Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಕೊಪ್ಪಳ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಬಿಜಕಲ್ ಗ್ರಾಮದಲ್ಲಿ ಬೇವಿನ ಮರದಿಂದ ಬಿಳಿ ದ್ರವ ಸುರಿಯುತ್ತಿದ್ದರು, ಇದಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ.ಬಿಜಕಲ್ ಗ್ರಾಮದ ಗೋಪಾಲರಾವ್ ದೇಸಾಯಿ ಅವರ ಹೊಲದಲ್ಲಿ ಈ ಬೇವಿನ ಮರವಿದೆ. ಇದೊಂದು ಪವಾಡ ಎಂದು ನಂಬಿ, ಜನರು ಪೂಜೆ ಸಲ್ಲಿಸುತ್ತಿದ್ದಾರೆ.

ಮರದ ಬುಡದಲ್ಲಿ ಕಲ್ಲುಗಳನ್ನಿಟ್ಟು ಗದ್ದಿ ದ್ಯಾಮಮ್ಮ ದೇವಿ ಪ್ರತಿಷ್ಠಾಪಿಸಿ ಅಲ್ಲಿಯೂ ಗ್ರಾಮಸ್ಥರು ‍ಪೂಜೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲದೇ ಇಂಥದ್ದೊಂದು ಪವಾಡದಿಂದ ತಮಗೆ ಒಳ್ಳೆಯದಿದೆಯೋ, ಕೆಡುಕೋ ಎಂಬ ಕುರಿತು ಜ್ಯೋತಿಷಿಗಳ ಮನೆಗೂ ಗ್ರಾಮಸ್ಥರು ಹೋಗುತ್ತಿರುವುದಾಗಿ ವರದಿಯಾಗಿದೆ. ವಿಶೇಷ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಜ್ಯೋತಿಷಿಗಳ ಹೇಳುತ್ತಿರುವ ಕಾರಣ, ಜನರು ಇಲ್ಲಿ ಪೂಜೆ ಸಲ್ಲಿಸಲು ಮುಗಿ ಬಿದ್ದಿದ್ದಾರೆ.