Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದ.

ಔರಾದ ಪಟ್ಟಣದ ಬಸವ ಗುರುಕುಲ ಶಾಲೆಯಲ್ಲಿ ದಿನಾಂಕ 22-12-2021 ರಂದುಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ 132ನೇ ಜಯಂತೋತ್ಸವ ಆಚರಿಸಲಾಯಿತು.

ಉದ್ಘಾಟಕರಾದ ಬಾಲಾಜಿ ಅಮರವಾಡಿ ಅಧ್ಯಕ್ಷರು ದಾಸ ಸಾಹಿತ್ಯ ಸ್ವ ಸ್ಥಾಪಕ ಔರಾದ ಮಾತನಾಡಿ,
ನಿಜಾಮರ ದಬ್ಬಾಳಿಕೆ, ವಿರೋಧದ ನಡುವೆ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸುವುದರ ಮೂಲಕ ಕನ್ನಡ ಭಾಷೆ ಜೀವಂತವಾಗಿರಿಸಿ, ಬಸವಾದಿ ಶರಣರ ತತ್ವಗಳನ್ನು ಪಾಲಿಸಿಕೊಂಡು ಬಂದಿರುವ ಲಿಂ. ಡಾ.ಚನ್ನಬಸವ ಪಟ್ಟದ್ದೇವರು ಕನ್ನಡಿಗರ ಮನೆ ದೇವರು ಆಗಿದ್ದಾರೆ,
ಸಮಾಜ ಸುಧಾರಣೆ, ಪ್ರಗತಿಯಲ್ಲಿ ಸರ್ಕಾರಗಳಿಗಿಂತ ಮಠ-ಮಾನ್ಯಗಳ ಪಾತ್ರ ಹಿರಿದಾಗಿದೆ. ಸಮಾಜದಲ್ಲಿನ ಕತ್ತಲೆ, ಜಾತೀಯತೆ, ಮೂಢನಂಬಿಕೆ, ಮೇಲು-ಕೀಳು ಎಂಬ ಭೇದಭಾವ ತೊಡೆದು ಹಾಕಿ ಕಲ್ಯಾಣ ಸಮಾಜವನ್ನು ನಿರ್ಮಿಸಲು 12ನೇ ಶತಮಾನದಲ್ಲಿ ಬಸವಣ್ಣವನರು ಶ್ರಮಿಸಿದ್ದರೆ, 20ನೇ ಶತಮಾನದಲ್ಲಿ ಚನ್ನಬಸವಪಟ್ಟದ್ದೇವರು ಅವಿರತ ಶ್ರಮಿಸಿದ್ದಾರೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಜೀವಂತವಾಗಿರಲು ಪಟ್ಟದ್ದೇವರ ಅಭೂತಪೂರ್ವ ಕಾರ್ಯಗಳೇ ಕಾರಣ. ಲಿಂ.ಚನ್ನಬಸವ ಪಟ್ಟದ್ದೇವರು ಸ್ವತಃ ತಾವೇ ಕಲ್ಲು, ಮಣ್ಣು ಹೊತ್ತು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಿರುವುದು ಮಾದರಿ ಕಾರ್ಯ, ಗುರುವಿನ ಗುಲಾಮರಾದ ಆಗಲೇ ಶಿಕ್ಷಣ ಪಡೆದು ಜೀವನ ಪಾವನವಾಗುತ್ತದೆ, ಗಡಿಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಭಾಲ್ಕಿ ಹಿರೇಮಠ ಸಂಸ್ಥಾನ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳಿಗೆ ಹಾಗೂ ಬಡಜನರಿಗೆ ಸಹಾಯಕರಾಗಿದ್ದಾರೆ ಎಂದು ಎಂದು ಸಂಜುಕುಮಾರ ವಲಾಂಡೆ ಹೇಳಿದ್ದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಮುಖ್ಯಗುರುಗಳು ಇಂದುಮತಿ ಬಿ ಎಡವೆ, ಪ್ರೌಢ ಶಾಲೆಯ ಮುಖ್ಯಗುರುಗಳು ನಿರ್ಮಲಾ ಶೇರಿ, ಐಟಿಐ ಕಾಲೇಜ್ ಪ್ರಿನ್ಸಿಪಾಲರಾದ ಸತೀಷ ಗಂದಿಗುಡೆ,ಡಿಎಡ್ ಪ್ರಿನ್ಸಿಪಾಲ ಶರಣಪ್ಪಾ ನೌವಬಾದೆ.ಅಮರ ದ್ಯಾಡೆ,ರೇಣುಕಾ ಗಂಗೂಜಿ,ರೇಖಾ ನೌಬಾದೆ,ಸಂಗಿತಾ ಪಾಟೀಲ್, ಶ್ರೀದೇವಿ ಕುಲಕರ್ಣಿ, ನಾಗನಾಥ ಶಂಕು,ಮಹೇಶ ಕುಲಕರ್ಣಿ, ಸಂತೋಷ ಮಡಿವಾಳ,ಸಂದೀಪ ಫೂಲೆ, ಮಲ್ಲಿಕಾರ್ಜುನ್ ಮಳ್ಳೆ,ವಾಮನರಾವ ಮಾನೆ,ಸುಮಲತಾ,ಶಕುಂತಲಾ ಜಾಧವ,ಉಪಸ್ಥಿತರಿದ್ದರು.