Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಸಂಜೆವಾಣಿ ಪತ್ರಿಕೆ ನಾಡಿನ ಅತ್ಯಂತ ಆಕರ್ಷಕ ಹಾಗೂ ತಾಜಾ ಸುದ್ದಿಗಳನ್ನು ವೇಗವಾಗಿ ಬಿತ್ತರಿಸುತ್ತಿರುವ ಸಂಜೆ ಸಮಯದ ಪತ್ರಿಕೆ:ಘಾಟೆ ಅಭಿಪ್ರಾಯ

ಔರಾದ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅತೀ ಮುಖ್ಯವಾದದ್ದು ಎಂದು ಪಿಎಸ್ಐ ಮಂಜನಗೌಡ ಪಾಟೀಲ್ ಅಭಿಪ್ರಾಯಪಟ್ಟರು.

ಔರಾದ ಪಟ್ಟಣದಲ್ಲಿ ಸಂಜೆವಾಣಿ ಪತ್ರಿಕೆಯ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿ ಪವಿತ್ರ ಕಾರ್ಯ ಮಾಡುತ್ತಿದೆ ಸಕಾಲಕ್ಕೆ ಸರಿಯಾದ ಸುದ್ದಿಗಳನ್ನು ಸಮಗ್ರವಾಗಿ ಓದುಗರಿಗೆ ತಲುಪಿಸುತ್ತಿವೆ, ಸಮಾಜದಲ್ಲಿ ನಮ್ಮ ನಡೆ ನುಡಿಗಳನ್ನು ರೂಪಿಸುವಲ್ಲಿ ಪತ್ರಿಕೆಯ ಪಾತ್ರ ಮಹತ್ವಪೂರ್ಣವಾದ್ದು, ಸಂಜೆವಾಣಿ ಪತ್ರಿಕೆಯು ಇಂದಿನ ಸುದ್ದಿಗಳನ್ನು ಇಂದೆ ರಾಜ್ಯದ ಜನತೆಗೆ ಸುದ್ದಿಗಳನ್ನು ಉಣಬಡಿಸುವ ಅತ್ಯಂತ ನಿಸ್ಪಕ್ಷಪಾತ ಪತ್ರಿಕೆಯಾಗಿದೆ ಎಂದು ತಿಳಿಸಿದರು.

ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ ಅವರು ಮಾತನಾಡಿ ಸಂಜೆವಾಣಿ ಪತ್ರಿಕೆಯು ೧೯೮೨ ರಿಂದ ನೈಜ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಮನೆಮಾತಾಗಿದೆ. ಪತ್ರಿಕೆಗಳು ಜನರ ನೋವು, ಸಂಕಟಗಳಿಗೆ ವೇದಿಕೆಯಾಗಿ ಕಾರ್ಯಪ್ರವೃತ್ತವಾಗಿವೆ, ಸಂಜೆವಾಣಿ ದಿನಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆದು ನಿಲ್ಲಲಿ ಎಂದು ಹಾರೈಸಿದರು.

ಔರಾದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶಿವಕುಮಾರ ಘಾಟೆ ಅವರು ಮಾತನಾಡಿ ಸಂಜೆವಾಣಿ ಪತ್ರಿಕೆಯು ನಾಡಿನ ಅತ್ಯಂತ ಆಕರ್ಷಕ ಹಾಗೂ ತಾಜಾ ಸುದ್ದಿಗಳನ್ನು ವೇಗವಾಗಿ ಬಿತ್ತರಿಸುತ್ತಿರುವ ಸಂಜೆ ಸಮಯದ ಪತ್ರಿಕೆಯಾಗಿ ಹೊರಹೊಮ್ಮಿದೆ. ಅದರಲ್ಲಿ ವಿಶೇಷವಾಗಿ ಈ ವರ್ಷ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ದಿನದರ್ಶಿಕೆ ಹೊರ ತಂದಿದ್ದು ಖುಷಿ ನೀಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ್ ಮೂಲಗೆ, ಬಾಲಾಜಿ ಅಮರವಾಡಿ, ಶಾಲಿವಾನ ಉದಗಿರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಸ್ತಪ್ಪ, ಸಂಗಪ್ಪ ಘಾಟೆ, ಪ್ರಕಾಶ ಉಚ್ಚೆ, ಚಂದ್ರಕಾಂತ ಘೂಳೆ, ಪ್ರದೀಪ್ ಸ್ವಾಮಿ, ಸಂತೋಷ ಚ್ಯಾಂಡೆಸುರೆ, ಅಂಬಾದಾಸ ನೆಳಗೆ, ತಾಲ್ಲೂಕು ವರದಿಗಾರ ಅಮರಸ್ವಾಮಿ ಸ್ಥಾವರಮಠ ಸೇರಿದಂತೆ ಪತ್ರಕರ್ತರು ಪಾಲ್ಗೊಂಡಿದ್ದರು.