Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

*ಶ್ರೀ ಕ್ಷೇತ್ರ ಧರ್ಮಸ್ಥಳ ನೂತನ ಕಛೇರಿ ಉದ್ಘಾಟನೆ*

ಔರಾದ
ಪಟ್ಟಣದ ಎಪಿಎಂಸಿಯ ಮುದ್ದಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ನೂತನ ಕಛೇರಿಯ ಹಾಗೂ ಸೇವಾ ಡಿಜಿಟಲ್‌ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಿನ ತಹಶಿಲ್ದಾರ ಮಲಶೇಟ್ಟಿ ಚಿದ್ರೆ ಎಸ್ ಕೆ ಡಿ ಆರ್ ಪಿ ಯೋಜನೆಯಿಂದ ನಾನಾ ರೀತಿಯ ಸೌಲಭ್ಯಗಳನ್ನು ಗ್ರಾಮೀಣ ಭಾಗದ ಬಡ ನಿರ್ಗತಿಕ ಜನರಿಗೆ ಸಿಗುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ .ಮುಂದಿನ ದಿನಗಳಲ್ಲಿ ಈ ಸಂಸ್ಥೆ ವತಿಯಿಂದ ಹಲವಾರು ಯೋಜನೆಗಳನ್ನು ಬಡವರ ಮನೆಬಾಗಿಲಿಗೆ ಮುಟ್ಟಲಿ ಎಂದರು. ತಾಲೂಕು ಶಿಕ್ಷಕರ ಸಂಘದ ಅದ್ಯಕ್ಷರಾದ ಶಿವಕುಮಾರ ಘಾಟೆ ಮಾತನಾಡಿ ಸರಕಾರದ ಸೌಲಭ್ಯಗಳನ್ನು ಗ್ರಾಮೀಣ ಭಾಗದ ಜನರಿಗೆ ಧರ್ಮಸ್ಥಳ ಸಂಸ್ಥೆ ಯಿಂದ ಸಿಗುತ್ತಿರುವದು ಸಂತೋಷದ ವಿಷವಾಗಿದೆ ಪ್ರತಿಯೊಬ್ಬರು ಈ ಸಂಸ್ಥೆಯ ಯೋಜನೆಗಳು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.ಕ್ಷೇತ್ರ ಧರ್ಮಸ್ಥಳ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಉಮರ ರಬ್ಬಾ ಮಾತನಾಡಿ ಸರ್ಕಾರದೊಂದಿಗೆ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಕೈಜೋಡಿಸಿ ರಾಜ್ಯದಲ್ಲಿ 11 ಸಾವಿರ ಡಿಜಿಟಲ್ ಸೇವಾ ಕೇಂದ್ರಗಳನ್ನು (ಸಿ ಎಸ್ ಸಿ) ತೆರೆದು ನಾಡ ಕಚೇರಿಗಳಲ್ಲಿ ಸಿಗುವಂತ ಸೌಲಭ್ಯಗಳನ್ನು ಬಡವರ ಮನೆ ಬಾಗಿಲಿಗೆ ನಿಡಲಿದ್ದೆವೆ. ಪ್ರಸ್ತುತ ಇ-ಶ್ರಮಿಕ ಕಾರ್ಡಗಳನ್ನು ನಿಡುತ್ತಿದ್ದು ಮುಂದಿನ ದಿನಗಳಲ್ಲಿ ಈ ಕೇಂದ್ರಗಳ ಮುಖಾಂತರ ಪಡಿತರ ಚೀಟಿ, ಆಧಾರ್ ಕಾರ್ಡ,ಆದಾಯ ಪ್ರಮಾಣ ಪತ್ರ,ಜಾತಿ ಪ್ರಮಾಣ ಪತ್ರ ಇನ್ನು ಹಲವು ಸೌಲಭ್ಯಗಳನ್ನು ನೀಡಲಾಗುವುದು ಎಂದರು. ದತ್ತ ಸಾಯಿ ಶನೇಶ್ವರ ಮಂದಿರದ ಅಧ್ಯಕ್ಷರು ಪೂಜ್ಯ ಶ್ರೀ ಶಂಕರಲಿಂಗ ಶಿವಾಚಾರ್ಯ ರು ಅಶಿರವಚನ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾ ಅಧಿಕಾರಿ ಮಾಸ್ತಪ್ಪಾ,ಲೊಕೇಶ ಭಾಲ್ಕೆ,ಸತೀಶ ಮೊಟ್ಟೆ,ಸಂಗಮೇಶ ಕುಪೆಂದ್ರ,ರಾಜಕೂಮಾರ ಬಿರಾದಾರ,ಚಂದ್ರಕಾಂತ ಘುಳೆ,ಬಾಲಾಜಿ ಅಮರವಾಡಿ,ಭಾಗ್ಯ ಶ್ರೀ ಆದೇಶ ಹಾಗೂ ಪತ್ರಕರ್ತರು ಸೇರಿದಂತೆ ಇನ್ನಿತರು ಇದ್ದರು.