Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಮನುಷ್ಯನಿಗೆ ನೆಮ್ಮದಿಯೇ ಅತಿ ದೊಡ್ಡ ಸಂಪತ್ತು

ಬೀದರ್:ನ.8: ಮನುಷ್ಯನಿಗೆ ನೆಮ್ಮದಿಯೇ ಅತಿ ದೊಡ್ಡ ಸಂಪತ್ತು. ಹೀಗಾಗಿ ಬಡತನವೇ ಇರಲಿ, ಸಿರಿತನವೇ ಇರಲಿ ಸಂತೃಪ್ತಿಯಿಂದ ಬದುಕಬೇಕು ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.

ಹುಮನಾಬಾದ ತಾಲ್ಲೂಕಿನ ನಂದಗಾಂವ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮಕ್ಕಳು ಮೊಬೈಲ್‍ನ್ನು ಜ್ಞಾನವೃದ್ಧಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇಂದಿನ ಕೇಲ ಮಕ್ಕಳು ಕೆಟ್ಟ ಚಟಕ್ಕೆ ಬಿದ್ದು ತಮ್ಮ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಕೆಟ್ಟ ಚಟಗಳಿಂದ ಆರೋಗ್ಯ ಹಾಳಾಗುತ್ತದೆ ಪೋಷಕರು ಮಕ್ಕಳನ್ನೂ ಪೊಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಾತ್ಮರ ಜೀನವ ಸಾಧನೆ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು. ಶಕ್ತಿ ಇರುವಾಗಲೇ ಎಲ್ಲರೂ ಕೆಲಸ ಮಾಡಿ ಬದುಕಬೇಕು, ಪರಮಾತ್ಮನನ್ನು ದಿನಾಲು ಬೆಳಗಿನ ಜಾವ ಪೂಜಿಸಬೇಕು ಅಲ್ಲದೇ ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಬಾಳಬೇಕು ಎಂದು ನುಡಿದರು.

ಇದಕ್ಕೂ ಮೊದಲು ಗ್ರಾಮದ ಹುನುಮಾನ ದೇವಸ್ಥಾನದಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು. ಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಸಾವಿರಾರು ಜನ ಭಕ್ತಿ, ಶ್ರದ್ಧೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖರಾದ ರವಿ ಕೊಟ್ಟಗೇರಾ, ಸತೀಷ ರಾಂಪೂರೆ ವಕೀಲರು, ಗೋಪಾಲ ಮೇತ್ರೆ, ಕವಿ ಕ್ಯಾದೆ, ಈಶ್ವರ ಕುಂಚನ, ಜಗನ್ನಾಥ ಹಣಮಶೆಟ್ಟಿ, ಗೊಂವಿಂದ ರಂಜರಿ, ರಾಜೇಶ ಸಂಬಾಜಿ, ಮಲ್ಲಪ್ಪ ಮೋಳಕೇರಾ, ರಮೇಶ ಬೇಳಕೇರಾ, ವಿಶಾಲ ಕಾಳಗೆ ಇದ್ದರು.