Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದ
ಔರಾದ ಪಟ್ಟಣದ ತಾಲೂಕು ಪಂಚಾಯತಿ ಕಛೇರಿಯಲ್ಲಿ ಇಲ್ಲ ಸ್ವಚ್ಚತೆ.ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ಗ್ರಾಮ ಪಂಚಾಯತಗಳಲ್ಲಿ ಸ್ವಚ್ಚತೆ ಕುರಿತು ಜಾಗ್ರತಿ ಮಾಡುತ್ತಿರುವ ಅಧಿಕಾರಿ ಕಛೇರಿಯಲ್ಲಿಯೆ ಇಲ್ಲ ಸ್ವಚ್ಚತೆ.ಈ ಇಲಾಖೆಗೆ ಸಂಬಂಧ ಪಟ್ಟ ಗ್ರಾಮ ಪಂಚಾಯತ ಹಾಗೂ ಗ್ರಾಮಗಳಲ್ಲಿ ಎಲ್ಲಿ ಸ್ವಚ್ಚತೆ ? ಇದು ಒಂದು ನಾಚಿಕೆ ಗೆಡ ಸಂಗತಿಯಾಗಿದೆ.ಔರಾದ ತಾಲೂಕು ಪಂಚಾಯತ ಅಧಿಕಾರಿ ಮಾಣಿಕರಾವ ಪಾಟೀಲ್ ಅವರ ಗಮನದಲ್ಲಿದರು ಕೂಡಾ ಆಗಲಿಲ್ಲ ಸ್ವಚ್ಚತೆ ಗಬ್ಬು ನಾರುತ್ತಿರುವ ಶೌಚಾಲಯ ಸಿಬ್ಬಂದಿಗೆ ತಪ್ಪಿದ ಕಿರಿಕಿರಿ.
ತಾಲೂಕು ಪಂಚಾಯತಿಯಲ್ಲಿಯೆ ಗಬ್ಬುನಾರುತ್ತಿರುವ ಶೌಚಾಲಯ ತಾಪಂ ಇಲಾಖೆ ವತಿಯಿಂದ ಸರ್ಕಾರ ಪ್ರತಿ ವರ್ಷ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸುತ್ತದೆ ಅರಿವು ಮೂಡಿಸುವ ಅಧಿಕಾರಿಗಳ ಕಛೇರಿಯಲ್ಲಿಯೆ ಶೌಚಾಲಯ ಸೌಲಭ್ಯ ಇಲ್ಲದೆ ಕಛೇರಿಗೆ ಬರುವ ಜನರು ಹಾಗೂ ಸಿಬ್ಬಂದಿ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ.
ಮಳೆ ಬಂದರೆ ಮಿನಿ ಕೆರೆ:- ತಾಲೂಕು ಪಂಚಾಯತಿ ಕಛೇರಿಯಲ್ಲಿ ಬಿದ್ದ ಮಳೆಯ ನೀರು ಹೊರಗೆ ಹೋಗಲು ಚರಂಡಿ ಇಲ್ಲದೆ ನೀರು ನಿಂತು ಗಬ್ಬು ದುರ್ವಾಸನೆ ಬೀರುತ್ತಿದೆ ಸಿಬ್ಬಂದಿ ಗಳು ಮುಗು ಮುಚ್ಚಿಕೊಂಡು ಕಛೇರಿಯಲ್ಲಿ ಕೆಲಸ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ .
ಸಮರ್ಥ ಸೌದ ಸುತ್ತಲೂ ಕೆಸರು :- ತಾಲೂಕು ಪಂಚಾಯತಿ ಕಛೇರಿಯ ಎಡ ಭಾಗದಲ್ಲಿರುವ ಸಮರ್ಥ ಸೌಧ ಕಟ್ಟಡದಲ್ಲಿ ತರಬೇತಿ ಕಾರ್ಯಕ್ರಮ ಸಭೆ ಸಮಾರಂಭಗಳು ನಡೆಯುವ ಕಛೇರಿ ಸುತ್ತಲೂ ಕೆಸರಿನ ನೀರು ಮಿನಿ ಕೆರೆಯಂತೆ ತರಬೇತಿಗೆ ಬರುವ ಜನರಲ್ಲಿ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದೆ.
ಇಲ್ಲಿನ ಶೌಚಾಲಯ ಪ್ರಾರಂಭಿಸಬೇಕು ಇಲ್ಲಿನ ಸ್ಥಳ ಎರಡು ದಿನಗಳಲ್ಲಿ ಸ್ವಚ್ಛ ಗೊಳಿಸಬೇಕು ಇಲ್ಲದಿದ್ದರೆ ಎಲ್ಲಾ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ವತಿಯಿಂದ ಸ್ವಚ್ಛ ಮಾಡಿ ಸಂಭಂಧ ಪಟ್ಟ ಅಧಿಕಾರಿಗಳಿಗೆ ವಜಾಗೊಳಿಸಬೇಕೆಂದು ಪಣ ತೊಟ್ಟಿ ಪ್ರತಿಭಟನೆ ಮಾಡಲಾಗುತ್ತದೆ ಎನ್ನುತ್ತಾರೆ ಎನ್ ಎಸ್ ವಾಯ್ ಎಫ್ ರಾಜ್ಯ ಸಂಚಾಲಕ ಶಿವಕುಮಾರ ಕಾಂಬಳೆಪ್್ರ್್್ರ್ರ್ರ್ರ್ರ್ರ್ರ