Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love
  • ನಾಲ್ವರ ಗುದ್ದಾಟದಲ್ಲಿ ಜಿಲ್ಲಾ ಕಸಾಪ ಗದ್ದುಗೆ ಯಾರಿಗೆ..?
  • ಬೀದರ್ ಕಸಾಪ ಕದನದಲ್ಲಿ ಕುತೂಹಲಕಾರಿ ತಿರುವು
  • ಇಬ್ಬರ ಜಗಳ ಮೂರನೇಯವರಿಗೆ ಲಾಭ..!
  • ಜಸ್ಟ್ ಬೀದರ್ ಜಾಲತಾಣದ ಸಮೀಕ್ಷೆಯಲ್ಲಿ ಮತದಾರರು ನೀಡಿದ್ರು ಶಾಕಿಂಗ್ ಉತ್ತರ..!

 

ಜಿಲ್ಲಾ ಕಸಾಪ ಗದ್ದುಗೆ ಹಿಡಿಯಲು ಈ ಸಲ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಖಾಡದಲ್ಲಿ ನಾಲ್ವರು ಅಭ್ಯರ್ಥಿಗಳಿದ್ದರೂ ಸುರೇಶ ಚನ್ನಶೆಟ್ಟಿ ಹಾಗೂ ಡಾ. ರಾಜಕುಮಾರ ಹೆಬ್ಬಾಳೆ ನಡುವೆ ನೇರ ಕುಸ್ತಿ ಬಿದ್ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 ಕಳೆದ ಮೂರು ತಿಂಗಳಿನಿಂದ ಪ್ರಚಾರಕ್ಕೆ ಧುಮುಕಿದ್ದು, ಅಧ್ಯಕ್ಷ ಸ್ಥಾನ ಅಲಂಕರಿಸಲು ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಜಿಲ್ಲೆಯಲ್ಲಿ 12,837 ಮತದಾರರಿದ್ದು, ಇವರ ಮನವೊಲಿಕೆಗೆ ಎಲ್ಲಿಲ್ಲದ ಕಸರತ್ತು ನಡೆದಿವೆ. ಇದೇ ಮೊದಲ ಸಲ ರಾಜಕೀಯ ಚುನಾವಣೆ ಮಾದರಿಯಲ್ಲಿ ಪರಿಷತ್ ಪ್ರಚಾರ ನಡೆದಿರುವುದು ಕದನ ಕುತೂಹಲ ಹೆಚ್ಚಿಸಿದೆ.

 

ಕಸಾಪ ಗದುಗೆಗೆ ಹೈವೋಲೆಟ್ಜ್  ಕುಸ್ತಿ

 ರಾಜಕುಮಾರ ಹೆಬ್ಬಾಳೆ-ಸುರೇಶ ಚನ್ನಶೆಟ್ಟಿ ಮಧ್ಯೆ ಬಿಗ್ ಫೈಟ್ 

 

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ  ಕೇವಲ 4 ದಿವಸ ಬಾಕಿ ಉಳಿದಂತೆಯೇ ಕನ್ನಡಿಗರ ಸಂಸ್ಥೆಯ ಗದ್ದುಗೆ ಹಿಡಿಯಲು ಹವಣಿಸುತ್ತಿರುವ ಪ್ರಬಲ ಅಭ್ಯರ್ಥಿಗಳು ಕೊನೇ ಹಂತದ ಕಸರತ್ತು ಆರಂಭಿಸಿದ್ದಾರೆ.

 

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ಕಾವಿನ  ನಡುವೆ ಕಸಾಪ ಪ್ರಚಾರವೂ ಜೋರಾಗಿ ನಡೆದಿದೆ. ಮತಯಾಚನೆ  ಬೀದರ ಬೇಸಿಗೆ ಬಿಸಿಲಿಗಿಂತಲೂ ಕಡಕ್ ಆಗಿದೆ.

ರಾಜಕೀಯ ಚುನಾವಣೆ ಮಾದರಿಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅಬ್ಬರದ ಪ್ರಚಾರ ನಡೆಯುತ್ತಿದೆ. ರಾಜಕೀಯಕ್ಕೆ ಮೀರಿಸುವಂತ ಪ್ರಚಾರ ಮತ್ತು ಅಶ್ವಾಸನೆಗಳು  ಸಾಹಿತ್ಯ ವಲಯದಲ್ಲೂ ರಾರಾಜಿಸುತ್ತಿವೆ  

 

ಹೆಬ್ಬಾಳೆ ಮತ್ತು ಚೆನ್ನಶೆಟ್ಟಿ ತಮ್ಮ ಗೆಲುವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದರಿಂದ ಕಣ ರಂಗೇರಿದೆ.

 ಇಬ್ಬರೂ ತಮ್ಮದೇ ಗುಂಪು ಕಟ್ಟಿಕೊಂಡು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಮುಖ ಸಾಹಿತಿ, ಚಿಂತಕರು, ಕನ್ನಡಪರ ಸಂಘಟನೆಗಳ ಪ್ರಮುಖರು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದವರೆಲ್ಲರೂ ಈಗ ಎರಡೂ ಗುಂಪಿನಲ್ಲಿ ಹಂಚಿಹೋಗಿದ್ದಾರೆ.

 ಸಾಹಿತ್ಯ ಕ್ಷೇತ್ರದಲ್ಲಿ ಇವರ ಬಿಗ್ ಫೈಟ್ ಬಗ್ಗೆಯೇ ಚರ್ಚೆ ನಡೆದಿದೆ.ಕಳೆದ ಕೆಲವು ದಿನಗಳಿಂದ ಶಾಲೆಯಲ್ಲಿ ಪಾಠ ಮಾಡಬೇಕಿದ್ದ  ಶಿಕ್ಷಕರು  ಸಹ ಚುನಾವಣೆ ಪ್ರಚಾರದಲ್ಲಿ ತಿರುಗುತ್ತಿರುವುದು ಈ ಚುನಾವಣೆಯ ಕಾವು ಏನು ಅಂತ ಜಿಲ್ಲೆಯ ಜನರಿಗೆ ಅರ್ಥ ವಾಗುತ್ತಿದೆ .

 

 ಜಿಲ್ಲೆಯಲ್ಲಿ ಒಟ್ಟು 12,837 ಮತದಾರರಿದ್ದಾರೆ. ಕಳೆದ ಬಾರಿ  ಸಲ 8622 ಮತದಾರರಿದ್ದರು. ಈ ಬಾರಿ 4215 ಮತಗಳ ವೃದ್ಧಿಯಾಗಿದ್ದರಿಂದ, 12,837 ಎರಿಕೆಯಾಗಿದೆ

ಸುರೇಶ ಚನ್ನಶೆಟ್ಟಿ 3ನೇ ಬಾರಿ ಪರಿಷತ್ ಅವಾಡದಲ್ಲಿದ್ದಾರೆ. 2012ರಲ್ಲಿ ಸೋತರೆ, 2016ರಲ್ಲಿ ಸಿದ್ರಾಮಪ್ಪ ಮಾಸಿಮಾಡ ವಿರುದ್ಧ ಗೆದ್ದಿದ್ದರು. ಈ ಬಾರಿ ಮಾಸಿಮಾಡೆ ಅವರು ಚುನಾವಣೆಯಿಂದ ದೂರ ಸರಿದಿದ್ದಾರೆ. ಕಳೆದ ಬಾರಿ ಚನ್ನಶೆಟ್ಟಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ಗೆಲುವಿಗೆ ಸಹಕರಿಸಿದ ರಾಜಕುಮಾರ ಹೆಬ್ಬಾಳೆ ಇದೀಗ ಪ್ರಬಲ ಎದುರಾಳಿಯಾಗಿದ್ದಾರೆ. ಹಿಂದಿನ ತಮ್ಮ ಅವಧಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನಕ್ಕೆ ಜಾಗ ಕೊಡಿಸಿ, ಕಾಮಗಾರಿಗೆ ಚಾಲನೆ ನೀಡಿರುವುದು ಸೇರಿ ಅನೇಕ ಕೆಲಸ ಮಾಡಿದ್ದಾರೆ ,

 

 

ಪರಿಷತ್‌ನ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮತ್ತೊಂದು ಅವಧಿಗೆ ಕಣಕ್ಕಿಳಿದರೆ, ಪ್ರತಿಸ್ಪರ್ಧಿಯಾಗಿ  ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ , ಕರುನಾಡು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ. ಅತಿವಾಳೆ ಹಾಗೂ ಸಿದ್ದಲಿಂಗಯ್ಯ ಭಂಕಲಗಿ ಕಣದಲ್ಲಿದ್ದಾರೆ ,

 ಈಗಿನ ಅಖಾಡದ ಸ್ಥಿತಿಗತಿ ಅವಲೋಕಿಸಿದರೆ ಹೆಬ್ಬಾಳ ಮತ್ತು ಚನ್ನಶೆಟ್ಟಿ ನಡುವೆ ನೇರ ಕುಸ್ತಿ ಬಿದ್ದಿರುವುದು ಕಂಡುಬಂದಿದ್ದು, ಕದನ ಕುತೂಹಲ ಕೆರಳಿಸಿದೆ,

 

 

ಸುರೇಶ ಚನ್ನಶೆಟ್ಟಿ ಮತ್ತೋಂದು ಬಾರಿ ಅಧ್ಯಕ್ಷ ಸ್ಥಾನಕ್ಕಾಗಿ  ತಮ್ಮ ಟೀಮ್ ಜತೆಗೆ ಒಂದು ಕೈ ನೋಡೇಬಿಡೋಣ ಎಂದು ಪ್ರಚಾರದಲ್ಲಿ ಧುಮುಕಿದ್ದಾರೆ. ಯುವಪಡೆ ಇವರ ಬೆಂಬಲಕ್ಕೆ ನಿಂತಿರುವುದು ಜೋಶ್ ತಂದುಕೊಟ್ಟಿದೆ. ಕನ್ನಡ ಭವನದ ಉಳಿದ ಕಾಮಗಾರಿ ಪೂರ್ಣ ಸೇರಿ ಇತರ ಸಾಹಿತ್ಯ ಕೆಲಸವನ್ನು ಮಾಡಲು ಮತ್ತೊಂದು ಬಾರಿ  ಅವಕಾಶ ನೀಡಿ ಎಂದು ಈ ತಂಡ ಪ್ರಚಾರದಲ್ಲಿ ತೊಡಗಿದೆ.

 

 

ಪರಿಷತ್‌ನಲ್ಲಿ ಬದಲಾವಣೆ ಆಗಬೇಕು. ಯುವಕರಿಗೆ, ಹೊಸಬರಿಗೂ ಅವಕಾಶ ಸಿಗಬೇಕು ಎಂಬ ಅಜೆಂಡಾದಿಂದ ಹೆಬ್ಬಾಳೆ ಕೂಡ ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ , ನನಗೆ ಬೆಂಬಲಿಸಿದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಸಹಕಾರ ನೀಡುವೆ ಎಂದು ಕಳೆದ ಬಾರಿ ಚುನಾವಣೆಯಲ್ಲಿ ಭರವಸೆ ನೀಡಿದ್ದ ಚನ್ನಶೆಟ್ಟಿ ಅವರು ಹೆಬ್ಬಾಳ ತಂಡಕ್ಕೆ ಮೋಸ ಮಾಡಿದ್ದಾರೆ. ಹೀಗಾಗಿ ಈಗ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಕೊಡಿ ಎಂದು ಹೆಬ್ಬಾಳೆ ತಂಡ ಪ್ರಚಾರ ನಡೆಸುತ್ತಿದೆ.

 

ಈ ಮಧ್ಯೆ ಸಂಜೀವಕುಮಾರ ಆಶಿವಾಳಿ ಸಹ ತಮ್ಮದೇ ಬಳಗದೊಂದಿಗೆ ಪೈಪೋಟಿಯೊತ್ತುವ ಮೂಲಕ ಹೆಬ್ಬಾಳೆ ಹಾಗೂ ಚನ್ನಶೆಟ್ಟಿ ಪಾಳಯದೆ ಚಿಂತೆ ಒಂದಿಷ್ಟು ಜಾಸ್ತಿ ಮಾಡಿದ್ದಾರೆ. ಇವರು ಎಷ್ಟು ಮತ ಪಡೆಯಬಹುದು? ಯಾರ ಮತ ಕಬಳಿಸಬಹುದು ಎಂಬ ಚರ್ಚೆ ನಡೆದಿವೆ. ಸಿದ್ದಲಿಂಗಯ್ಯ ಭಂಕಲಗಿ ಅವರು ಮತದಾರರಿಗೆ ಭೇಟಿಯಾಗಿ ನಮಗೂ ಅವಕಾಶ ಕೊಡಿ ಎಂದು ಕೋರುತ್ತಿದ್ದಾರೆ.

ನಮ್ಮ ಜಸ್ಟ್ ಬೀದರ ವೆಬ್ ಜಾಲತಾಣದ ಪ್ರಕಾರ ಸುರೇಶ ಚೆನ್ನಶೆಟ್ಟಿ ಬರೋಬ್ಬರಿ 5,000 ಕ್ಕೂ ಅಧಿಕ ಮತ ಪಡೆಯಲ್ಲಿದ್ದಾರೆ ,ಜೊತೆಗೆ ಪ್ರಬಲ ಎದುರಾಳಿ  ರಾಜಕುಮಾರ ಹೆಬ್ಬಾಳೆ  ಸರಿಸುಮಾರು 4,000ಸಾವಿರ ಮತಗಳು ಪಡೆಯಲ್ಲಿದ್ದಾರೆ , ಇನ್ನುಳಿದ ಮತಗಳು ಬೇರೆ ಅಭ್ಯರ್ಥಿಗಳಿಗೆ  ಹಂಚಿ ಹೊಗಲಿವೆ

ಬೀದರ್‌ನಲ್ಲಿ ಅಧಿಕ ಮತದಾರರು

ಜಿಲ್ಲೆಯಲ್ಲೇ ಬೀದರ್ ತಾಲೂಕಿನಲ್ಲಿ ಅತೀ ಹೆಚ್ಚು 6023 ಮತದಾರರಿದ್ದಾರೆ. ಈ ಪೈಕಿ ನಗರ ಪ್ರದೇಶದಲ್ಲಿರುವ ಮತದಾರರೇ ಸಂಖ್ಯೆ ಅಧಿಕ. ಹೀಗಾಗಿ ಪ್ರಬಲ ಅಭ್ಯರ್ಥಿಗಳು ಈ ತಾಲೂಕಿಗೆ ಹೆಚ್ಚು ಒತ್ತು ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ಉಳಿದಂತೆ ಭಾಲ್ಕಿ ತಾಲೂಕಿನಲ್ಲಿ 1649, ಬಸವಕಲ್ಯಾಣ 1249, ಔರಾದ್ 1203, ಹುಮನಾಬಾದ್ 1049, ಕಮಲನಗರ 681, ಚಿಟಗುಪ್ಪ461 ಹಾಗೂ ಹುಲಸೂರು ತಾಲೂಕಿನಲ್ಲಿ 922 ಮತದಾರರಿದ್ದಾರೆ.

ಜಿಲ್ಲೆಯಲ್ಲಿ 15 ಮತಗಟ್ಟೆ ಸ್ಥಾಪನೆ

ಪರಿಷತ್ ಚುನಾವಣೆ ಸಂಬಂಧ ಜಿಲ್ಲಾದ್ಯಂತ 15 ಮತಗಟ್ಟೆ ಸ್ಥಾಪಿಸಲಾಗಿದೆ. ಜಿಲ್ಲಾ, ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಇದೇ 21ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ನಂತರ ಮತದಾನ ನಡೆದ ಕೇಂದ್ರದಲ್ಲೇ ಮತ ಎಣಿಕೆ ನಡೆಯಲಿದೆ. ಬೀದರ್ ನಗರದಲ್ಲೇ 6 ಬೂತ್ ಇದ್ದರೆ, ಬಗದಲ್‌ನಲ್ಲಿ 1 ಬೂತ್ ಇದೆ. ಭಾಲ್ಕಿಯಲ್ಲಿ 2, ಔರಾದ್, ಕಮಲನಗರ, ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ ಹಾಗೂ ಹಾಲನೂರಿನಲ್ಲಿ ತಲಾ ಒಂದೊಂದು ಬೂತ್ ಸ್ಥಾಪಿಸಲಾಗುತ್ತಿದೆ. ಮತದಾರರು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಒಂದು ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಂದು ಮತದಾನ ಮಾಡಬಹುದು.

ಸಂಪಾಕೀಯ :ಹಣಮಂತ ದೇಶಮುಖ