Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

 

ಬೀದರ್

ಸುರೇಶ ಚನ್ನಶೆಟ್ಟಿಯವರು ಮಾಡಿರುವ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ

ಕೊರೊನಾದಿಂದ ಮುಂದೂಡಲ್ಪಟ್ಟ ಕಸಾಪ ಚುನಾವಣೆಯು 21 ನವಂಬರ್ 2021 ಭಾನುವಾರ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದು. ಸುರೇಶ ಚನ್ನಶೆಟ್ಟಿ ರವರ ಪರವಾಗಿ ಇಂದು ಬೀದರ ನಗರದ ವಿದ್ಯಾನಗರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಲ್ಲಿ ಮನವಿ ಮಾಡಿಕೊಳ್ಳಲಾಯಿತು ಹಿರಿಯ ಸಾಹಿತಿಗಳು ಹಾಗು ಮತದಾರರು ಸುರೇಶ ಚನ್ನಶೆಟ್ಟಿಯವರು ಮಾಡಿರುವ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಕಳೆದ ಐದು ವರ್ಷದಲ್ಲಿ ಅವರು ಮಾಡಿರುವ ಕೆಲಸ ಗಳೆ ಅವರಿಗೆ ಶ್ರೀರಕ್ಷೆಯಾಗಲಿದೆ ಕಳೆದ ಬಾರಿಕಿಂತ ಈ ಬಾರಿ ಅತಿ ಹೆಚ್ಚು ಮತಗಳು ಪಡೆದು ವಿಜಯಶಾಲಿ ಆಗುವವರು ಎಂದು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿದ್ಯಾವತಿ ಬಲೂರು, ಕಸ್ತೂರಿ ಪಡಪಳ್ಳಿ, ಶಿವಕುಮಾರ, ರಾಜಮ್ಮಚಿಕಪೆಟ್ಟ, ಸಂಜು ಅಲ್ಲೂರೆ, ಅಶೋಕ ದಿಡಿಗೆ, ಸಿದ್ದಾರೂಡ ಭಾಲ್ಕಿ, ಬಸವರತ್ನ ಸಂಗೋಳಗಿ, ವೀರಶೆಟ್ಟಿ ಚನ್ನಶೆಟ್ಟಿ, ಗುರುಬಸವ, ಗಂಗಮ್ಮಶಾಂತು ಬಿರಾದಾರ ಸಕಲೇಶ್ವರಿ ಸುರೇಶ ಚನ್ನಶೆಟ್ಟಿ, ಮುಂತಾದವರು ಪಾಲ್ಗೊಂಡಿದ್ದರು