Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

*ಜೀವದ ಹಂಗನ್ನು ತೊರೆದು ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳು*

ಸಚಿವರ ತವರು ತಾಲ್ಲೂಕಿನಲ್ಲಿ ಇಲ್ಲ ಶಾಲಾ ಮಕ್ಕಳಿಗೆ ಸಾರಿಗೆ ವ್ಯವಸ್ಥೆ

ಎಲ್ಲಿ ಇದ್ದೀರಿ ಸಚಿವರುಗಳೇ ?

ಔರಾದ
ಔರಾದ ತಾಲೂಕಿನ ಸುಮಾರು ಗ್ರಾಮೀಣ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಔರಾದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ಮಕ್ಕಳದಾಗಿದೆ.ಮೊದಲೆ ಕೊವಿಡ್ ನಿಂದ ತತ್ತರಿಸಿದ ಮಕ್ಕಳ ಶಿಕ್ಷಣ ಸರಕಾರ ಕಿತ್ತುಕೊಳ್ಳುವಂತ ವ್ಯವಸ್ಥೆಗೆ ಇಳಿದಿದೆ.ಔರಾದ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಹಲವಾರು ಬಾರಿ ಔರಾದ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರಸಲ್ಲಿಸಿದರು ಅವರು ಊಡಾಫೆ ಉತ್ತರ ನಿಡುತ್ತಿದ್ದಾರೆ ಎಂದು ಅ ಭಾ ವಿ ಪ್ ಪ್ರಮುಖ ಹಾವಪ್ಪಾ ದ್ಯಾಡೆ ಸ್ಪಷ್ಟಿಸಿದ್ದಾರೆ.

ವಿದ್ಯಾರ್ಥಿಗಳು ಶಾಲಾ ಕಾಲೇಜು ಮುಗಿದ ತಕ್ಷಣ ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಬಸ್ಸಿಗೆ ಜೊತಿಕೊಂಡು ಜೀವ ಲೆಕ್ಕಿಸದೆ ಪ್ರಯಾಣ ಮಾಡುತ್ತಿರುವದು ವಿಪರ್ಯಾಸವೆಂದರೆ ಕೇಂದ್ರ ಹಾಗೂ ರಾಜ್ಯ ಸಚಿವರುಗಳ ತವರು ಕ್ಷೇತ್ರದಲ್ಲಿ ಇಂತಹ ಪರಿಸ್ಥಿತಿ ಉಲ್ಬಣವಾದರೆ ಹಳ್ಳಿಗಳ ಪರಿಸ್ಥಿತಿ ಎನಾಗಿರಬಹುದು.? ಔರಾದ ಒಂದು ತಾಲೂಕು  ಕೇಂದ್ರವಾಗಿದ್ದು ಎರಡು ರಾಜ್ಯಗಳಾದ ಮಹಾರಾಷ್ಟ ಹಾಗೂ ತೆಲಂಗಾಣ ಗಡಿ ಹೊಂದಿಕೊಂಡಿದೆ.

ಔರಾದ ಪಟ್ಟಣದಲ್ಲಿ ಎರಡು ಡಿಗ್ರಿ ಕಾಲೇಜುಗಳು,ನಾಲ್ಕು ಪಿ ಯು ಕಾಲೇಜುಗಳು,ಒಂದು ಡಿಪ್ಲೊಮಾ, ಮೂರು ಐಟಿಐ ಕಾಲೇಜು ಇನ್ಮು ಖಾಸಗಿ ಹಾಗೂ ಸರಕಾರಿ ಪ್ರೌಢ ಶಾಲೆ ಹಾಗೂ ಹಲವು ಪ್ರಾಥಮಿಕ ಶಾಲೆಯ ಸೂಮಾರು ಐದನೂರು ಮಕ್ಕಳು  ವಿದ್ಯಾಭ್ಯಾಸಕ್ಕಾಗಿ ಔರಾದ ಪಟ್ಟಣಕ್ಕೆ ಬರುತ್ತಾರೆ. 

ಇನ್ನು ಔರಾದ ಘಟಕ ವ್ಯವಸ್ಥಾಪಕ ನಯುಮ ಪಟೇಲ್ ಅವರಿಗೆ ಕೇಳಿದಾಗ ಚಾಲಕರು ಎರಡು ತಿಂಗಳಿಂದ ಸಂಬಳವಿಲ್ಲದೆ ಬೆಸತ್ತು ಕೇಲಸಕ್ಕೆ ಬರುತ್ತಿಲ್ಲ ವೇಂದು ಹೇಳಿಕೆ ನೀಡಿದರು.ಮಕ್ಕಳು ಬಸ್ಸಿಗೆ ಜೊತಾಡಿಕೊಂಡು ಹೊಗುವದನ್ನು ನೋಡಿ ಜನಸಾಮಾನ್ಯರು ಬೇಸರ ವ್ಯಕ್ತಪಡಿಸಿದರು.ಇನ್ನಾದರು ಸಾರಿಗೆ ಇಲಾಖೆಯು ವಿದ್ಯಾರ್ಥಿ ಸಮಸ್ಯೆಗೆ ಸ್ಪಂದಿಸಿ ಸರಿಯಾಗಿ ಹೆಚ್ಚಿನ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ಬರಲು ಅನುಕೂಲ ಮಾಡಿಕೂಡುವಲ್ಲಿ ಯಶಸ್ವಿಯಾಗಬೇಕು ಇಲ್ಲದೆ ಇದ್ದಲ್ಲಿ ಔರಾದ ಸಾರಿಗೆ ಘಟಕಕ್ಕೆ ಮುತ್ತಿಗೆ ಹಾಕಿ ಹೊರಾಟ ಮಾಡಲಾಗುವದು ಎಂದು ವಿದ್ಯಾರ್ಥಿ ಪ್ರಮುಖ ಅನೀಲ ಮೇತ್ರೆ ತಿಳಿಸಿದರು.