Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಭಾಷಾ ಬಾಂಧವ್ಯದ ಕೊಂಡಿ ನಿರ್ಮಿಸಿದ ಚೆನ್ನಶೆಟ್ಟಿ

 

ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಹೊಂದಿರುವ ಬೀದರ್ ಜಿಲ್ಲೆಯಲ್ಲಿ ಕನ್ನಡಕ್ಕೆ ಬೇಕಿರುವುದು ಸಿಂಹಾಸನವಲ್ಲ ಬದಲಿಗೆ ಉರುಗೋಲು ಎಂಬುದು ನನ್ನ ಮನದಾಳದ ಮಾತು.

 

ಹೆಮ್ಮೆಯ ಪ್ರತೀಕವಾಗಿ ಹೇಳುವುದಾದರೇ ಬೀದರ್ ಜಿಲ್ಲೆ ಕರ್ನಾಟಕದ ಕಿರೀಟವಾಗಿದ್ದು, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ವಿಶೇಷ ಜಿಲ್ಲೆ. ಒಂದು ಪ್ರದೇಶದ ಅಭಿವೃದ್ಧಿ ಅಲ್ಲಿಯ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಹಿರಿಯ ಲೇಖಕರು, ಕವಿಗಳಿಂದ ತಿಳಿದುಕೊಂಡಿರುವುದು ಇಲ್ಲಿ ಪ್ರಸ್ತುತ.

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಕೆಲ ವಿಚಾರಗಳು ಹಂಚಿಕೊಳ್ಳುವುದಾದರೇ ಔರಾದ ನಿವಾಸಿಯಾದ ನಾನು ಕನ್ನಡವನ್ನು ಪ್ರೀತಿಯಿಂದ ಅಪ್ಪಿಕೊಂಡರು ತೊದಲು ನುಡಿಯಲ್ಲಿ ಮಾತನಾಡುವ ನನಗೆ ಕವನಗಳು ಬರೆಯುವಂತೆ ಪ್ರೇರೆಪಿಸಿದ್ದು, ಜಗನ್ನಾಥ ಮೂಲಗೆ ಎಂಬ ಕನ್ನಡದ ದೈತ್ಯ ಶಕ್ತಿ ಎಂದರೆ ತಪ್ಪಾಗದು.

 

ನನ್ನಂತಹ ಅದೆಷ್ಟೋ ಭಾಷಾ ಅಲ್ಪಸಂಖ್ಯಾರನ್ನು ಗುರುತಿಸಿ ಹೃದಯದಲ್ಲಿ ಕನ್ನಡದ ಬೀಜ ಬಿತ್ತುವ ಮೂಲಕ ಗಡಿಯಲ್ಲಿ ಕನ್ನಡವನ್ನು ಬೆಳೆಸುತ್ತಿರುವ ಮೂಲಗೆ ಅವರ ಕಾರ್ಯವೈಖರಿ ನನಗೆ ಅಚ್ಚುಮೆಚ್ಚು. ನಿಸ್ವಾರ್ಥ, ನಿಷ್ಕಲ್ಮಶ ಹೃದಯದಿಂದ ಸುರೇಶ್ ಚೆನ್ನಶೆಟ್ಟಿ ಅವರಿಗೆ ಬೆಂಬಲಿಸುತ್ತಿರುವ ಮೂಲಗೆ ಅವರು ಕನ್ನಡದ ವಿಚಾರದಲ್ಲಿ ನನಗೆ ಸದಾ ಆದರ್ಶಪ್ರಾಯರು.

 

ಕ್ರಿಯಾಶೀಲ ವ್ಯಕ್ತಿ ಸುರೇಶ್ ಚೆನ್ನಶೆಟ್ಟಿ ಮತ್ತು ಸರಳತೆಯ ಪೂಜಾರಿ ಜಗನ್ನಾಥ ಮೂಲಗೆ ಅವರು ಗಡಿಯಲ್ಲಿ ಹೆಚ್ಚಿನ ಜರೂರಿಯಾಗಿದ್ದಾರೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಪ್ರೀತಿ, ಮಮತೆಯಿಂದ ಕನ್ನಡದತ್ತ ಮರಾಠಿ, ತೆಲುಗು, ಉರ್ದು ಭಾಷಿಕರನ್ನು ಬರಮಾಡಿಕೊಳ್ಳುವ ಹೃದಯವಂತರು.

ಗಡಿ ತಾಲೂಕು ಕೇಂದ್ರ ಔರಾದ್ ನಲ್ಲಿ ಬಹುಭಾಷಾ ಕವಿ ಗೋಷ್ಠಿ ಮಾಡಿ ಎಲ್ಲ ಭಾಷಿಕರಿಂದಲೂ ಸೈ ಎನಿಸಿಕೊಂಡ ಈ ತಂಡದಿಂದ ಕನ್ನಡದ ಅಭಿವೃದ್ಧಿಗೆ ಪೂರಕವಾದ ಕನಸುಗಳು ಕಟ್ಟಿಕೊಂಡರು ತಪ್ಪಿಲ್ಲ ಎಂಬುದಂತು ನೈಜ ಸತ್ಯ. ಹಾಗಾಗಿ ಪ್ರಸ್ತುತ ಜಿಲ್ಲೆಯಲ್ಲಿ ಕನ್ನಡವನ್ನು ತಳದಿಂದ ಕಟ್ಟುತ್ತಿರುವ ಸುರೇಶ್ ಚೆನ್ನಶೆಟ್ಟಿ ಮತ್ತು ಮೂಲಗೆ ಅವರ ಅವಧಿಯಲ್ಲಿ ಕನ್ನಡದ ಅನೇಕ ಕಾರ್ಯಗಳು ನಡೆದಿರುವುದು, ನಡೆಯುವುದು ಖಚಿತವಾಗಿದೆ. ಮುಂಬರುವ ಕಸಾಪ ಚುನಾವಣೆಯಲ್ಲಿ ಚೆನ್ನಶೆಟ್ಟಿ ಅವರಿಗೆ ಬೆಂಬಲಿಸಿ ಕೈ ಬಲಪಡಿಸುವಂತೆ ವಿನಂತಿಸಿಕೊಳ್ಳುವೆ.

 

ಸೈಯದ್ ಮೋಸಿನ್ ಅನ್ಸಾರಿ

ಹಿರಿಯ ಪಶು ವೈದ್ಯಕೀಯ ಪರೀಕ್ಷಕರು

ಪಶು ಸಂಗೋಪನಾ ಇಲಾಖೆ