Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದನಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿ

ಪ್ರಭು ಚವ್ಹಾಣ ಮುಂದಿನ ಚುನಾವಣೆ ವಿರೋಧಿ ಯಾರ ಗೊತ್ತಾ?

ಔರಾದನಲ್ಲಿ ತಾರಕ್ಕೇರುತ್ತಿದೆ ಚುನಾವಣಾ ಪೂರ್ವ ತಯಾರಿ

ಬೀದರ:
ಜಿಲ್ಲೆಯ ಔರಾದ ಮೀಸಲು ಕ್ಷೇತ್ರದ ಚುನಾವಣೆಗೆ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂದು ಔರಾದ ತಾಲೂಕಿನ ಕೌಠಾ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಕಾಂಗ್ರೇಸ್ ಪಕ್ಷದ ಮುಖಂಡ ವಿಶ್ವನಾಥ ದಿನೆ ಅವರ ನೇತ್ರತ್ವದಲ್ಲಿ ಕಾಂಗ್ರಸ್ ಪರಿಶಿಷ್ಟ ಜಾತಿ ಪ್ರಮುಖರ ಸಭೆ ಜರುಗಿತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಕುರಿತು ಮುಖಂಡರ ಸಭೆ ಜರುಗಿತು. ಪಕ್ಷ ಸಂಘಟನೆಗೆ ಸ್ಥಳೀಯರು ಶ್ರಮಪಡುತ್ತಿದ್ದಾರೆ ಆದರೆ ಇನ್ನೂ ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಕೆಲವು ಅಭ್ಯರ್ಥಿಗಳು ಟಿಕೆಟ್ ಪಡೆಯಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ನಾವು ಮಾತ್ರ ಸುಮ್ಮನಿರುವುದಿಲ್ಲ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಇದ್ದಾಗಿದ್ದು ಚುನಾವಣೆ ಕಣದಿಂದ ಒಡಿ ಹೋಗುವವರಿಗೆ ಟಿಕೆಟ್ ನೀಡದೆ ಎಡ ಬಲ ಎನ್ನದೆ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಔರಾದ ಕ್ಷೇತ್ರದಲ್ಲಿ ಕಾರ್ಯಕರ್ತರು ಸೇರಿದಂತೆ ಮತದಾರರು ಸಾಕಷ್ಟು ಇದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಿದೆ. ಪರಿಶಿಷ್ಟ ಜಾತಿ ಸಮುದಾಯ ಒಗ್ಗಟ್ಟಾಗಿ ಕೆಲಸ ಮಾಡಬೇಕು ಗೆಲುವು ನಮ್ಮದೆ ಎಂದು ಪ್ರಮುಖರು ತಿಳಿಸಿದರು. ಚುನಾವಣೆಗೆ ಸಿದ್ದರಾಗಬೇಕು ಎಂದು ಸೂಚಿಸಲಾಯಿತು. ಮುಖಂಡರಾದ ಬಾಬು ತಾರೆ. ಅಂಜರಡ್ಡಿ. ಧನರಾಜ ಮುಸ್ತಾಪೂರೆ. ಪ್ರಕಾಸ ಶಿಂಧೆ. ಅಶೋಕ ದರಬಾರೆ. ಸೂರ್ಯಕಾಂತ ಸಾದುರೆ. ಶಿವ ಮೂರ್ತಿ ಬಳತ. ರಮೇಶ ಶಳಕೆ. ಪ್ರವಿಣ ಕದಮ್. ತುಕಾರಾಮ ಹಸನ್ಮುಖಿ. ನಿತೀಷ ಸಕ್ಪಾಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.