Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಹೈದರಬಾದ್ ನಲ್ಲಿ ಕಾಲ್ ಸೆಂಟರ್ ನಲ್ಲಿ ಒಬ್ಬ ಯುವತಿ ಕೆಲಸ ಮಾಡುತಿದ್ದಳು.

ಆಕೆಗೆ ತಂದೆ ಚಿಕ್ಕ ವಯಸ್ಸಿನಲ್ಲೇ ತಿರಿಕೊಂಡಿರುತ್ತರೆ.

ಅಮ್ಮ ಕೆಲ ವರ್ಷಗಳ ಹಿಂದೆ ತಿರಿಕೊಂಡಿದಳು.

ಆ ಹುಡುಗಿ ದಿನಾಲೂ ತನ್ನ ಕೆಲಸಕ್ಕೆ ಬೆಳಿಗ್ಗೆ 9ಗಂಟೆಗೆ ಮನೆಯಿಂದ ಬಿಡುತ್ತಿದ್ದಳು.

ಆದರೆ ಅವಳು ಆಟೋ ಸ್ಟ್ಯಾಂಡ್ ಹೋಗುವ ಮದ್ಯದಲ್ಲಿ ಒಂದು ಕಸದ ಬುಟ್ಟಿ ಇತ್ತು ಆ ಬುಟ್ಟಿ ಬದಿಯಲ್ಲಿ ಒಬ್ಬ ಹುಚ್ಚಾ ಅದರಲ್ಲಿ ಬಿದ್ದಿರುವ ಕೆಟ್ಟೋಗಿರುವ ಅನ್ನ, ಮತ್ತು ಬಾಳೆಹಣ್ಣು ಮತ್ತು ಇತರ ಕೆಲಸಕ್ಕ ಬಾರದ ಹಣ್ಣು ಹಂಪಲು ತಗೊಂಡು ತಿನ್ನಿತಿರುತ್ತನೆ.

ಅವಳು ದಿನಾಲೂ ಅವನನ್ನು ಗಮನಿಸುತ್ತಿದ್ದಾಳು.

ಆದರೆ ಒಂದು ದಿನ ರಾತ್ರಿ ಬರುವಷ್ಟೆಗೆ ಸ್ವಲ್ಪ ಲೇಟ್ ಆಯಿತು ರಸ್ತೆ ಮೇಲೆ ಯಾರು ಇರಲ್ಲ.

ಕೆಲವು ಪೋಕಿರಿ ಜನ ಅಲ್ಲಿ ಅಡ್ಡಾಡುತ್ತಾ ಇರುತ್ತಾರೆ ಇವಳನ್ನು ಕಂಡು ಗುರಾಯಿಸಿ ನೋಡಿ ಈಕೆಯ ಕಡೆ ಬರುತ್ತಿತರೆ ಅವರನ್ನು ಕಂಡ ಆಕೆಗೆ ತುಂಬಾ ಭಯ ಪಡ್ತಿದ್ದಳು ಜೋರಾಗಿ ಮನೆ ಕಡೆ ನಡೆಯಲು ಸಾಗಿದಲು ಆದರೆ ಅವರೆಲ್ಲ ಆಕೆಯನ್ನು ಹಿಂಬಾಲಿಸುತ್ತಾ ಬಂದರು ಸ್ವಲ್ಪ ದೂರ ಬಂದ ಕೂಡಲೇ ಅಲ್ಲಿರುವ ಹುಚ್ಚಾ ಆಕೆಗೆ ಎದುರು ಬರುತ್ತಾನೆ ಅವಳು ಇನ್ನಷ್ಟು ಭಯಪಡುತ್ತಾಳೆ, ಹಿಂದೆ ನೋಡಿದರೆ ಅವರು ಮುಂದೆ ಇವನು ಏನು ಮಾಡೋದು ಗೊತ್ತಾಗಲ್ಲ.
ಹಾಗೆ ಭಯಪಡುತ್ತಾ ಮುಂದಕ್ಕೆ ಬರುತ್ತಿದ್ದಳು ಹಿಂದೆ ಬಂದಿರುವ ಪೋಕಿರಿಗಳು ಅವಳನ್ನು ಹಿಡಿದು ಹಿಂಸಿಸಲು ಸುರು ಮಾಡಿದರು ಅದನ್ನೆಲ್ಲ ಗಮನಿಸಿದ ಆ ಹುಚ್ಚಾ ಅಲ್ಲಿ ಬಂದ ಆಕೆಯನ್ನು ಬಿಡಿಸಲು ಪ್ರಯತ್ನ ಪಟ್ಟ ಅವರೆಲ್ಲ ಅವನ್ನನ್ನು ಹೊಡೆಯಲು ಬಂದಾಗ ಅವನತ್ತ ಇರುವ ಚೀಲದಲ್ಲಿ ಎಲ್ಲ ಕಲ್ಲುಗಳು ತುಂಬಿಕೊಂಡು ಇದ್ದ ಅವಗಳನ್ನು ತಗೊಂಡು ಅವರ ಮೇಲೆ ಹಾಕಲು ಸುರು ಮಾಡಿದ ಕಲ್ಲಿಗೆ ಭಯಪಟ್ಟು ಅಲ್ಲಿಂದ ಅವರೆಲ್ಲ ಓಡಿ ಹೋದರು.

ಅವಳನ್ನು ಕಾಪಡಿದಕ್ಕೆ ಅವನಿಗೆ ಆವಳು ಧನ್ಯವಾದಗಳು ಹೇಳಿ ಮನೆಗೆ ಹೋದಳು.

ಮರು ದಿನ ತನ್ನ ಆಫಿಸ್ ಕೆಲಸಕ್ಕೆ ರಜೆ ಹಾಕಿ ಆ ಹುಚ್ಚನನ್ನು ಹಿಂಬಾಲಿಸಿ ಅವನ ಬಗ್ಗೆ ತಿಳಿಯಲು ಪ್ರಯತ್ನ ಪಟ್ಟಳು.

ಅವನು ತುಂಬಾ ಒಳ್ಳೆಯವನು ಆದರೆ ಅವನ ಈ ಸ್ಥಿತಿಗೆ ಕಾರಣ ಏನು ಎಂಬುದು ತಿಳಿಯದೇ ಅವನ್ನನ್ನು ತನ್ನ ಮನೆಗೆ ಕರೆದುಕೊಂಡು ಬಂದಳು ಅವನನ್ನು ಚೆನ್ನಾಗಿ ಸ್ನಾನ ಮಾಡಿಸಿ ಗಡ್ಡ ಕುದುಳು ಎಲ್ಲ ಕತ್ತರಿಸಿ ಅವನ್ನನ್ನು ಸ್ವಚ್ಚ ಮಾಡಿದಳು ಆಸ್ಪತ್ರೆಗೆ ತೋರಿಸಿ ಅವನ ಹುಚ್ಚುತನ ಹೋಗುವಂತೆ ಮಾಡಿದಳು.

ಅವನಿಗೆ ಚೆನ್ನಾಗಿ ಬುದ್ದಿ ಬಂತು ಅವಳು ಅವನಿಗೆ ಮಾಡಿದ ಸಹಾಯ ಮರೆಯಲಾರದೆ ಅವಳಿಗೆ ಸಹಾಯಕನಾಗಿ ಇದ್ದ.

ಈಗೆ ಇರುವಾಗ ಅವಳ ಜೀವನದ ಘಟನೆಗಳು ಅವನು ತಿಳ್ಕೊಂಡು ತಂದೆ ತಾಯಿ ಇಲ್ಲದೆ ನನ್ನಂತೆಯೇ ತಬ್ಬಲಿಯಾಗಿ ಇದೆಯೆಂದು ತಿಳಿದು ಮದುವೆ ಮಾಡಿಕೊಂಡರೆ ಸಂತೋಷವಾಗಿ ಇರಬಹುದು ಎಂದು ಅವನ ಆಸೆ ಆಗಿತ್ತು ಒಂದು ದಿನ ಪಾರ್ಕ್ ನಲ್ಲಿ ತನ್ನ ಪ್ರೀತಿ ಬಗ್ಗೆ ಹೇಳಬೇಕೆಂದು ಇಚ್ಛೆ ಪಟ್ಟಿದ ಆದರೆ ಅಷ್ಟರಲ್ಲೇ ಆಕೆ ಇನ್ನೊಬ್ಬನನ್ನು ತೋರಿಸಿ ನಾನು ಇತನ್ನನ್ನು ಪ್ರೀತಿಸುತ್ತಿದ್ದೇನೆ ಇವನ್ನನ್ನು ಮದುವೆ ಮಾಡಿಕೊಬೇಕು ಎಂದು ಹೇಳಿದಳು.

ಆ ಹುಚ್ಚನಿಗೆ ಎಲ್ಲಿಲದ ದುಃಖ ಆಯಿತು.
ಆಯಿತು ಅಂತ ಹೇಳಿ ಅಲ್ಲಿಂದ ಹೊರಟು ಹೋದ.

ಅವಳಿಂದ ದೂರ ಹೋಗಿ ಒಂದು ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಕೊಂಡ ಅವನಿಗಿರೋ ಆಸ್ತಿ ಒಂದೇ ಒಂದು ಅವನು ಹುಟ್ಟಿದಾಗ ಪಕ್ಕದಲ್ಲಿ ಒಂದು ಸಣ್ಣ ಚೀಲ ಇತ್ತು ಅದರಲ್ಲಿ ಅವನ ತಾಯಿ ಫೋಟೋ ಇತ್ತು ಆ ಫೋಟೋ ಮಾತ್ರ ಅವನ ಜೊತೆ ಇಟ್ಕೊಂಡು ಇರುತಿದ್ದ ಒಂದು ದಿನ ಹೋಟೆಲ್ ಎದುರುಗಡೆ ಒಬ್ಬ ಮುದುಕಿ ತನ್ನ ಮಗುವಿಗಾಗಿ ಹುಡುಕುತ್ತಿರುವಾಗ ಅವನು ಆಕೆಯನ್ನು ಗಮನಿಸಿ ತನ್ನ ತಾಯಿ ಎಂದು ಗುರುತಿಸಿದ.

ಹೋಗಿ ಕರೆ ತಂದು ತನ್ನ ರೂಮ್ ನಲ್ಲಿ ತಾಯಿಗೆ ಮಗನಾಗಿ ಸೇರಿಕೊಂಡು ಇಬ್ಬರು ಸಂತೋಷದ ಜೀವನ ಕೆಲ ದಿನ ಸಾಗಿಸಿದರು.

ಸುಮಾರು ಒಂದು ವರ್ಷದ ನಂತರ ಅವನು ಕೆಲಸ ಮಾಡುತ್ತಿರುವ ಹೋಟೆಲ್ ಎದುರುಗಡೆ ಒಬ್ಬ ಹುಡುಗಿ ಹುಚ್ಚಿಯಂತೆ ತಿರುಗಾಡಿತಿದ್ದಳು. ಎಲ್ಲರೂ ಆಕೆಯನ್ನು ಆಚೆ ತಳ್ಳುತಿದ್ದರು ಈ ಹುಡುಗ ನೋಡಿದ ತಕ್ಷಣ ಹತ್ತಿರ ಹೋಗಿ ನೋಡಿದ ಆ ಹುಡುಗಿ ಬೇರೆ ಯಾವಳೊ ಅಲ್ಲ ಅವನ್ನನ್ನು ಮನುಷ್ಯನಾಗಿ ಮಾಡಿದ ಹುಡುಗಿ ಇದ್ದಳು.

ಅವನು ಆಶ್ಚರ್ಯ ಪಟ್ಟು ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋದ ಮನೆಗೆ ಹೋಗಿ ತನ್ನ ತಾಯಿಗೆ ನಡೆದುದ್ದೆಲ್ಲ ತಿಳಿಸಿದ.

ಆಕೆಯನ್ನು ಸ್ವಚ್ಚ ಗೊಳಿಸಿ ಆಸ್ಪತ್ರೆ ತೋರಿಸಿ ಅವಳನ್ನು ನಾರ್ಮಲ್ ಸ್ಟೇಜ್ ಗೆ ತಂದರು.

ಅದು ಏನಾಗಿದೆ ಗೊತ್ತಿಲ್ಲ ಮತ್ತೆ ತಾನು ಆಸೆ ಪಟ್ಟ ಹುಡುಗಿ ತಿರುಗಿ ಅವನಲ್ಲೇ ಬಂದಳು ಎಂದು ತಿಳಿದು ಸ್ವಲ್ಪ ಆಸೆ ಪಟ್ಟು ಮದುವೆ ಮಾಡಿಕೊ ಬೇಕು ಎಂದು ಹೇಳಬೇಕೆಂದು ಅದೇ ಪಾರ್ಕ್ ಗೆ ಕರೆದುಕೊಂಡು ಹೋದ ಇವನ ಮನಸಲ್ಲಿ ಇರುವ ಮಾತು ಹೇಳುವಷ್ಟರಲ್ಲಿ ಆಕೆಯನ್ನು ಪ್ರೀತಿಸಿದ ಹುಡುಗ ಪುನಃ ಬಂದ ಅವನನ್ನು ನೋಡಿದ ಆನಂದದಲ್ಲಿ ಓಡಿ ಹೋಗಿ ತಬ್ಬಿಕೊಂಡಳು.

ಇದೆಲ್ಲ ಗಮಿಸಿದ ಆ ಯುವತಿಯ ಸ್ನೇಹಿತೆಯೊಬ್ಬಳು ಹತ್ತಿರ ಬಂದು ಆಕೆಯ ಕೆನ್ನೆ ಮೇಲೆ ಹೊಡೆದಳು.

ನಿನಗಾಗಿ ಹುಟ್ಟಿರುವವನು ಅವನು.

ಇವನು ನಿನ್ನನು ಮೋಸ ಮಾಡಿದಾಗ ನಿನ್ನ ಸ್ಥಿತಿ ಸರಿ ಇಳಲಿಲ್ಲ ಇವನು ನಿನ್ನ ಒಂದು ಜೀವನ ಜೊತೆ ಅಷ್ಟೆ ಅಲ್ಲ ಹಲವಾರು ಹುಡುಗಿಯರ ಜೀವನದ ಜೊತೆ ಅಟಡಿದನೆ ಎಂದು ನಡೆದುದೆಲ್ಲ ತಿಳಿಸಿ ಹೇಳಿದಳು..

ಜೋರಾಗಿ ಅತ್ತು ಅವಳ ತಪ್ಪು ಏನು ಎಂಬುದು ತಿಳಿದು.

ಹೋಟೆಲ್ ಹುಡುಗ ಜೊತೆ ಮದುವೆಯಾದಳು.

ಸಾರಾಂಶ:- ಸ್ವಚ್ಛವಾದ ಮನಸ್ಸಿಂದ ಪ್ರೀತಿಸಿದರೆ ಆ ಪ್ರೀತಿ ಯಾವತ್ತಿಗೂ ದೂರ ಆಗಲ್ಲ.

ನಾನು ಬರೆದಿರುವ ಈ ಕಥೆ ಕಥೆಯಲ್ಲ ನಿಜವಾದ ಜೀವನದಲ್ಲಿ ನಡೆದಿರುವ ಘಟನೆ.

ಪ್ರಸ್ತುತ ಆ ಜೋಡಿ ತುಂಬಾ ಖುಷಿ ಆಗಿದೆ.

ಪ್ರೀತಿ ಮಾಡೋದೇ ಆದರೆ ನಿಯತ್ತಿನಿಂದ ಮಾಡಿ ಪ್ರೀತಿಗೋಸ್ಕರ ಸ್ವರ್ತಿಗಳಾಗಿ ಜೀವನ ನಾಶ ಮಾಡಿಕೊಬೇಡಿ.

ಲೇಖನ:- ವೆಂಕಟಪ್ಪ ಕೆ ಸುಗ್ಗಾಲ್ ಬಿವಿ ನ್ಯೂಸ್ ಸೇಡಂ
(9663416038)