Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ್ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಹೊರಬಂದ ನಂತರ ಜಸ್ಟ್ ಬೀದರ.ಕಾಂ ಜೊತೆ ಮಾತನಾಡಿದ ಬಂಟಿ ದರಬಾರೆ  ಬೀದರ್ ಜಿಲ್ಲೆಯ ಮಾಜಿ ಉಸ್ತವಾರಿ ಸಚಿವರು  ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಹಾಗೂ ಹುಮನಬಾದನ ಶಾಸಕರಾದ ರಾಜಶೇಖರ ಪಾಟೀಲ ಅವರ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸಿದ್ದೆವು.ಖಂಡ್ರೆ ಮತ್ತು ಪಾಟೀಲ ಕುಟುಂಬದವರು ಮಾಡಿದಂತಹ ಸೇವೆಯನ್ನು ಗುರುತಿಸಿ ಮತದಾರರು ಭೀಮರಾವ ಪಾಟೀಲ ಅವರಿಗೆ ವಿಜಯಶಾಲಿಯಾಗಿಸಿದ್ದಾರೆ ಎಂದು ದರಬಾರೆ ಹರ್ಷ ವ್ಯಕ್ತ ಪಡಿಸಿದ್ದರು.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರು
ಬಿಜೆಪಿಯ ಪ್ರಕಾಶ್ ಖಂಡ್ರೆಗೆ ಭಾರಿ ಮುಖಭಂಗವಾಗಿದೆ.
ಬಿಜೆಪಿಯ ಇಬ್ಬರು ಸಚಿವರುಗಳು ಮತದಾರರ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು,ಆದರೆ ಬಿಜೆಪಿಯ ಆಶೆ ಮತ್ತು ಆಮಿಷಗಳಿಗೆ  ಮತದಾರರು ಲೆಕ್ಕಿಸದೆ  ನಮ್ಮ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲಗೆ ಗೆಲ್ಲಿಸಿದ್ದಾರೆ
ಕಾಂಗ್ರೆಸ್ನ ಭೀಮರಾವ್ ಪಾಟೀಲ್ 1776 ಮತ ಪಡೆದಿದ್ದು, ಬಿಜೆಪಿಯ ಪ್ರಕಾಶ್ ಖಂಡ್ರೆಗೆ 1555 ಮತಗಳನ್ನ ಪಡೆದಿದ್ದಾರೆ.

ಪಕ್ಷದ ವರಿಷ್ಠರಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿದ ದರಬಾರೆ

ಪಕ್ಷದ  ಜನಪ್ರತಿನಿಧಿಗಳಾದ ಅರವಿಂದ ಅರಳಿ,ರಹಿಮ ಖಾನ, ಹಾಗೂ ಎಲ್ಲ ಪದಾಧಿಕಾರಿಗಳಿಗೆ ಮತ್ತು ಚುನಾವಣೆಯಲ್ಲಿ ಹಗಲಿರಳು ಶ್ರಮಿಸಿದ. ಮತದಾನ ವೇಳೆ ಜಿಲ್ಲೆಯಾದ್ಯಂತ ಸ್ಥಾಪಿಸಿರುವ ಎಲ್ಲ ಮತಗಟ್ಟೆಗಳಲ್ಲಿ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಲು ಸಹಕರಿಸಿದ. ಕಾರ್ಯಕರ್ತರಿಗೆ  ಧನ್ಯವಾದಗಳು ತಿಳಿಸಿದರು.

ಉದ್ಭವ ಲಿಂಗ ಅಮರೇಶ್ವರರ ಮಹಿಮೆ ತಿಳಿಸಿದ ದರಬಾರೆ

ನಾನು  ಚುನಾವಣೆಗೆ ಹೊಗುವ ಮುನ್ನ ನನ್ನ ಕೆಲ ಗೆಳೆಯರ  ಜೊತೆ ಉದ್ಭವಲಿಂಗ ಅಮರೇಶ್ವರರ ಪೂಜೆ ನೇರವೇರಿಸಿದೆ
ಔರಾದನ ಉದ್ಭವಲಿಂಗ ಅಮರೇಶ್ವರ ಸನ್ನಿಧಿಯಲ್ಲಿ ಆಶಿರ್ವಾದ ಪಡೆದು ಭೀಮರಾವ್ ಪಾಟೀಲ ಅವರು ಬೀದರ್ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲವು ಸಾಧಿಸಲಿ ಎಂದು ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಿದೆ.ನಮ್ಮ ಶ್ರೀ ಉದ್ಭವ ಲಿಂಗ ಅಮರೇಶ್ವರರು  ನನ್ನ ಪ್ರಾರ್ಥನೆ ಈಡೇರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು

ಅಭಿಮಾನಿಗಳಿಂದ ಸಂಭ್ರಮಾಚರಣೆ

ಬೀದರ್ ಜಿಲ್ಲೆಯ ವಿವಿಧ ಕಾಂಗ್ರೆಸ್ ಮುಖಂಡರು,
ಜಿಲ್ಲೆಯಾದ್ಯಂತ ಇಂದು ಸಂಭ್ರಮಾಚರಣೆ
ಮಾಡಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ
ಜಯಭೇರಿ ಭಾರಿಸಿದ ಭೀಮರಾವ್ ಪಾಟೀಲ್
ಅವರಿಗೆ ಶುಭ ಹಾರೈಸಿ ಪಟಾಕಿ ಸಿಡಿಸಿ
ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅನೇಕ
ಕಾರ್ಯಕರ್ತರು ಹಾಜರಿದ್ದರು.