Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

850 ನೇ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿಮಿತ್ತವಾಗಿ ಎಕಂಬಾ ಗ್ರಾಮದಲ್ಲಿ ವಿವಿದೆಡೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಯುವ ಮುಖಂಡರಾದ ಅಮರ ಜಾಧವ, , ಈ ಪ್ರಯುಕ್ತ ಭೋವಿ ವಡ್ಡರ ಸಮಾಜದ ಯುವ ಮುಖಂಡ ಬಾಲಾಜಿ ಕಾಸಲೆ, ಮಾತನಾಡಿ, 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಲಾಯಿತು. ಪುಷ್ಪ ನಮನ ಸಲ್ಲಿಸಲಾಯಿತು. ಅಮರ ಅ ಜಾಧೆವ ಜ್ಞಾನೇಶ್ವರ ಬಿರಾದಾರ, ಯೋಗೇಶ ಸುರನರ, ಜ್ಞಾನೇಶ್ವರ ಪೋಲಕೆವಾ,
ಶ್ರೀ ಶೇಷರಾವ ಪವಾರ, ಆಕಾಶ ಪವರ, ದಿಲೀಪ ಕಾಸಲೆ, ರಾಜಕುಮಾರ ಕಾಸಲೆ ಹಿರಿಯ ಮುಖಂಡರಾದ ಶ್ರೀ ಶೇಷರಾವ ಕಾಸಲೆ, ಸುಭಾಷ ಪವಾರ, ಸುಭಾಷ, ಸಂಕೂಷ ಪವಾರ, ರಂಗರಾವ ಕಾಸಲ, ಲಕ್ಷಮನ ಪವಾರ, ರಾಮಣ್ಣ ಕಾಸಲೆ, ವೆಂಕಟ ಕಾಸಲೆ,ವೈಜಿನಾಥ ಪವಾರ,ರಮೆಶ,ಅಕಾಶ, ಉಪಸ್ಥಿತರಿದ್ದರು..
ವಿಶೇಷವಾಗಿ ಎಕಂಬಾ ಪಟ್ಟಣದ ಭೋವಿ ಜನಾಂಗದ ಮನೆಗಳಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.