Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

  ಸುರೇಶ ಚನಶೆಟ್ಟಿ ಯವರ ಕಿರು ಪರಿಚಯ

ಸಾಂಸ್ಕøತಿಕ ಸಂಘಟನೆ ಸಮಾಜೋಧಾರ್ಮಿಕ ಸೇವೆಗಳಿಗೆ ಅರ್ಪಿಸಿಕೋಡಿರುವ ಇವರು ಮೂಲತಃ ಬೀದರ ತಾಲೂಕಿನ ಸಂಗುಳಗಿ ಗ್ರಾಮದ ಪ್ರತಿಷ್ಟಿತ ಚನಶೆಟ್ಟಿ  ಪರಿವಾರದಲ್ಲಿ 01. 06. 1975 ರಂದು ಜನಿಸಿದ್ದು  ಇವರು ಎಂ. ಎ (ಸಮಾಜ ಶಾಸ್ತ್ರ) ಪದವಿಧರರಾಗಿದ್ದಾರೆ. ಬೀದರನ ಭಾಷೆ, ಸಾಹಿತ್ಯ ಮತ್ತು ಸಾಂಸ್ಕøತಿಕ ನೆಲೆಗಳನ್ನು ಕಟ್ಟುವಲ್ಲಿ ನನ್ನದು ಒಂದು ಪಾತ್ರವಿದ್ದು.  ಜಾಗತೀಕರಣದ ಕರಿನೆರಳಿನಿಂದ ಸ್ಥಳೀಯ ಭಾಷೆ ಸಂಸ್ಕøತಿ ನಲುಗುತ್ತಿರುವಾಗ ಅವನ್ನು ಉಳಿಸುವ ಸಲುವಾಗಿಸ್ಥಳೀಯ ಕಲೆ, ಸಾಹಿತ್ಯ, ಸಂಸ್ಕøತಿಯ ಸಂವರ್ಧನೆಗಾಗಿ ಸಮಾನ ಮನಸ್ಕರೊಂದಿಗೆ ಕನ್ನಡ ಸಾಹಿತ್ಯ ಸಂಘವನ್ನು ಸ್ಥಾಪಿಸಿ  

• ರಾಜ್ಯ ಮಟ್ಟದ ಅಖಿಲ ಕರ್ನಾಟಕ ದೇಶಿ ಸಾಹಿತ್ಯ ಸಮ್ಮೇಳನ, 
• ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ,
• 75 ವಿದ್ಯಾರ್ಥಿಗಳಿಗೆ ಇತರೆ ಸಂಘ ಸಂಸ್ಥೆಗಳ ಸಹಕಾರದಿಂದ ತಲಾ ರೂ. 5000/- ಪ್ರೋತ್ಸಾಹ ಧನ,
• ಕುವೆಂಪು ಸೌಹಾರ್ದ ಸಹಕಾರಿ ಬ್ಯಾಂಕ್ ಸ್ಥಾಪನೆ,
• ಆಯ್ದ ಗ್ರಾಮಗಳಲ್ಲಿ ನಾಟಕೋತ್ಸವ, ಮಾತೃ ಸಮಾವೇಶ, ವಿಚಾರ ಸಂಕೀರ್ಣ,
• ಪತ್ರ ವಾಚನ, ಕನ್ನಡ ಜಾಗೃತಿ ಸಮಾವೇಶ
• ವಿವಿಧ ಕ್ಷೇತ್ರಗಳ ಸಾಧಕರ, ದಾರ್ಶ£ಕರ ಹಾಗೂ ಸಾಹಿತಿಗಳ ನುಡಿನಮನ, ಕವಿಗೋಷ್ಠಿ, ಅಭಿನಂದನಾ ಸಮಾರಂಭ ಸೇರಿದಂತೆ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿರುವರು..

  ಮಾಹಿತಿ ತಂತ್ರಜ್ಞಾನ ಬೆಳೆದಂತೆ ಆಧುನಿಕತೆ ಹೆಚ್ಚಾಗಿ ಜೀವನ ಪ್ರೀತಿ ಕಡಿಮೆಯಾಗುತ್ತಿದೆ. ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಗ್ಯಾಸೆಟ್ ಲೋಕದಲ್ಲೇ ಮುಳುಗುತ್ತಿರುವ ನಮಗೆ ಅಕ್ಷರ ಲೋಕದ ಪುಸ್ತಕ ಸಂಸ್ಕøತಿಯ ಉಳಿವು  ಅಷ್ಟೇ ಮುಖ್ಯವಾಗಿದ್ದರಿಂದ ಸ್ಥಳೀಯ ಲೇಖಕರು, ಕಲಾವಿದರನ್ನು, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು,  ಸ್ಥಳೀಯ ಕಲೆ, ಸಾಹಿತ್ಯವನ್ನು ಸಾಂಸ್ಕøತಿಕವಾಗಿ ದಾಖಲಿಸುವುದು, ಕನ್ನಡಿಗರಲ್ಲಿ ಓದುವ ಅಭಿರುಚಿಯನ್ನು  ಮೂಡಿಸುವುದು. ಒಟ್ಟಾರೆ ಕನ್ನಡ, ಕನ್ನಡಿಗ, ಕರ್ನಾಟಕ ಇವುಗಳ ಹಿತಚಿಂತನೆಯೊಂದೆ ಸಂಘದ ಮೊದಲ ಮತ್ತು ಕೊನೆಯ ಆಶಯವೆಂದರಿತು ಸ್ಥಳೀಯ ಲೇಖಕರ ಪುಸ್ತಕ ಪ್ರಕಟಣೆ ಮಾಡುತಿದ್ದಾರೆ.
 ಕನ್ನಡ ಸಾಹಿತ್ಯ ಸಂಘದಿಂದ
1) ಅಕ್ಷರ ಕಲ್ಯಾಣ, 2)ಬಹಮನಿ, ಬರೀದಶಾಹಿ ಸಾಮ್ರಾಜ್ಯ ಮತ್ತು ಬೀದರಿನ ಐತಿಹಾಸಿಕ ಸ್ಥಳಗಳು,  
3)ಅಭಿವೃದ್ಧಿಯ ರೂವಾರಿ ಬಸವಲಿಂಗಪ್ಪ ಕೊಂಡಾ(ಪ್ರೊ. ಬಿ.ಆರ್. ಕೊಂಡಾ – ಜೀವನ ಸಾಧನೆ) ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ

ನಿರ್ವಹಿಸಿದ ಹುದ್ದೆಗಳು :
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ  
ಪ್ರಥಮ ಯುವ ಕನ್ನಡ ಸಾಹಿತ್ಯ ಸಮ್ಮೇಳನ, ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ
ಹಲವಾರು ಪ್ರಥಮ ಸಮಾರಂಭಗಳನ್ನು ಆಯೋಜಿಸಿರುವರು.
ನಿರ್ವಹಿಸುತ್ತಿರುವ  ಹುದ್ದೆಗಳು : 
ಕನ್ನಡ ಸಾಹಿತ್ಯ ಸಂಘದ ಸಂಸ್ಥಾಪಕ ಅಧ್ಯಕ್ಷರು
ಕುವೆಂಪು ಸೌಹಾರ್ದ ಸಹಕಾರಿ ನಿ. ಅಧ್ಯಕ್ಷರು ,ಜಿಲ್ಲಾ ಯುವ ಬಸವ ಕೇಂದ್ರದ ಅಧ್ಯಕ್ಷರು ,ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ, 
ಎಸ್.ಜೆ.ಎಸ್.ಎಂ ವಿದ್ಯಾಪೀಠದ ಆಡಳಿತ ಮಂಡಳಿ ನಿರ್ದೇಶಕರಾಗಿ,
ಹೀಗೆ ಹಲವಾರು ಹುದ್ದೆಗಳನ್ನು ಅಲಂಕರಿಸಿ   ನಿರಂತರ ವಿಧಾಯಕ ಕಾರ್ಯಗಳ ಮೂಲಕ ಜನಮನ ಗೆಲ್ಲುತ್ತಲೆ  ಆಯಾ ಹುದ್ದೆಗಳಿಗೆ ಗೌರವ ತಂದುಕೊಡುತ್ತಿದ್ದಾರೆ. ವಿಚಾರಶೀಲತೆ ವೈಚಾರಿಕತೆ ಇವರ ಜೀವನ ಸಿದ್ಧಾಂತಗಳಾಗಿದ್ದು
ಹುಟ್ಟು ಹೋರಾಟಗಾರರಾದ ಇವರು ಯುವ ಉತ್ಸಾಹಿ ತರುಣರಾಗಿದ್ದಾರೆ.