Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

1.ಮೈಸೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುತ್ತಿರುವ ಬಿಜೆಪಿಯ ಧೋರಣೆ ಖಂಡಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.ಪುರಭವನ ಮುಂಭಾಗದ ಅಂಬೇಡ್ಕರ್‌ ಪ್ರತಿಮೆ ಬಳಿ ನೆರೆದ ಪ್ರತಿಭಟನಕಾರರು ಬಿಜೆಪಿಯ ಕುತಂತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

2.ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದಾಳಿ ಮುಂದುವರಿಸಿದ್ದಾರೆ. ದಲಿತ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ , ಪರ್ಸೆಂಟೇಜ್‌ ʼಭಾಗ್ಯʼ ಎಂಬ ಬೆಣ್ಣೆ ತಿಂದು ದಲಿತರ ಮುಖಕ್ಕೆ ಒರೆಸಿದ ಕೋತಿಯ ಕಥೆ ನಿಮ್ಮದು ಎಂದು ಟೀಕಿಸಿದ್ದಾರೆ.

 

3. ಬೆಂಗಳೂರು :ನೀವು ಹೊಟ್ಟೆಪಾಡಿಗಾಗಿ ಖರ್ಗೆ ಅವರಿಂದ ಪ್ರತಿಪಕ್ಷ ನಾಯಕನ ಸ್ಥಾನ ಕಸಿದಿರಿ, ಪರಮೇಶ್ವರರನ್ನು ಸೋಲಿಸಿದಿರಿ, ಮಹಾದೇವಪ್ಪ ಅವರನ್ನು ಓಡಿಸಿದಿರಿ, ಜಾತಿ ಗಣತಿ ಮಾಡಿಸಿದಿರಿ, ನಿಮ್ಮ ಹೊಟ್ಟೆಪಾಡಿಗಾಗಿ ದಲಿತರಿಗೆ ನಿರಂತರ ದ್ರೋಹವೆಸಗಿದ್ದನ್ನು ಮರೆಯಲು ಸಾಧ್ಯವೇ ?ಎಂದು ಬಿಜೆಪಿ ಟ್ವೀಟ್ ಮಾಡಿದೆ.

 

4.ಬೆಂಗಳೂರು: ಸಿದ್ದರಾಮಯ್ಯ ಅವರೂ ವಲಸೆ ಗಿರಾಕಿ. ಜನತಾದಳದಿಂದ ಬಂದು ಕಾಂಗ್ರೆಸ್ಸಿಗರನ್ನು ಮುಗಿಸಿ ಮುಖ್ಯಮಂತ್ರಿಯಾದವರು. ಕಾಂಗ್ರೆಸ್‍ನಲ್ಲಿ ಖರ್ಗೆ ಕಥೆ ಏನಾಗಿದೆ? ಕೇವಲ 250 ಮತಗಳ ಅಂತರದಿಂದ ಗೆದ್ದ ಸಿದ್ದರಾಮಯ್ಯ ದಲಿತ ಮುಖಂಡರನ್ನೆಲ್ಲ ಮುಗಿಸಿದ್ದಾರೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

 

5.ಬೆಂಗಳೂರು: ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಿದ್ದಾರೆ ಎಂದಿರುವ ಸಿದ್ದರಾಮಯ್ಯ ಅವರು ದಲಿತರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರು ಆಗ್ರಹಿಸಿದರು.

 

6.ಮಂಗಳೂರು: ಸಿದ್ದರಾಮಯ್ಯನವರ ವಿರುದ್ದ ಪ್ರತಿಭಟಿಸೋರು ಅಂಬೇಡ್ಕರ್ ವಾದಿಗಳಲ್ಲ, ಗೋಡ್ಸೆ ವಾದಿಗಳು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

 

7.ಬೆಂಗಳೂರು: ದಲಿತ ನಾಯಕರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿಲ್ಲ. ಬಿಜೆಪಿಯವರು ವಿಷಯಾಂತರ ಮಾಡಲು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

8.ಚಿಕ್ಕಮಗಳೂರು: ಕೆಲವು ದಲಿತ ನಾಯಕರು ಹೊಟ್ಟೆಪಾಡಿಗೆ ಬಿಜೆಪಿ ಸೇರಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮೂದಲಿಸಿದ್ದಾರೆ ಎಂದು ಆರೋಪಿಸಿ ಚಿಕ್ಕಮಗಳೂರಿನ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಘಟಕದವರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

 

9.ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ವಿಲೇವಾರಿಯಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರುತ್ತಿದ್ದು, ಜಾನುವಾರುಗಳು ಬಲಿಯಾಗುತ್ತಿರುವ ಘಟನೆ ನಡೆದಿದೆ.ಘನತ್ಯಾಜ್ಯ ಸಮಪರ್ಕವಾಗಿ ವಿಲೇವಾರಿ ಮಾಡದ ಪರಿಣಾಮ ಜಾನುವಾರುಗಳು ಬಲಿಯಾಗುತ್ತಿವೆ.

 

10.ಬೆಂಗಳೂರು :ಅಪ್ಪು ಕುಟುಂಬಸ್ಥರು ನಡೆಸುವ ಎಲ್ಲಾ ಕಾರ್ಯಗಳಲ್ಲೂ ಸರ್ಕಾರ ಸದಾ ಜೊತೆಯಲ್ಲಿರುತ್ತದೆ. ನಮ್ಮ ಕುಟುಂಬದ ಒಬ್ಬರನ್ನ ಕಳೆದುಕೊಂಡಂತಹ ಭಾವನೆಯಿದೆ. ಹಾಗಾಗಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ ಎಂದು ಸಿಎಂ ಬಸವರಾಜು ಬೊಮ್ಮಾಯಿ ತಿಳಸಿದ್ದಾರೆ.

 

11.ಬೆಂಗಳೂರು: 2 ತಿಂಗಳ ಹಿಂದೆ ಜಾಮೀನು ಪಡೆದು ನಾಪತ್ತೆಯಾಗಿದ್ದಂತ ಬಿಟ್ ಕಾಯಿನ್ ಪ್ರಮುಖ ಆರೋಗಿಯ ಶ್ರೀಕಿ ಆಲಿಯಾಸ್ ಶ್ರೀಕೃಷ್ಣನನ್ನು ಬೆಂಗಳೂರು ಪೊಲೀಸರು ಇದೀಗ ಬಂಧಿಸಿದ್ದಾರೆ.

 

12.ಮಹಾರಾಷ್ಟ್ರ: ಮಹಾರಾಷ್ಟ್ರದ ಅಹ್ಮದ್ ನಗರದ ಸಿವಿಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಬೃಹತ್ ಪ್ರಮಾಣದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಂದಿ ರೋಗಿಗಳು ಸಜೀವ ದಹನವಾಗಿದ್ದು ಹತ್ತಾರು ಮಂದಿಗೆ ಗಾಯವಾಗಿದೆ.

 

13.ಹೊಸದಿಲ್ಲಿ : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿತಕ್ಕೆ ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಿ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.

 

14.ನವದೆಹಲಿ: ಆಮ್ ಆದ್ಮಿ ಪಕ್ಷ ಸರ್ಕಾರವು ತನ್ನ ಉಚಿತ ಪಡಿತರ ಯೋಜನೆಯನ್ನು ಮೇ 2022 ರವರೆಗೆ ಆರು ತಿಂಗಳು ವಿಸ್ತರಿಸಲು ನಿರ್ಧರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

 

15.ನವದೆಹಲಿ: ಅಡುಗೆ ಅನಿಲ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ʼಅಭಿವೃದ್ಧಿ ವಾಹನವು ಹಿಮ್ಮುಖವಾಗಿ ಚಲಿಸುತ್ತಿದೆʼ ಎಂದು ವ್ಯಂಗ್ಯವಾಡಿದ್ದಾರೆ.

 

16.ರಾಯ್‌ಪುರ: ದಕ್ಷಿಣ ಛತ್ತೀಸ್‌ಗಢದ ಕಲಹ ಪೀಡಿತ ಸುಕ್ಮಾ ಜಿಲ್ಲೆಯ ಮೋರೆಪಲ್ಲಿ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಂಟು ಶಂಕಿತ ಮಾವೋವಾದಿಗಳನ್ನು ಬಂಧಿಸಲಾಗಿದೆ. 

 

17.ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾಗಿದ್ದಂತ ಇಬ್ಬರು , ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಹೀಗೆ ಪ್ರೀತಿಸುತ್ತಿದ್ದಂತ ಯುವಕ, ಯುವತಿ ಇದೀಗ ನಟ ಪುನೀತ್ ರಾಜ್ ಕುಮಾರ್ ಸಮಾಧಿಯ ಮುಂದೆಯೇ ನೂತನ ದಾಂಪತ್ಯಕ್ಕೆ ಕಾಲಿಡೋದಕ್ಕೆ ತಯಾರಿ ನಡೆಸಿದ್ದಾರೆ.ಇದಕ್ಕಾಗಿ ದೊಡ್ಮನೆಯವರನ್ನು ಕೋರಿದ್ದು, ಇವರಿಗೆ ಅನುಮತಿ ನೀಡಿದ್ದಾಗಿಯೂ ತಿಳಿದು ಬಂದಿದೆ.

 

18.ಬೆಂಗಳೂರು :ತರಕಾರಿ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಕಳ್ಳರ ಪೈಕಿ ಒಬ್ಬಾತ ಸೆರೆ ಸಿಕ್ಕಿದ್ದಾನೆ. ಮತ್ತೊಬ್ಬ ಕಳ್ಳ ತಪ್ಪಿಸಿಕೊಂಡಿರುವುದು ತಿಳಿದುಬಂದಿದೆ. ನಂತರ, ಸ್ಥಳಕ್ಕೆ ಬನಶಂಕರಿ ಠಾಣೆಯ ಪೋಲಿಸರು ಭೇಟಿ ನೀಡಿದ್ದಾರೆ.

 

19.ದುಬೈ :ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಗೆದ್ದರೆ ಭಾರತಕ್ಕೆ ಅವಕಾಶ ಸಿಗಲಿದೆ. ಹಾಗೊಂದು ವೇಳೆ ನ್ಯೂಜಿಲೆಂಡ್ ಸೋಲದಿದ್ದರೆ ಏನು ಮಾಡುತ್ತೀರಿ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು.ಇದಕ್ಕೆ ಉತ್ತರಿಸಿರುವ ಜಡೇಜ, ‘ಹಾಗಾದರೆ ನಾವು ಬ್ಯಾಗ್ ಪ್ಯಾಕ್ ಮಾಡಿ ಮನೆಗೆ ಹೋಗುತ್ತೇವೆ’ ಎಂದು ಹೇಳಿದ್ದಾರೆ.

 

20.ಪಾಕಿಸ್ತಾನ: ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನ ವಿರುದ್ಧ ಸೋತರೆ, ನಂತರ ಹಲವಾರು ಪ್ರಶ್ನೆಗಳನ್ನು ಎತ್ತಲಾಗುತ್ತದೆ. ನಾನು ನಿಮಗೆ ಮೊದಲೇ ಎಚ್ಚರಿಕೆ ನೀಡುತ್ತೇನೆ, ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ಟ್ರೆಂಡಿಂಗ್ ಸುದ್ದಿಯನ್ನು ಪ್ರಾರಂಭಿಸುತ್ತದೆ,ಎಂದು ಅಖ್ತರ್ ಹೇಳಿದರು.