Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ರಾಮನಾಥಪುರದ ರಥೋತ್ಸವ ನಡೆಸಲು ಗ್ರೀನ್ ಸಿಗ್ನಲ್

ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಗ್ರಾಮಸ್ಥರು

ರಾಮನಾಥಪುರ-  ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಹಾಗೂ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿವತಿಯಿಂದ ಅರಕಲಗೂಡು ಕ್ಷೇತ್ರದ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ನಡೆಸಲು ದಿನಾಂಕ  ಡಿ. 9  ರಂದು ಗುರುವಾರ ರಾಜ ಬೀದಿಯಲ್ಲಿ ರಥ ಎಳೆಯಲು ಹಾಸನ ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಅನುಮತಿ ನೀಡಿದ ಜಿಲ್ಲಾಧಿಕಾರಿಗಳು ಇವರಿಗೆ ತಾಲೂಕಿನ ಜನರ ಪರವಾಗಿ ಮತ್ತು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು.

ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ರಾಮನಾಥಪುರದ ರಥೋತ್ಸವ ನಡೆಸಲು ಅನುಮತಿ ಕೊಟ್ಟಿದ್ದು ತಾಲೂಕಿನ ಜನರಿಗೆ ತುಂಬಾ ಸಂತೋಷ ವಾಗಿರುತ್ತದೆ ಸಾರ್ವಜನಿಕರಲ್ಲಿ ಈ ಮೂಲಕ ತಿಳಿಸುವುದೇನೆಂದರೆ ಭಕ್ತಾದಿಗಳು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಜಾತ್ರಾಮಹೋತ್ಸವವನ್ನು ಆಚರಿಸೋಣ,  ಜಿಲ್ಲಾಧಿಕಾರಿಗಳ ಕಚೇರಿಗೆ  ಡಾ. ಎಸ್ ರಾಘವೇಂದ್ರ ಗೌಡ್ರು,
ಕಾವೇರಿ ಸ್ವಚ್ಛತಾ ಸ್ವಚ್ಚತಾ  ಆಂದೋಲನ ಸಮಿತಿ ಜಿಲ್ಲಾ ಅಧ್ಯಕ್ಷರು ರಾಮನಾಥಪುರ ಎಂ.ಎನ್.  ಕುಮಾರಸ್ವಾಮಿ, ಕೊಣನೂರು ಅಮೃತೇಶ್ ಮನವಿ ಮಾಡಿದ ಅನುಮತಿ ಕೋರಿಕೆ ಮೇರೆಗೆ  ಅನುಮತಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಇವರಿಗೆ ಗ್ರಾಮಸ್ಥರು ಹಾಗೂ ತಾಲ್ಲೂಕಿನ ಜನರ ಪರವಾಗಿ ಕೃತಜ್ಞತೆಗಳು.