Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

    ಔರದ್ ತಾಲ್ಲೂಕಿನ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ ನಲ್ಲಿ

   1.ಶೆಂಬೆಳ್ಳಿ ಗ್ರಾಮದ ಕುಟುಂಬಕ್ಕೆ ಚವ್ಹಾಣ ಸಾಂತ್ವಾನ

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಬಸವರಾಜ ಎಂಬುವವರು  ನಿಧನರಾಗಿದ್ದರಿಂದ ಇಂದು ಅವರ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿದರು. ಈ ಸಂದರ್ಭದಲ್ಲಿ   ಕಾರ್ಯಕರ್ತರು ಹಾಗೂ ಮತ್ತಿತರರು ಇದ್ದರು,

 

  2.ಶಾಲೆ ಕಾಮಗಾರಿ ವೀಕ್ಷಣೆ ಮಾಡಿದ ಚವ್ಹಾಣ

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೊಕರ್ಣಾ ಗ್ರಾಮದಲ್ಲಿ ನಡೆಯುತ್ತಿರುವ ಶಾಲಾ ಕಟ್ಟಡ ಕಾಮಗಾರಿಯನ್ನ ಸಚಿವರಾದ ಪ್ರಭು ಚವ್ಹಾಣ ಅವರು ಇಂದು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಧಿಕಾರಿಗಳಿಗೆ ಕಾಮಗಾರಿ ಉತ್ತಮ ಗುಣಮಟ್ಟದ್ದಾಗಿರುವಂತೆ ಕಾಮಗಾರಿ ಮಾಡಿ ಎಂದು ಹೇಳಿದರು.

 

     3.ಯಾವುದೇ ಸಮಸ್ಯೆ ಇದ್ದರೂ ತಿಳಿಸಿ: ಚವ್ಹಾಣ

ತಾಲೂಕಿನಲ್ಲಿ ಯಾರಿಗಾದರು ಸಹಾಯ ಬೇಕಿದ್ದರೂ ಕರೆಮಾಡಿ ತಿಳಿಸಿ ನನ್ನ ಕಡೆಯಿಂದ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದಹ ಸಚಿವರಾದ ಪ್ರಭು ಚವ್ಹಾಣ ಅವರು ಹೇಳಿದರು. ಇಂದು ಔರಾದ್ ತಾಲೂಕಿನಲ್ಲಿ ಪ್ರಶಾಂತ ಪೋಚುಂಡೆ ಅವರನ್ನು ಭೇಟಿಯಾದ ಚವ್ಹಾಣ ಸಹಾಯಕ್ಕಾಗಿ ಬಂದವರನ್ನು ಹಾಗೆ ಕಳುಹಿಸಬೇಡಿ ಎಂದು ಹೇಳಿದರು.

 

 4.ಬಡ ಮುಸ್ಲಿಂ ಮಹಿಳೆಗೆ ಚವ್ಹಾಣ ಸಹಾಯ

ಔರಾದ್ ತಾಲೂಕಿನ ಏಕಂಬಾ ಗ್ರಾಮದ ಮುಸ್ಲಿಂ ಸಮುದಾಯದ ಬಡ ಕುಟುಂಬದ ಮಗಳಮದುವೆಯ ಕಾರ್ಯಕ್ರಮಕ್ಕೆ ಪಶುಸಂಗೋಪನೆ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಕುಟುಂಬಸ್ಥರಿಗೆ ವೈಯಕ್ತಿಕ ಸಹಾಯಧನ ಮಾಡಿ ಮದುವೆಯ ಶುಭವನ್ನು ಹಾರೈಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಮತ್ತಿತರರು ಇದ್ದರು.