆ ಗಂಭೀರ ಆರೋಪ ಮಾಡುತ್ತಿದ್ದು ದಿನದಿಂದ ದಿನಕ್ಕೆ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿ.

ಖ್ಯಾತ ನಟ ಪುನೀತ್ ರಾಜಕುಮಾರ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಅವರ ಕುಟುಂಬ ವೈದ್ಯ ಡಾ.ರಮಣರಾವ್ ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.

 

ಡಾ.ರಮಣ ರಾವ್ ಅವರು ಸರಿಯಾಗಿ ಪ್ರಾಥಮಿಕ ಚಿಕಿತ್ಸೆ ನೀಡದಿರುವುದೇ ಪುನೀತ್ ಸಾವಿಗೆ ಕಾರಣ ಎಂದು ಅಭಿಮಾನಿಗಳು ಮತ್ತು ಕೆಲವು ಕನ್ನಡ ಸಂಘಟನೆಗಳು ಆರೋಪಿಸಿದ್ದು, ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.

 

ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಅಪ್ಪುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದ ಅವರ ಕುಟುಂಬ ವೈದ್ಯ ಡಾ. ರಮಣರಾವ್ ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ

ಪುನೀತ್ ಅವರಿಗೆ ತಕ್ಷಣಕ್ಕೆ ಬೇಕಾದ ಔಷಧಗಳನ್ನು ನೀಡಲಿಲ್ಲ. ಅಂಬುಲೆನ್ಸ್ ನಲ್ಲಿ ವಿಕ್ರಂ ಆಸ್ಪತ್ರೆಗೆ ಕಳಿಸಲಿಲ್ಲ. ರಮಣರಾವ್ ಆಸ್ಪತ್ರೆಯಿಂದ ಪುನೀತ್ ಅವರನ್ನು ಎತ್ತಿಕೊಂಡು ಹೋಗಲಾಗಿದೆ. ಅಂತಹ ಸ್ಥಿತಿ ಇದ್ದರೂ ಅಲ್ಲೇ ಚಿಕಿತ್ಸೆ ಕೊಡದೆ ಕಾರಿನಲ್ಲಿ ಕಳಿಸಿಕೊಡಲಾಗಿದೆ ಎನ್ನುವುದು ಅಭಿಮಾನಿಗಳ ಆರೋಪ.

 

ಆದರೆ ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ರಮಣ ರಾವ್, ನನ್ನ ಮಗನಾಗಿದ್ದರೂ ನಾನು ಇದೇ ಚಿಕಿತ್ಸೆ ನೀಡುತ್ತಿದ್ದೆ. ಅಂಬುಲೆನ್ಸ್ ತರಿಸಿ ಕಳಿಸುವುದು ತಡವಾಗುತ್ತದೆ ಎನ್ನುವ ಕಾರಣಕ್ಕೇ ನಾನು ಕಾರಿನಲ್ಲಿ ಕಳಿಸಿದ್ದೆ. ತಕ್ಷಣಕ್ಕೆ ಏನು ಬೇಕೋ, ಏನೇನು ಮಾಡಬಹುದೋ ಅದನ್ನೆಲ್ಲ ಮಾಡಲಾಗಿದೆ. ನನ್ನದು ಸಣ್ಣ ಕ್ಲಿನಿಕ್ ಅಷ್ಟೆ. ಇಲ್ಲಿ ಹೆಚ್ಚಿನ ಚಿಕಿತ್ಸೆ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ವಿಕ್ರಂ ಆಸ್ಪತ್ರೆಗೆ ಕಳಿಸಲಾಗಿದೆ. ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ತಿಳಿಸಿದ್ದಾರೆ.