Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸುರೇಶ್ ಚನ್ನಶೇಟ್ಟಿಗೆ ಮತ್ತೋಮ್ಮೆ ಅವಕಾಶ ನೀಡುವಂತೆ ರವಿ ಬಿರಾದಾರ ಜ್ಯಾಂತಿ ಮನವಿ

ಶ್ರೀಯುತ ಸುರೇಶ ಚನ್ನಶೆಟ್ಟಿ ಅವರನ್ನೇ ಕನ್ನಡ ಸಾಹಿತ್ಯ ಪರಿಷತ್ತು ಬೀದರ ಮತ್ತೋಂದು ಅವಕಾಶ ಏಕೆ ನೀಡಬೇಕೆಂದರೆ”

ಸಮಸ್ತ ಕನ್ನಡಸಾಹಿತ್ಯಪರಿಷತ್ತಿನ ಸದಸ್ಯರೆ,
 ಶ್ರೀಯುತ ಶ್ರೀ ಚೆನ್ನಶೆಟ್ಟಿ ಅವರು ಕೂಡ ನೆನೆಗುದಿಗೆ ಬಿದ್ದಿರುವ ತಮ್ಮ ಕನಸಿನ ಸೇವೆಗಳನ್ನು ಪೂರ್ಣಗೊಳಿಸಲು ಸೇವಾ ಆಕಾಂಕ್ಷಿಯಾಗಿ ಮತ್ತೊಮ್ಮೆ ತಮ್ಮೆದುರಿಗೆ ಬಂದಿದ್ದಾರೆ ಅವರ ಕ್ರಮ ಸಂಖ್ಯೆ 3 ಕಾರಣ ಸರ್ವ ಸದಸ್ಯರು ಒಮ್ಮತದಿಂದ ಶ್ರೀಯುತರನ್ನು ಸೇವೆಗೆ ನೇಮಿಸಿಕೊಳ್ಳಬೇಕಾಗಿ ವಿನಮ್ರವಾಗಿ ವಿನಂತಿ..

ಶ್ರೀಯುತರು ಆಯ್ಕೆಯಾದ ನಂತರ ಮಾಡ ಬಯಸಿರುವ ಕಾರ್ಯಗಳು:-

೧) ಜಿಲ್ಲಾ ಕನ್ನಡ ಭವನದ ನಿರ್ಮಾಣ
೨) ತಾಲೂಕು ಕನ್ನಡ ಭವನದ ನಿರ್ಮಾಣ,
೩) ಪ್ರತಿ ತಿಂಗಳಿಗೊಂದರಂತೆ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ ಕವಿಗೋಷ್ಠಿ,
೪) ಪ್ರತಿ ತಿಂಗಳಿಗೊಂದು ತಾಲೂಕು ಮತ್ತು ಜಿಲ್ಲಾ ಸಮಿತಿಗಳ ಸಭೆ ಕಾರ್ಯವೈಖರಿಗಳ ಬಗ್ಗೆ ಚರ್ಚೆ.
೫) ಶಾಲಾ-ಕಾಲೇಜುಗಳಲ್ಲಿ ಕನ್ನಡಪರ ಚಟುವಟಿಕೆ, ವಿದ್ಯಾರ್ಥಿಗಳಿಂದಲೇ ಕವನ ರಚಿಸಿ ಓದುವಂತೆ ಪ್ರತಿ ಶಾಲೆ ಶಾಲೆಗಳಲ್ಲಿ ಕವಿಗೋಷ್ಠಿ.
೬) ಎಲೆಮರೆ ಕಾಯಿಯಂತಿರುವ ಮತ್ತು ಯುವ ಸಾಹಿತಿಗಳಿಗೆ ವೇದಿಕೆ ಕಲ್ಪಿಸುವುದು,
೭) ಮಹಿಳಾ ಸಾಹಿತಿಗಳನ್ನು ಸಂಘಟಿಸುವುದು, ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವದು, ಮಹಿಳಾ ಸಾಹಿತಿಗಳಿಗೆ ಸಾಹಿತ್ಯ ಚಟುವಟಿಕೆಯಲ್ಲಿ ಹೆಚ್ಚಿನ ಪ್ರೋತ್ಸಾಹ,
೮) ರಂಗಭೂಮಿ ಕಲಾವಿದರಿಗೆ, ಜಾನಪದ ಕಲಾವಿದರಿಗೆ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹ ನೀಡುವುದು,
೯) ಯಾವುದೇ ತಾರತಮ್ಯ ಇಲ್ಲದೆ ಎಲ್ಲಾ ಕನ್ನಡ ಆಕ್ತರಿಗೂ ಸಮಾನ ವೇದಿಕೆಯನ್ನು ಕಲ್ಪಿಸುವುದು,
೧೦) ಮಾಧ್ಯಮ ಮಿತ್ರರ, ನಾಡಿನ ಎಲ್ಲ ಹಿರಿಯರ, ಮತ್ತು ಕನ್ನಡ ಮನಸ್ಸುಗಳ, ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ, ಸಲಹೆ-ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುವುದು, ಎಲ್ಲರ ಮಾರ್ಗದರ್ಶನದಂತೆ ಕಾರ್ಯೋನ್ಮುಖವಾಗಿದ್ದು..

ಬಸವ ಮತ್ತು ಕನ್ನಡ ಅಂದರೆ ಸಾಕು ಮನೆ ಪರಿವಾರ ಆರೋಗ್ಯ ಲೆಕ್ಕಿಸದೆ ಸಂಪೂರ್ಣ ತೊಡಗಿಸಿಕೊಂಡು ಕೆಲಸ ಮಾಡುವ ಏಕೈಕ ವ್ಯಕ್ತಿ ಸುರೇಶ್ ಚನ್ನಶೇಟ್ಟಿ ಅವರು ಏನೆ ಕಷ್ಟ ನಷ್ಟ ಬಂದರು ಸಾಮಾಜಿಕ ಕಾರ್ಯದಿಂದ ಎಂದೂ ವಿಮುಖರಾದವರಲ್ಲ, ಕೊಟ್ಟ ಮಾತು  ಬೆಟ್ಟ ದಷ್ಟು ತೊಂದರೆ ಬಂದರೂ ಕನ್ನಡ ಭವನ ಕಟ್ಟಿಯೇ ತೀರುತ್ತೇನೆ ಎಂಬ ಛಲದಿಂದ ಇಂದು ಕನ್ನಡ ಭವನ ಮಂಜೂರು ಆಯಿತು, ಅದನ್ನು ಪೂರ್ಣ ಮಾಡುವ ಅವಕಾಶ ಬೇಡವೇ? ಉಳಿದವರು ಎಲ್ಲಾವರೇ ಅವರು ನಮ್ಮ ಜೋತೆಗೆ ಕನ್ನಡ ಸೇವೆ ಮಾಡಲಿ ಆದರೇ ಇನ್ನೊಂದು ಅವಕಾಶ ಸುರೇಶ್ ಚನ್ನಶೇಟ್ಟಿಯವರಿಗೆ ಇರಲಿ ಎಂಬ ಅಭಿಲಾಷೆ ನನ್ನದಾಗಿದೆ ಬನ್ನಿ ಎಲ್ಲರೂ ಒಟ್ಟು ಗೂಡಿ ಸುರೇಶ್ ಚನ್ನಶೇಟ್ಟಿಯವರನು ಗೆಲ್ಲಿಸೋಣ.

 

ರವಿ ಬಿರಾದಾರ ಜ್ಯಾಂತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಹಾಗೂ ಬೆಳಗಾವಿ ರಾಯಚೂರು ಜಿಲ್ಲಾ ಉಸ್ತುವಾರಿ