Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಕಸಾಪ ಚುನಾವಣೆ : ಚನ್ನಶೆಟ್ಟಿ ಪರ ಒಲವು

ಇದೇ ನವೆಂಬರ್ ೨೧ ರಂದು‌ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯಲಿದೆ.

ಶ್ರೀ ಸುರೇಶ ಚನ್ನಶೆಟ್ಟಿ ತನ್ನ ಸಾಮಾಜಿಕ ಬದುಕಿನ ಜೀವನವನ್ನ ಧಾರ್ಮಿಕ ಕೈಂಕರ್ಯಗಳಿಂದ ಆರಂಭಿಸಿ, ಬಸವ ಕೇಂದ್ರದ ನಿಷ್ಠಾವಂತ ಕಾರ್ಯಕರ್ತನಾಗಿ ಜನಮಾನಸದಲ್ಲಿ ಬೆಳೆದವರು. ಕನ್ನಡ ನಾಡು ನುಡಿಯ ಬಗ್ಗೆ ತಮಗಿರುವ ಆಸಕ್ತಿಯ ಕಾರಣ ಹಾಗೂ ಅಭೇಧ್ಯವಾದ ಸಂಘಟನಾ ನೈಪುಣ್ಯತೆಯಿಂದ ಬೀದರನಲ್ಲಿ ಜರುಗುವ ಪ್ರತಿಯೊಂದು ಕಾರ್ಯಕ್ರಮಗಳ ಹಿಂದಿನ ರೂವಾರಿಯಾಗಿ ಗುರುತಿಸಿಕೊಂಡರು.

ತಾಲೂಕು ಕಸಾಪ ಅಧ್ಯಕ್ಷರಾದ ಮೇಲೆ ಚೆನ್ನಶೆಟ್ಟಿಯವರ ಕನ್ನಡ ಕಾಯಕ ನಿರಂತರವಾಗಿ‌ ಮುನ್ನಡೆದುಕೊಂಡು, ಜಿಲ್ಲಾಧ್ಯಕ್ಷರಾಗಿ ಕನ್ನಡ ರಾಜರಾಜೇಶ್ವರಿಯ ಸೇವೆ ಅವಿರತ ಮುಂದುವರೆಸಿದ್ದಾರೆ. ಬೀದರ ಕನ್ನಡಿಗರ ಕನಸಿನ ಕೂಸಾದ ಕನ್ನಡ ಭವನ ಕಾಮಗಾರಿಯನ್ನು ಆರಂಭಿಸಿ ಮುಕ್ತಾಯ ಹಂತಕ್ಕೆ ತಂದಿದ್ದಾರೆ.
ಯಾವುದೇ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ಕನ್ನಡ ತಾಯಿಯ ಸೇವೆಯಲ್ಲಿ ಸುಖ ಕಂಡವರು. ತನ್ನೊಳಗೆ ನಯ ವಿನಯದ ಸಿರಿವಂತಿಕೆಯನ್ನು ತುಂಬಿಕೊಂಡಿರುವ ಚೆನ್ನಶೆಟ್ಟಿಯವರು ಹಿರಿ ಕಿರಿಯರನ್ನು ಗೌರವಯುತವಾಗಿ ಕಾಣುತ್ತಾರೆ. ಬೈದವರನ್ನು ಬಂಧುಗಳೆನ್ನುವ ಔದಾರ್ಯತೆ ಅವರಲ್ಲಿದೆ. ಕನ್ನಡದ ಕಾರ್ಯ ಚಟುವಟಿಕೆಗಳಲ್ಲಿ ಯಾವತ್ತೂ ಉದಾಸೀನತೆ ತೋರದೆ ಅದನ್ನು ಬಸವಣ್ಣನ ಸೇವೆಯೆಂದೇ ತಿಳಿದು ಮಾಡುವ ಅವರು ಬಸವ ಮತ್ತು ಕನ್ನಡ ತನ್ನೆರಡು ಕಣ್ಣುಗಳಂತೆ ಎಂದು ಭಾವಿಸಿದ್ದಾರೆ.

ಕನ್ನಡ ನಾಡು ನುಡಿ ಸೇವಕರೆ ಪರಿಷತ್ತಿಗೆ ಅರ್ಹರೇ ಹೊರತು ಇಂಗ್ಲಿಷ್, ಹಿಂದಿ, ತೆಲಗು, ತಮಿಳು ಪ್ರೀತಿಯ ಸೇವಕರು ಬೇಕಾಗಿಲ್ಲ.

– ರವಿ ಬಿರಾದಾರ ಜ್ಯಾಂತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಹಾಗೂ ಬೆಳಗಾವಿ ರಾಯಚೂರು ಜಿಲ್ಲಾ ಉಸ್ತುವಾರಿ