Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಾಡ ಬಾವುಟವನ್ನು ಸುಟ್ಟುಹಾಕಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ದುಷ್ಕೃತ್ಯ. ಧ್ವಜವನ್ನು ಸುಟ್ಟುಹಾಕಿ ವಿಕೃತಿ ಮೆರೆದಿರುವುದು ಅತ್ಯಂತ ನೀಚ.
ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಾಡಧ್ವಜದ ವಿಚಾರದಲ್ಲಿ ಈ ರೀತಿಯ ಘಟನೆ ಸಹಿಸಲು ಸಾಧ್ಯವಿಲ್ಲ ಕನ್ನಡದಲ್ಲಿ ಕನ್ನಡಿಗರ ಸ್ವಾಭಿಮಾನದ ಸಂಕೇತ ಕನ್ನಡಕ್ಕೆ ಅಪಮಾನವಾದರೆ ಕರ್ನಾಟಕದ ಅಸ್ಮಿತೆಗೆ ದಕ್ಕೆಯಾದಂತೆ ಪವಿತ್ರ ಧ್ವಜವನ್ನು ಸುಟ್ಟಿರುವುದು ಯಾರು ಸಹಿಸಲಾಗದು. ಈ ಮೂಲಕ ಕನ್ನಡವನ್ನು ಉಳಿಸುವ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಹೆಜ್ಜೆ ಇಡಲಿ ಎಂದು ಖ್ಯಾತ ಚಿತ್ರನಟ ಹಣ್ಮು ಪಾಜಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಕರ್ನಾಟಕ ಸರ್ಕಾರ ಪರಿಗಣಿಸಬೇಕು.
ನಾಡ ಧ್ವಜ ಸುಟ್ಟು ಹಾಕಿದ ನಾಡ ದ್ರೋಹಿಗಳನ್ನು ಗಡಿ ಪಾರು ಮಾಡಿ.ಕನ್ನಡ ನಾಡು ನುಡಿ,ಕನ್ನಡಿಗರ ಅಸ್ಮಿತೆಯನ್ನು ಪದೆ ಪದೆ ಕೆಣಕುವ ಮೂಲಕ ಕನ್ನಡಿಗರ ತಾಳ್ಮೆಯನ್ನು ಪರಿಕ್ಷಿಸುತ್ತಿರುವ ಎಮ್.ಇ.ಎಸ್ ಪುಂಡರ ಸೊಕ್ಕನ್ನು ಅಡಗಿಸಬೆಕಿದೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಾಡ‌ ಭಾವುಟ ಸುಟ್ಟು ಹಾಕಿದ ಆರೊಪಿಗಳನ್ನು ಈ ಕೂಡಲೆ ಬಂದಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಇಲ್ಲವಾಗಿದರೆ ನಾಡಿನದ್ದುಕ್ಕು ಕನ್ನಡಿಗರು ಬೆಳಾಗಿವಿಗೆ ತೆರಳಿ ಎಮ್.ಇ.ಎಸ್.ಪುಂಡರ ಮದ ಅಡಗಿಸಬೆಕಾಗುತ್ತದೆ
ಕನ್ನಡ ಧ್ವಜ ಕನ್ನಡಿಗರ ಸ್ವಾಭಿಮಾನದ ಸಂಕೇತ. ಕನ್ನಡ ಧ್ವಜಕ್ಕೆ ಅಪಮಾನವಾದರೆ ಅದು ಕರ್ನಾಟಕದ ಅಸ್ಮಿತೆಗೆ ಧಕ್ಕೆಯಾದಂತೆ. ಇಂತಹ ಪವಿತ್ರ ಧ್ವಜವನ್ನು ಸುಟ್ಟಿರುವುದು ಯಾರೂ ಸಹಿಸಲಾಗದ ವಿಷಯ. ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ
ಎಂಇಎಸ್‌ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ದುಷ್ಕೃತ್ಯ. ಧ್ವಜವನ್ನು ಸುಟ್ಟು ಹಾಕಿ ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಈ ರೀತಿಯ ಘಟನೆ ಸಹಿಸಲು ಸಾಧ್ಯವಿಲ್ಲ ಇಂತಹ ನಾಡು ದ್ರೋಹಿಗಳ ರಾಜ್ಯದಿಂದ ಗಡಿಪಾರು ಮಾಡಿ ಎಂದು ಚಿತ್ರನಟ ಹಣ್ಮು ಪಾಜಿ ಬೀದರ ಜನತೆ ಪರವಾಗಿ ಆಗ್ರಹಿಸಿದ್ದಾರೆ.