Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

 

ನಾಲಂದಾ ಶಾಲೆಯಲ್ಲಿ ಮಹಾಪರಿನಿರ್ವಣ ದಿನ ಆಚರಣೆ

ಪಟ್ಟಣದ ನಾಲಂದಾ ಸಂಯುಕ್ತ ಪ ಪೂ ಮಹಾವಿದ್ಯಾಲಯ ಹಾಗೂ ವೈದ್ಯಕೀಯ ಶಾಲೆ ಸಂಯುಕ್ತಾಶ್ರಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ಪುಣ್ಯ ಸ್ಮರಣೆ ನಿಮಿತ್ಯ ಮಹಾಪರಿನಿರ್ವಣ ದಿನ ಆಚರಿಸಲಾಯಿತು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಸ್ಥೆಯ ಅದ್ಯಕ್ಷರಾದ ಕೆ ಪುಂಡಲೀಕರಾವ ವಹಿಸಿದ್ದರು.ಅದೇರಿತಿ ಮುಖ್ಯ ಭಾಷಣಕಾರರಾಗಿ ಇದೇ ಸಂಸ್ಥೆಯ ವಿದ್ಯಾರ್ಥಿ ನಂದಾದೀಪ ಬೊರಳೆ ಸಹ ವಿಸ್ತಾರವಾಗಿ ಬಾಬಾ ಸಾಹೇಬರು ನಡೆದು ಬಂದ ದಾರಿ ದಲಿತರಿಗೆ ನೀಡಿದ ಕೊಡುಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.


ಇನ್ನೊರರ್ವ ಅತಿಥಿ ಶಿವಾಜಿರಾವ ಪಾಟೀಲ್ ಮುಂಗನಾಳ ಮಾತನಾಡಿ ಅಂಬೇಡ್ಕರ್ ಅವರ ಜೀವನ ಶೈಲಿಯನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅವರು ಬರೆದ ಸಂವಿಧಾನವು ಸಮಾನತೆಯನ್ನು ತೋರಿಸಿಕೊಟ್ಟಿದೆ. ಸಾಮಾನ್ಯ ವ್ಯಕ್ತಿ ಕೂಡ ರಾಷ್ಟಪತಿ ಆಗಬಲ್ಲನ್ನು ಅನ್ನುವುದಕ್ಕೆ ಅವರು ಬರೆದ ಸಂವಿಧಾನವೆ ಸಾಕ್ಷಿ ಎಂದರು.ಪ ಪಂಚಾಯತ್ ಅದ್ಯಕ್ಷೆ ಅಂಬಿಕಾ ಪವಾರ ಮಾತನಾಡಿ ಅಂಬೇಡ್ಕರ್ ಅವರ ಪುಸ್ತಕ ಓದುವದರ ಜೋತೆಗೆ ಮೈಗೂಡಿಸಿಕೊಂಡು ಅವರು ಪಡೆದಿರುವ ಪದವಿಗಳ ಹಾಗೆ ತಾವು ಪಡೆದು ದೇಶಕ್ಕೆ ಮಾದರಿಯಾಗಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅದ್ಯಕ್ಷರಾದ ಕೆ ಪುಂಡಲಿಕರಾವ ಮಾತನಾಡಿ ಡಾ ಬಾಬಾ ಸಾಹೇಬ್ ಕೂಡುಗೆ ಅಪಾರವಾದದ್ದು ಜಗತ್ತಿನಲ್ಲಿಯೇ ಬಹುರಾಷ್ಟ್ರಗಳು ಸ್ಮರಿಸುವಂತ ದಿನವಾಗಿದೆ ದೇಶವನ್ನೆ ನಡೆದು ಕೊಂಡು ಹೊಗುವಂತ ದಾರಿ ತೋರಿಸಿ ಕೊಟ್ಟವರು ಬಾಬಾ ಸಾಹೇಬರು ಎಂದು ನುಡಿದರು. ಕಾರ್ಯಕ್ರಮವನ್ನು ಜೆ ಎಸ್ ಬಿರಾದಾರ ನಿರೂಪಿಸಿದರು ನಂರಸಿಗರಾವ ಬೆಲ್ದಾಳೆ ವಂದಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿ,ಹಿರಿಯ ಮುಖಂಡ ರಾಮಣ್ಣಾ ವಡಿಯಾರ,ಡಾ ಫಯಾಜ ಅಲಿ,ಬಾಬುರಾವ ತಾರೆ,ಮಲ್ಲಿಕಾರ್ಜುನ ಪಟ್ನೆ,ಗೋವಿಂದ ರಾವ ಶಿಂಧೆ,ಮುಖ್ಯಗುರುಗಳಾದ ವಿಶಂಬರಾವ ಕಾಂಬಳೆ,ಶಿಕ್ಷಕರಾದ ಎನ್ ಟಿ ಚಿಟ್ಮೆ,ಮಲ್ಲಿಕಾರ್ಜುನ ಪೂಜಾರಿ ,ಶಿಕ್ಷಕಿ ಇಂದುಮತಿ ಪಟ್ನೆ,ಜೋತಿ ಘುಳೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು