Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

 

ಬಸವಕಲ್ಯಾಣ: ತಾಲ್ಲೂಕಿನ ಹಳ್ಳಿ ಗ್ರಾಮದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65ರ ಹೋಟೆಲ್‍ ಬಾಬಾ ರಾಮದೇವ್‍ ಡಾಬಾದಲ್ಲಿ 3.686 ಕೆ.ಜಿ ಪಾಪಿ (ಅಫೀಮು) ಪೌಡರನ್ನು ಅಬಕಾರಿ ಇಲಾಖೆ‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಜಪ್ತಿಯಾದ ಅಫೀಮು ಸುಮಾರು ₹ 55 ಸಾವಿರದಷ್ಟು ಇದ್ದು, ಕಾನಾರಾಮ ಚತುರಾ ಹಾಗೂ ಜಗದೀಶ ಪ್ರಹ್ಲಾದ್‍ ಕೌಡಿಯಾಳ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.


ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ, ನಿರೀಕ್ಷಕ ನಾನಾಗೌಡ ಕೆರೂರ್, ಸುರೇಶ್‍ ಶಂಕರ್, ಸಿಬ್ಬಂದಿ ವಿಶ್ವನಾಥ ಸ್ವಾಮಿ, ಸೈಯದ್‍ ವಸೀಂ, ಮಹಮ್ಮದ್‍ ಮತೀನ್‍ ಅವರಿದ್ದ ತಂಡ ದಾಳಿ ನಡೆಸಿತ್ತು.