Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

 

ಸಚಿವರ ತವರಲ್ಲೇ ಸಾರ್ವಜನಿಕರ ಪರದಾಟ 

ಸಮಸ್ಯೆಗಳ ಮಡಿಲಲ್ಲಿ ಮತದಾರರ ಅಲೆದಾಟ

ಸಚಿವರುಗಳಿದ್ದರೂ ಕ್ಷೇತ್ರದಲ್ಲಿಲ್ಲ ಸಮಸ್ಯಗಳಿಗೆ ಪರಿಹಾರ

ಸಚಿವ ಪ್ರಭು ಚವ್ಹಾಣರೇ  ಎಲ್ಲಿದ್ದಿರಿ..? ಇದೇನಾ ನಿಮ್ಮ ಅಭಿವೃದ್ಧಿಯ ರೀತಿ..?!

 

ಹೌದು ಇದು ಔರಾದ್ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಗೋಳು ತಾಲೂಕಿನ ಶಾಸಕ ಪ್ರಭು ಚವ್ಹಾಣ ಅವರು ರಾಜ್ಯದ ಕ್ಯಾಬಿನೆಟ್ ಮಂತ್ರಿ, ಔರಾದ ತಾಲೂಕಿನವರೆ ಆದ ಸಂಸದ ಭಗವಂತ ಖೂಬಾ ಅವರು ಕೇಂದ್ರ ಮಂತ್ರಿಗಳು, . ಆದರೆ ಇಬ್ಬರೂ ಮಂತ್ರಿಗಳನ್ನು ಪಡೆದ ಔರಾದನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಮುಕ್ತಿಯಿಲ್ಲ.

ಔರದ್ ಪಟ್ಟಣದ  ಮಿನಿ ವಿಧಾನಸೌಧದಲ್ಲಿ ಹಳ್ಳಿ ಹಳ್ಳಿಗಳಿಂದ ಸಾರ್ವಜನಿಕರು ಮಿನಿ ವಿಧಾನಸೌಧದಲ್ಲಿ ಬಂದು ನಿರಾಶರಾಗಿ ಆಡಿದ ಮಾತುಗಳಿವು, ಮಾತಿಗೆ ನಾನು ಅಭಿವೃದ್ಧಿ ಪರ ಎಂದು ಹೇಳುವ ಸಚಿವರುಗಳು ಅದರ ತದ್ವಿರುದ್ದರಾಗಿದ್ದಾರೆ ಎಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಕೇವಲ ಒಂದು ದಿನ ವಿದ್ಯುತ್ ಕಡಿತಗೊಂಡ ಕಾರಣ ಕಚೇರಿ ಕಾರ್ಯ ಕಲಾಪಗಳಿಗೆ ಸಮಸ್ಯೆಯಾಗಿದೆ. ಇಡೀ ಕಚೇರಿ ಕತ್ತಲೆಯ ಕೂಪವಾಗಿ ಮಾರ್ಪಟ್ಟಿದೆ. ಹೀಗಾದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಜನರೇಟರ್ ವ್ಯವಸ್ಥೆ ಇಲ್ಲದೆ ರೈತರು ಸಾರ್ವಜನಿಕರು ಮಿನಿವಿಧಾನಸೌಧ ಕಟ್ಟಡ ಎದುರಿಗೆ ದಿನ ದೂಡಿದ ಘಟನೆ  ಮಂಗಳವಾರ ನಡೆದಿದೆ.

ಔರಾದ ಮಿನಿವಿಧಾನಸೌಧ ಕಟ್ಟಡ ಅವ್ಯವಸ್ಥೆಗಳಿಂದ ಕೂಡಿದ್ದು ವಿದ್ಯುತ್ ಕಡಿತ ವಾದರೆ ಜನರೇಟರ್‌ ವ್ಯವಸ್ಥೆ ಸರಿಯಿಲ್ಲ. ಬಾಯಿ ಬಿಟ್ಟರೆ ಸಾಕು ಸ್ವಚ್ಛ ಭಾರತ , ಸ್ವಚ್ಛ ಭಾರತ ಎಂದು ಭಾಷಣ ಬೀಗಿಯುವ  ಜನಪ್ರತಿನಿಧಿಗಳು, ಅಧಿಕಾರಿಗಳು ಕಚೇರಿಯಲ್ಲಿ ಶೌಚಾಲಯವಿಲ್ಲದೆ ಪರದಾಡುವ ಪರಿಸ್ಥಿತಿ, ಇದು ನಮ್ಮ ಔರಾದ ತಾಲ್ಲೂಕಿನ ಅಭಿವೃದ್ಧಿಯೆ? ಎಂದು ಸಾರ್ವಜನಿಕರು ದೂರಿದ್ದಾರೆ.

ರಾಜ್ಯ ಮಂತ್ರಿ ಮತ್ತು ಕೇಂದ್ರ ಮಂತ್ರಿ ಮನಸ್ಸು ಮಾಡಿದರೆ ಇಡಿ ತಾಲೂಕಿನ ಚಿತ್ರಣ ಬದಲಿಸಬಹುದು, ಬರಿ ಸುಳ್ಳು ಆಶ್ವಾಸನೆ ನೀಡಿ ಆರಿಸಿ ಬಂದು ತನ್ನ ಸ್ವಕ್ಷೇತ್ರದ ಸವಾಂ೯ಗೀಣ ಅಭಿವೃದ್ಧಿ ಮಾಡದೆ ಇರುವುದು, ಹಿಂದುಳಿದ ತಾಲೂಕುಗಳ ಪಟ್ಟಿ ಶಾಶ್ವತವಾಗಿ ಉಳಿಸಿದ್ದಾರೆ.

ಯಾರು ಬರಲಿ, ಯಾರು ಹೋಗಲಿ ಎಷ್ಟು ಮಂತ್ರಿ ಆದರೇನು ಕೇಂದ್ರ ಮಂತ್ರಿ ಆದರೇನು?

ಔರಾದ ತಾಲ್ಲೂಕು  ಹಿಂದುಳಿದ ಪಟ್ಟಿಯಲ್ಲಿ ಶಾಶ್ವತ ಎಂದು ಸಾರ್ವಜನಿಕರು ದೂರುತ್ತಿದ್ದಾರೆ, ಈಗಲಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ತನ್ನ ತವರು ಕ್ಷೇತ್ರದ ಕೊರತೆಗಳನ್ನು ನಿಗಿಸಬೇಕು. ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಪಡುತ್ತಾರೆಯೆ ಕಾದುನೋಡಬೇಕಿದೆ,